-
Chinumaya Muruti Suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಮೇಯ ಭಾಗ ಸುಳಾದಿರಾಗ: ದೇಶ್ ಧ್ರುವತಾಳಚಿನುಮಯ ಮೂರುತಿ ಚಿತ್ರ ವಿಚಿತ್ರನೆಘನಮಹಿಮ ಗಂಭೀರ ಕೀರ್ತಿ ದೋಷ ದೂರಅನಿಮಿತ್ತ ಬಂಧು ದ್ರೌಪದಿ ಮಾನದೊಡಿಯಾಗುಣಗಣ ಭರಿತ ಸೃಷ್ಟ್ಯಾದ್ಯಷ್ಟಕರ್ತನೆಸನಕಾದಿಗಳೊಡೆಯ ಜ್ಞಾನಾನಂದ ಪೂರ್ಣದಿನಕರ ಶತತೇಜ ದೀನ ಜನರ ಪಾಲದನುಜಮರ್ದನರಂಗ ಧರ್ಮಜನುತ ಪಾಲತನುಮನದೊಡೆಯ ಏ ತಾತ ಭಕ್ತವತ್ಸಲಅಣೋರಣೀಯಾನ್ ಎಂಬೊ ಶ್ರುತಿಪಾದ್ಯ ಅಪ್ರಾಕೃತಜನನ ಮರಣ ರಹಿತ ಜಾನಕೀ ರಮಣನೆಕೊನೆಗಾಣರು ನಿನ್ನ ಗುಣ ಎಣಿಸಿ ಅಜಭವರುಇನಿತು ವರ್ಣಿಸೆ ನಿನ್ನ ಎನಗಳವಲ್ಲವುನಿನಗೆ ನೀ ಕರುಣಿಸಿ ನಿನ್ನ ಭಕ್ತರನ್ನಘನತೆ ಮಾಡುವಿ ಎಣೆಯಾರು ನಿನಗಿನ್ನುದಿನಕರ ಶಶಿಗಳು ನಿನ್ನ ಆಜ್ಞೆಯಿಂದದಿನವ…
