-
Budhavarada Suladi – Sheshadasaru
Raga:Darbarikanada ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ (ಗುರುವಿಜಯವಿಠ್ಠಲ ಅಂಕಿತ)ಬುಧವಾರದ ಸುಳಾದಿರಾಗ: ದರ್ಬಾರಿಕಾನಡ ಧ್ರುವತಾಳ ಇಷ್ಟು ನಿರ್ದಯವ್ಯಾಕೊ ಎಲೆ ಎಲೆ ಆಪ್ತನಾದಕೃಷ್ಣ ನಿನಗೆ ನಾನು ದೂರಾದವನೇಘಟ್ಟಿ ಮನಸಿನವ ನೀನಲ್ಲ ಎಂದಿಗೂ ಎನ್ನ ಅ –ದೃಷ್ಟ ಲಕ್ಷಣವೆಂತೊ ತಿಳಿಯದಯ್ಯಾಸೃಷ್ಟಿಯೊಳಗೆ ಭಕುತ ವತ್ಸಲನೆಂಬೊಶ್ರೇಷ್ಠವಾದ ಬಿರಿದು ಇಲ್ಲವೇನೋಶಿಷ್ಟ ಜನರ ಸಂಗ ವರ್ಜಿತನಾಗಿ ನಿನ್ನಮುಟ್ಟಿ ಭಜಿಸದಿಪ್ಪ ಹೀನನೆಂದುಬಿಟ್ಟು ನೋಡಿದರೆ ಮತ್ತಿಷ್ಟು ಅಧಿಕವಾದದುಷ್ಟ ನಡತಿಯಿಂದ ಬದ್ಧನಾಹಪ್ರೇಷ್ಟ ಯೋಗ್ಯವಾದ ಕಾಲವ ನಿರೀಕ್ಷಿಸೆಎಷ್ಟು ಕಲ್ಪಗಳಿಗೆ ಭವದಾಲಿಂದಸಿಷ್ಟವಾಗುವನೇನೊ ಅಭೀಷ್ಟವೈದುವನೆಂತೋದೃಷ್ಟಿಲಿ ನೋಡದಿರೆ ಅಜಭವಾದ್ಯರುಕಷ್ಟವೈದುವರು ನಿಜಸುಖವಿಲ್ಲದಲೆವಿಷ್ಣು ನಿನ್ನಯ ಮಹಿಮೆ ಇನಿತು ಇರಲುಎಷ್ಟರವರಯ್ಯಾ ಮಿಕ್ಕಾದ ಭಕ್ತರೆಲ್ಲತುಷ್ಟನಾಗಿ…
