-
Devadi dEva Shri trivikrama
Composer: Shri Vishwendra tirtharu [Sode Matha – Rajesha hayamuka ankita] ದೇವಾದಿದೇವ ಶ್ರೀ ತ್ರಿವಿಕ್ರಮರಾಯದ್ಯಾವಾಭೂಮಿಗಳ ಮ್ಯಾಲ್ನಿನ್ನ ಕಾಯ ||ಪಾದನಖಾಗ್ರದಿ ಬ್ರಹ್ಮಾಂಡವನ್ನುಭೇದಿಸಿ ಗಂಗೆಯ ಜನಿಸಿರ್ದ ಕಾಯ [ಪ] ಅಣುರೂಪದಿಂದಿದ್ದು ಕ್ಷಣದೊಳಗದ್ಭುತರೂಪವ ಧರಿಸಿ ಬಲಿಯ ಬಂಧಿಸಿದಿ |ರಣ ಶಬ್ದವಿಲ್ಲದೆ ಸರ್ವ ಸಾಮ್ರಾಜ್ಯವ –ನಗ್ರಜಗಿತ್ತಿಹ ಕಾರ್ಯವಾಶ್ಚರ್ಯ [೧] ವಾದಿರಾಜರಿಗೆ ನೀ ಒಲಿದು ಶ್ರೀ ಸೋದೆಯೊಳ್ನಿಂತಿದ್ದ ತೆರವತಿ ಚೋದ್ಯವಾಗಿಹುದು |ಕದನವಾಗಿಲ್ಲ ಭೂಭುಜರಲ್ಲಿ ಒಲಿದುದುಹರಿಭಕ್ತರ್ಗತಿ ತೋಷಕಾರ್ಯ [೨] ಕಂಜಾಕ್ಷ ಶ್ರೀಕೃಷ್ಣಗೋಲೆಯರ್ಪಿಸಿದರಾಜೇಶ ಹಯಮುಖ ದಾಸರೆಂದೆನಿಪ |ರಾಜ್ಯದೊಳಗತಿ ಮಾನ್ಯ ವಾದಿರಾಜರ ಭಾಗ್ಯದೇವಾದಿದೇವ ಶ್ರೀ ತ್ರಿವಿಕ್ರಮರಾಯ…
-
Bhutaraja karuniso
Composer: Shri Vishvendra teertharu ( Rajesha hayamukha) ಭೂತರಾಜ ಕರುಣಿಸೊ ಭೂತರಾಜಮುಂದೆ ಬೆಳ್ಳಿಯ ಗಿರಿನಾಥನೆಂದೆನಿಸುವಭೂತರಾಜ [ಪ] ವಾದದಿಂದಲಿ ಸೋತುವಾದಿರಾಜರ ಸೇರ್ದೆ ಭೂತಾದಿಗಳಬೇಗದಿಂದಲೋಡಿಸುವಿ [೧] ವಾದಿರಾಜರ ಬಲಭಾಗದಿ ನಿಂತಿರ್ದೆಬಂದ ಜನರಿಗಿಷ್ಟಕೊಟ್ಟು ಪೋಷಿಸುವಿ [೨] ರಾಜೇಶ ಹಯಮುಖ-ನೊಲಸಿ ಕೊಂಡಿಹ ಋಜುಗಣನಾಥ ಶ್ರೀವಾದಿರಾಜಕಿಂಕರವರ್ಯ [೩] BUtarAja karuNiso BUtarAjamuMde beLLiya girinAthaneMdenisuvaBUtarAja [pa] vAdadiMdali sOtuvAdirAjara sErde BUtAdigaLabEgadiMdalODisuvi [1] vAdirAjara balaBAgadi niMtirdebaMda janarigiShTakoTTu pOShisuvi [2] rAjESa hayamuKa-nolasi koMDiha RujugaNanAtha SrIvAdirAjakiMkaravarya [3]
-
Vara mantralayadolu
Composer : Shri Vishwendra Tirtharu ವರ ಮಂತ್ರಾಲಯದೊಳು ಘನವಾಗಿ ನೆಲಸಿರ್ಪ |ಪರಮ ಸದ್ಗುರುವರ್ಯ ಶ್ರೀರಾಘವೇಂದ್ರ ||ಪ|| ಭುವನಾದ್ರಿಯೋಳಗುದುಭವಿಸುತ್ತ ರವಿಯಂತೆ |ತವಕದಿಂ ದಿನದಿನವು ತೇಜವನು ಬೆಳಗುವೆ ||೧|| ನರನಂತೆ ಮೆರೆಯುವ ಜಯಮುನಿಕೃತ ಶಾಸ್ತ್ರ |ಪರಿಮಳವನು ನೀನು ಪಸರಿಸಿದೆಯಲ್ಲವೆ ||೨|| ಮಧ್ವಮತವೆಂಬ ದುಗ್ಧ ಸಾಗರದೊಳು |ಉದ್ಭವಿಸಿದ ಪೂರ್ಣಹಿಮಕರ ತೇಜ ||೩|| ಅಸುರ ನಂದನನಾಗಿ ನರಹರಿಯನೆ ಕಂಡ |ವ್ಯಾಸರಿವರು ಸಿರಿಗುರು ರಾಘವೇಂದ್ರ ||೪|| ರಾಜೇಶ ಹಯಮುಖ ಭಜಕರೊಳಗೆ ನೀನು |ರಾಜಿಪ ಸುರತರುವಂತಿರ್ಪೆ ಗುರುವೆ ||೫|| vara maMtrAlayadoLu GanavAgi nelasirpa…
