-
Devi ambujavalli ramanane
Composer : Shri Gopaladasaru ದೇವಿ ಅಂಬುಜವಲ್ಲಿ ರಮಣನೆ |ಭೂವರಾಹ ದಯಾನಿಧೇ ||ಪವಮಾನನ ದಿವ್ಯ ಕರದಲಿ |ಸೇವೆ ಸಂತತಗೊಳ್ಳುವಿ ||೧|| ಅವನಿಯೊಳು ಶ್ರೀಮುಷ್ಣ ಕ್ಷೇತ್ರದಿ |ನೀ ವಿಹಾರವ ಮಾಡುವಿ ||ಭವವಿಮೋಚಕ ಭಕ್ತವತ್ಸಲ |ಕವಿಗಳಿಗೆ ಕರುಣಾಕರ ||೨|| ಅತ್ಯಗಾಧ ಸುಶೀಲ ಜಾಹ್ನವಿ |ಸುತ್ತು ಷೋಡಶ ತೀರ್ಥದಿ ||ನಿತ್ಯ ಪುಷ್ಕರಣಿಯ ಗರ್ಭದಿ |ನಿತ್ಯ ಇರುವುದ ಕಂಡೆ ನಾ ||೩|| ಮತ್ತು ವಂದಿಪೆ ತೀರ್ಥ ತಟದಲಿ |ಉತ್ತಮಾಗ್ನೇಯ ಭಾಗದಿ ||ಚಿತ್ತವೇದ್ಯದಿ ಕಲ್ಪತರುಅಶ್ವತ್ಥ ರೂಪದಿ ಇರುವನ ||೪|| ಕರಗಳೆರಡನು ಕಟಿಯಲಿಟ್ಟು |ಕೋರೆಹಲ್ಲನೆ ತೋರುತ…
