-
Ollano Hari koLLano
Composer : Shri Purandara dasaru ಒಲ್ಲನೋ ಹರಿ ಕೊಳ್ಳನೋಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ |ಪ| ಸಿಂಧು ಶತಕೋಟಿ ಗಂಗೋದಕವಿದ್ದುಗಂಧ ಸುಪರಿಮಳ ವಸ್ತ್ರವಿದ್ದುಚಂದುಳ್ಳ ಆಭರಣ ಧೂಪದೀಪಗಳಿದ್ದುಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ |೧| ದಧಿ ಕ್ಷೀರ ಮೊದಲಾದ ಅಭಿಷೇಕಗಳಿದ್ದುಮಧುಪರ್ಕ ಪಂಚೋಪಚಾರವಿದ್ದುಮುದದಿಂದ ಮುದ್ದು ಶ್ರೀ ಕೃಷ್ಣನ ಪೂಜೆಗೆಸದಮಲಳಾದ ಶ್ರೀ ತುಳಸಿ ಇಲ್ಲದ ಪೂಜೆ |೨| ಮಂತ್ರ ಮಹಾಮಂತ್ರ ಪುರುಷಸೂಕ್ತಗಳಿದ್ದುತಂತು ತಪ್ಪದೆ ತಂತ್ರಸಾರವಿದ್ದುಸಂತತ ಸುಖ ಸಂಪೂರ್ಣನ ಪೂಜೆಗೆಅತ್ಯಂತ ಪ್ರಿಯಳಾದ ತುಳಸಿ ಇಲ್ಲದ ಪೂಜೆ |೩| ಕಮಲ ಮಲ್ಲಿಗೆ ಜಾಜಿ…
-
Yatakayya tirtha kshetragalu
Composer : Shri Vadirajaru ಯಾತಕಯ್ಯ ತೀರ್ಥಕ್ಷೇತ್ರಗಳುಶ್ರೀ ತುಲಸಿಯ ಸೇವಿಪ ಸುಜನರಿಗೆ ||ಪ|| ಅಮೃತವ ಕೊಡುವ ಹರುಷದೊಳಿರ್ದಕಮಲೆಯರಸನ ಅಕ್ಷಿಗಳಿಂದಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧ್ದಿಯೊಳುಆ ಮಹಾತುಲಸಿ ಅಂದುದಿಸಿದಳು ||೧|| ಪರಿಮಳಿಸುವ ಮಾಲೆಯ ನೆವದಿಹರಿಯುದರದಲ್ಲಿ ಸಿರಿಯೊಲಿಹಳುತರುಣಿ ತುಲಸಿ ತಪ್ಪದೆಯವನಚರಣವ ರಮೆ ಭಜಿಸೆ ಭಜಿಪಳು ||೨|| ಪೂಜಿಸುವರ ಶಿರದಿ ನಿರ್ಮಾಲ್ಯಗಳವ್ಯಾಜದಿಂದ ಲಕ್ಷ್ಮಿಯ ಕೂಡೆ ಬಹಳುಈ ಜಗದೊಳು ತಾವಿಬ್ಬರಿದ್ದಲ್ಲಿ ಆಜನಾರ್ದನನಾಕ್ಷಣ ತಹಳು ||೩|| ಒಂದು ಪ್ರದಕ್ಷಿಣವನು ಮಾಡಿದವರಹೊಂದಿಪ್ಪುದು ಭೂಪ್ರದಕ್ಷಿಣ ಪುಣ್ಯಎಂದೆಂದಿವಳ ಸೇವಿಸುವ ನರರಿಗೆಇಂದಿರೆಯರಸ ಕೈವಲ್ಯವೀವ ||೪|| ತುಲಸಿಯ ನೆಟ್ಟವನು ಮತ್ತೆ ತನಗೆಇಳೆಯೊಳು ಪುಟ್ಟುವ ವಾರ್ತೆಯ…
-
Mangalam Sri Tulasi
Composer : Shri Purandara dasaru ಮಂಗಳಂ ಶ್ರೀ ತುಳಸೀ ದೇವಿಗೆ ,ಮಂಗಳಂ ವೃಂದಾವನ ವಾಸಿಗೆಜಯ ಮಂಗಳಂ ನಿತ್ಯ ಶುಭ ಮಂಗಳಂ |ಪ| ನೋಡಿದ ಮಾತ್ರಕೆ ದೋಷ ಸಂಹಾರಿಗೆಬೇಡಿದ ವರಗಳ ಕೊಡುವಳಿಗೆಮಾಡೆ ವಂದನೆಯನು ಮನುಜರಪಾಪದ ಗೂಡನೀಡಾಡುವ ಗುಣವಂತೆಗೆ (೧) ಮುಟ್ಟೀದ ಮಾತ್ರಕ್ಕೆ ಮುಕ್ತರ ಮಾಡುವಮುದದಿಂದುದ್ಧರಿಸುವ ಮುನಿ ವಂದ್ಯೆಗೆಕೊಟ್ಟರೆ ನೀರನು ಪೇರಿಗೆ ಕಾಲನಮುಟ್ಟಲೇಸದ ಹಾಗೆ ಮಾಳ್ಪಳಿಗೆ (೨) ಬಿತ್ತಿ ಬೆಳಸಿ ತನ್ನ ಹೆಚ್ಚಿಸಿದವರಿಗೆಚಿತ್ತವಲ್ಲಭ ಕೃಷ್ಣನ ಹರುಷದಲಿಅತ್ಯಂತವಾಗಿ ತಾ ಭವದ ಬೇರಕಿತ್ತು ಬಿಸಾಡುವ ಕೋಮಲೆಗೆ (೩) ಕೋಮಲವಾಗಿದ್ದ ದಳ ಮಂಜರಿಗಳಪ್ರೇಮದಿಂದಲಿ…
