On dasa purandara

  • Kangalige habbavayitayya

    Composer : Shri Vyasarajaru on Shri Purandara dasaru ಕಂಗಳಿಗೆ ಹಬ್ಬವಾಯಿತಯ್ಯ ಈಮಂಗಳಾತ್ಮಕ ಪುರಂದರದಾಸರನು ಕಂಡು ||ಪ|| ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವುಸಕಲ ಸತ್ಕರ್ಮ ಸಾಧಿಸಿದ ಫಲವುಭಕುತಿಯಿಂ ಭಾಗೀರಥೀ ಮಜ್ಜನದ ಫಲವುರುಕುಮಿಣಿ ಪತಿಯ ಪದ ಭಕುತರನು ಕಂಡು ||೧|| ಇವರ ನರರೆಂದವರು ನರಕದಲಿ ಬೀಳುವರುಕವಿಜನರು ಒಪ್ಪಿ ಕೈ ಹೊಡೆದು ಹೇಳಿರಲುಅವನಿಯೊಳಗತಿ ದುರ್ಲಭವು ನಂದಗೋಪನ್ನಕುವರನಿದ್ದೆಡೆಯ ವೈಕುಂಠವೆಂಬುವರ ಕಂಡು |೨|| ಧನ್ಯನಾದೆನು ನಾನು ಮನುಜನ್ಮದಿ ಹುಟ್ಟಿಮಾನ್ಯನಾದೆನು ಇನ್ನು ಈ ಜಗದೊಳಗೆಪನ್ನಂಗಶಯನ ಶ್ರೀಕೃಷ್ಣನ್ನ ದಾಸರನುಚೆನ್ನಾಗಿ ಸ್ಮರಿಸಿ ಪಾವನ್ನನಾದೆನಿಂದು ||೩||…

  • Ille Bandeya ella

    Composer : Shri Indiresha Ankita [Shri Pandurangi Huccacharyaru] ರಾಗ: ಬೇಗಡೆ , ರೂಪಕತಾಳ ಇಲ್ಲೇ ಬಂದೆಯಾ , ಎಲ್ಲ ಲೋಕ ತಿರುಗಿ ॥ ಪ ॥ಫುಲ್ಲನಾಭನ ಭಕ್ತರಲ್ಲಿ ಮಾಣಿಕವೇ ॥ ಅ ಪ ॥ ಕರದಿ ವೀಣೆ ಪಿಡಿದು ಭರದಿ ಶಿಷ್ಯರಿಂದ ।ಹರಿಯ ನಿಲಯದಲ್ಲಿ ನಿರುತ ಜಾಗರಕ್ಕೆ ॥ 1 ॥ ಹರಿಯ ದಿನದಿ ನಿಮ್ಮ ಚರಿತಾಮೃತವ ಪಾಡೆ ।ಸುರಮುನಿಯು ನೋಡೆ ಪರಮ ಹರುಷದಿಂದ ॥ 2 ॥ ನಂದಬಾಲಕಾನ ತಂದು ತೋರುವಾನೇ ।ಎಂದು…

  • Byasarade bhajisiro

    Composer : Shri Vijaya dasaru ಬ್ಯಾಸರದೆ ಭಜಿಸಿರೋ ಪುರಂದರ ದಾಸರಾಯರಶ್ರೀಶ ನಿಮ್ಮನು ಉದಾಸೀನ ಮಾಡದೆಪೋಷಿಸುವ ಸಂತೋಷದಿಂದಲಿ ||ಪ|| ಪುರಂದರ ಗಡಾದೊಳಗೆ ಹಿರಿಯ ಸಾಹುಕಾರನೆನಿಸಿ,ಪರಿಪರಿಯ ಸೌಖ್ಯಗಳನ್ನು ಸುರಿಸುತ್ತ,ಇರುತಿರಲು ನರಹರಿ ಕರುಣದಿಂದಲಿಬ್ರಾಹ್ಮಣನಾಗುತ್ತ,ಯಾಚಕರ ತೆರದಲಿ ಹರುಷದಿಂದಂಗಡಿಗೆಹೋಗುತ್ತ, ಯಜಮಾನ ಕಂಡು,ಜರಿದು ಬ್ರಾಹ್ಮಣನ್ಹೊರಗೆ ಹಾಕಲುಮರುದಿವಸ ಮತ್~ ಹೋಗಿ ತಾ ನಿಂತ ||೧|| ಬಾರಿಬಾರಿಗೆ ಮೋರೆ ಹತ್ತಿ ಮೇರೆಯಿಲ್ಲದೆಆರು ತಿಂಗಳ ಬೆನ್ನ ಬೀಳುತ್ತ, ನಾಯಕರು ಕಂಡಿವನಾರಬಿಡುತಾರೆಂದು ಬೈಯುತ್ತ , ಬೇಸತ್ತುಒಂದು ಹೇರು ರೊಕ್ಕಾ ಮುಂದೆ ಸುರಿಯುತ್ತ ,ಇದರೊಳಗೆ ಒಂದುಡ್ಡಾರಿಸಿಕೋ ಎಂದು ಹೇಳಲುನಾರಾಯಣ ಬಿಟ್ ಹೋದ…

error: Content is protected !!