-
Shri Mahalakshmi Maatey
Composer : Shri Gopala dasaru ಶ್ರೀ ಮಹಾಲಕ್ಷ್ಮೀ ಮಾತೆ ತ್ರಿಭುವನ ಜನನಿಶ್ರೀಮಂತ ವಿಷ್ಣು ವಾ-ಮಾಂಕ ಸದನಿ [ಪ] ತಾಮರಸಾಸನ ವ್ಯೋಮಾಳಕ ಸುರ-ಸ್ತೋಮವಿನುತೆ ಹೇ ಸೋಮ ಸಹೋದರಿ [ಅ.ಪ] ಗುಣತ್ರಯಾತ್ಮಕ ಚೂಲಿಯನು ಅಲಂಕರಿಸಿವನಜಭವಾಂಡ ಪಾತ್ರೆಯನಲ್ಲಿರಿಸಿ |ಗಣನೆಯಿಲ್ಲದ ಜೀವ ಧಾನ್ಯ ತುಂಬಿರಿಸಿಜನರ ಯೋಗ್ಯತೆ ಉದಕವನಲ್ಲಿ ಬೆರೆಸಿ |ಮಿನುಗುವ ಕರ್ಮ ಇಂಧನ ಕಾಲವೆ ಮಹಾಅನಳ ಜನರ ಸಾಧನವೆಂಬ ದರ್ವಿಲಿ |ಇನಿತು ಪಾಕವ ಮಾಡಿ ಘನಮಹಿಮನ ಭೋ-ಜನಕನುಕೂಲ ಮಾಡ್ದ ವನರುಹ ನಯನೆ [೧] ನಿಲಯಶಯ್ಯ ತಾಂಬೂಲಾಯುಧ ಚೈಲಜಲಜ ಮಂದಾರ ಚಂಪಕ ಮಲ್ಲೆ…
-
Ksheeravaridhi Kannike
Composer : Shri Vijaya dasaru ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆಈರೇಳು ಲೋಕನಾಯಿಕೆ ||ಪ|| ವಾರವಾರಕೆ ನಿನ್ನ ಆರಾಧಿಪುದಕೆಚಾರುಮನಸು ಕೊಡು ದೂರ ನೋಡದಲೆ [ಅ.ಪ] ಶ್ರೀಧರಾ ದುರ್ಗಿ ಆಂಭ್ರಣಿ ನಿತ್ಯ ಕಲ್ಯಾಣಿವೇದವತಿಯೆ ರುಗ್ಮಿಣಿವೇದ ವೇದಾಂತದಭಿಮಾನಿ ವಾರಿಜ ಪಾಣಿಆದಿ ಮಧ್ಯಾಂತ ಗುಣಶ್ರೇಣಿ |ಸಾಧು ಜನರ ಹೃದಯಾಬ್ಜ ವಿರಾಜಿತೆಭೇದಗೊಳಿಪ ಕಾಮಕ್ರೋಧಗಳೋಡಿಸಿನೀ ದಯದಲಿ ಮೇಲಾದ ಗತಿಗೆ ಪಂಚಭೇದಮತಿಯ ಕೊಡು ಮಾಧವ ಪ್ರಿಯಳೆ ||೧|| ಶ್ರೀ ಮಾಯಾ ಜಯಾ ಕೃತಿ ಶಾಂತಿದೇವಿ ಜಯಂತಿ ನಾಮದಲಿಪ್ಪ ಜಯವಂತಿಕೋಮಲವಾದ ವೈಜಯಂತಿ ಧರಿಸಿದ ಶಾಂತಿಸೋಮಾರ್ಕ ಕೋಟಿ ಮಿಗೆ…
-
Durge paalise maatey
Composer : Shri Gurugopala vittala ದುರ್ಗೇ ಪಾಲಿಸೆ ಮಾತೆ ನಮ್ಬಿದೆ ,ಬ್ರಹ್ಮ ಭರ್ಗಾದಿ ಸುರ ವಿನುತೆ |ದುರ್ಗಮ ಭವದಿಂದ ನಿರ್ಗಮ ಗೈಸು ಹೇಭಾರ್ಗವಿ ಸ್ವರ್ಗಪವರ್ಗ ಪ್ರದಾತೆ ||ಅ.ಪ.|| ಅಂಬರ ಭೂಮಿ ವಿಹಾರಿ ಅಷ್ಟಾಯುಧದಿವ್ಯಾಮ್ಬರಧಾರಿ ಅಸುರಾರಿನಂಬಿದೆ ನಿನ್ನ ಪದಾಂಬುಜ ಎನ್ನಹೃದಂಬರದಲ್ಲಿಹ ಬಿಮ್ಬನ ತೋರಿಸು,ಎಂಬೆ, ಜಗದಂಬೆ, ಸುನಿತಾಂಬೆ,ಶುಭ ಗುಣ ನಿಕುರಂಬೆ ||೧|| ನಂದಗೋಪನ ಕುಮಾರಿ ನರಸಿಂಹಾಂಕಮಂದಿರೆ ಸಜ್ಜನೋದ್ಧಾರಿ,ಇಂದಿರೆ ಎನ್ನಯ ಇಂದ್ರಿಯ ಮನಸು,ಮುಕುಂದನ ಪದದಲಿ ತಂದು ನಿಲ್ಲಿಸು,ಎಂದೆ, ಎನ್ನ ಇಂದೆ , ಇನ್ನು ಮುಂದೆ ,ಗತಿ ನೀನೆ ಎಂದೆ ||೨||…
