Lakshmi

  • Jaya jaya Shri Haripriye

    Composer : Shri Karpara narahari dasaru ಜಯ ಜಯ ಶ್ರೀಹರಿಪ್ರಿಯೆ ಜಯ ಕ್ಷೀರಾಂಬುಧಿತನಯೇಜಯ ಜಯ ಕೋಮಲಕಾಯೆ ಬಿಡದೆನ್ನನು ಕಾಯೆ [ಪ] ಜಯ ರತ್ನಾಕರ ತನಯೆ, ಕುರುಕರುಣಾಮಯಿ ಸದಯೆಹರಿ ವಕ್ಷ ಸ್ಥಳ ನಿಲಯೆ, ಸುರಮುನಿಗೇಯೆ [೧] ಜಯ ಜಯ ಪಾವನ ಚರಿತೆ, ಜಯಚತುರಾನನ ಮಾತೆಜಯ ಭಕುತಾಭಯ ದಾತೆ, ನಮಿಸುವೆ ಭೂಜಾತೆ [೨] ಜಯ ಜಯ ಕಾರ್ಪರ ಸದನೆ, ಜಯ ನರಸಿಂಹನ ರಾಣಿಸುರಸಂಶೇವಿತ ಚರಣೆ, ಪಾಹಿ ಜಗಜ್ಜನನಿ [೩] jaya jaya SrIharipriye jaya kShIrAMbudhitanayEjaya jaya kOmalakAye…

  • Neelavarnana Rani

    Composer : Shri Prasannavenkata dasaru ನೀಲವರ್ಣನ ರಾಣಿ ಲಲನಾಮಣಿ ತ್ರಿವೇಣಿ [ಪ]ಕೋಲಪುರ ಸದನಿ ಪರಿಪಾಲಿಸೆನ್ನನು ಜನನಿ [ಅ.ಪ] ಹೆಮ್ಮೊಗ ನಾಲ್ಮೊಗನು ಮೊಮ್ಮಗ ಮಹಾದೇವ |ಅಮರೇಂದ್ರ ಸಹಿತ ಸುರರೆಲ್ಲರಿಗೆ ಹೆಮ್ಮೆಯಲಿ ||ಅಮ್ಮಹ ದೈವಾ ನಿನ್ನ ಪತಿ ಪ್ರೇಮ ಕೊಡಿಸಿದೆ |ಯೆಮ್ಮೊಳೇತಕೆ ಇಂದು ದಯಬಾರದಮ್ಮಾ [೧] ತರಣಿ ಹರಿಣಾಂಕರನು ಧರಿಪ ಚರಣವನು |ಸುರನದಿ ಜನಕನತೀ ಪಿರುತಿಯಲ್ಲಿ ಸೇವಿಸುವೆ |ಶಿರಕರ ಚರಣಂಗಳ ಚೇಷ್ಟಿಪರಿ ವ್ಯಾಪಾರ ಸುಖ |ಸುರಿಸಿ ನಿನ್ನವರನಾತುಕೊ ಬಾರದೇಕಮ್ಮಾ [೨] ಸ್ವಾಂಗಾಯನಾಮನರ್ಧಾಂಗಿ ಶುಭಾಂಗಿ |ಅಂಗಲಾಚಿ ಬೇಡುವೆ ನಿನ್ನಂತರಂಗದಿಹ |ತುಂಗವಿಕ್ರಮ…

  • Palipudemma padumalaye

    Composer : Shri Prasannavenkata dasaru ಪಾಲಿಪುದೆಮ್ಮ ಪದುಮಾಲಯೆ ತಾಯೆ [ಪ]ಪಾಲವಾರುಧಿ ತನಯೆ ಕಾಯೆ [ಅ.ಪ] ಬೊಮ್ಮನಮ್ಮ ರುಗ್ಮಿಣಿ ಜಾಂಬವತಿಯೆ |ಪೆರ್ಮೆಯ ಹೆಮ್ಮಗ ಅಜನ ಜನನಿ |ಹಮ್ಮಿನ ಮೊಮ್ಮಗ ರುದ್ರಾದಿ ಸುರರೆಲ್ಲರ |ಪ್ರೇಮದಿ ಪೊರೆದ ಮಹಾಮಹಿಮಳೆ [೧] ಮಾತರಿಶ್ವಪ್ರಿಯ ಮಾತುಳಾಂತಕ ಹರಿ |ಕೃತ್ತಿವಾಸಾದ್ಯರಿಂದ ನಿತ್ಯವೂ ಸ್ತುತ್ಯನಾ |ವೀತ ಶೋಕ ಭಯನಾ ಶ್ರೀನಿವಾಸನಾ |ಇತ್ತ ದಯಮಾಡಿ ತೋರ್ ತನ್ನುರವ ಪ್ರಮೆಯೆ [೨] ಕೋಮಲ ಚರಣಯುಗ್ಮಕಭಿನಮಿಪೆನಿನ್ನ |ನಾಮಕೊಂಡಾಡುವ ನಿರ್ಮಲ ಮನವಿತ್ತು |ಸ್ವಾಮಿ ಶ್ರೀ ಪ್ರಸನ್ವೆಂಕಟನೊಲುಮೆಯ |ಕಮ್ಮಲರ್ಸೂಸುವ ತೆರ ಇಮ್ಮಡಿಗೊಳಿಸಮ್ಮಾ [೩]…

error: Content is protected !!