-
Bhajisi Badukelo Manava
Composer : Shri Kanakadasaru ರಾಗ: ಕಲ್ಯಾಣಿ, ಖಂಡಛಾಪುತಾಳ ಭಜಿಸಿ ಬದುಕೆಲೊಮಾನವ || ಪ ||ಅಜಭವೇಂದ್ರಾದಿಗಳು ಪೂಜಿಸುವ ಪಾದವನು || ಅ ಪ || ಪಾಕಶಾಸನಗೊಲಿದು ಬಲಿಯ ಮೆಟ್ಟಿದಪಾದ|ಕಾಕುಶಕಟನ ಒದ್ದು ಕೊಂದ ಪಾದ ||ನಾಕಭೀಕರ ಬಕನ ಮೆಟ್ಟಿ ಸೀಳಿದ ಪಾದ |ಲೋಕಪಾವನೆ ಗಂಗೆ ಪುಟ್ಟಿದ ಪಾದವನು || ೧ || ಶಿಲೆಯಾದ ಅಹಲ್ಯೆಯನು ಶುದ್ಧ ಮಾಡಿದ ಪಾದ |ಒಲಿದು ಪಾರ್ಥನ ರಥವನೊತ್ತಿದ ಪಾದ ||ಕಲಿ ಸುಯೋಧನನ ಓಲಗದಿ ಕೆಡಹಿದ ಪಾದ |ಬಲಿದ ಕಾಳಿಂಗನ ಪೆಡೆ ತುಳಿದ ಪಾದವನು…
-
Baayi Naridamele
Composer : Shri Kanakadasaru ಬಾಯಿ ನಾರಿದ ಮೇಲೆ ಏಕಾಂತವೆತಾಯಿ ತೀರಿದ ಮೇಲೆ ತವರಾಸೆಯೆ, ಮನವೆ ||ಪ|| ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ,ಬಣ್ಣಗುಂದಿದ ಮೇಲೆ ಬಹುಮಾನವೆ,ಪುಣ್ಯತೀರಿದ ಮೇಲೆ ಪರಲೋಕ ಸಾಧನವೆ,ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ ||೧|| ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣ ಬಹುದೆ,ಚಳಿಯುರಿಗೆ ಚಂದನದ ಲೇಪ ಹಿತವೆ,ಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ,ಬೆಲೆಬಿದ್ದ ಸರಕಿನೊಳು ಲಾಭವುಂಟೆ ||೨|| ಪಥ್ಯ ಸೇರದ ಮೇಲೆ ನಿತ್ಯ ಸುಖವೆನಬಹುದೆ,ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ,ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ,ಭಕ್ತಿಯಿಲ್ಲದ ನರಗೆ ಮುಕ್ತಿಯು ಉಂಟೆ? ||೩||…
-
Andhakananuja – mundige
Composer : Shri Kanakadasaru Expln by Shri Kesava Rao Tadipatri ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ | ೧ | ರಥವನಡರಿ ಸುರಪಥದಲಿ ತಿರುಗುವ ಸುತನಿಗೆ ಶಾಪವನಿತ್ತವನಖತಿಯನ್ನು ತಡೆದನ ಸತಿಯ ಜನನಿ ಸುತ ಸತಿಯರನಾಳಿದ ಚತುರನಿಗೆ | ೨ | ಹರಿಯ ಮಗನ ಶಿರ ಹರಿದನ ತಂದೆಯ ಹಿರಿಯ ಮಗನ ತಮ್ಮನ ಪಿತನಭರದಿ ಭಕ್ಶಿಸುವನ ಶಿರದಲಿ ನಟಿಸಿದ ವರಕಾಗಿನೆಲೆಯಾದಿಕೇಶವರಾಯಗೆ…
