-
Ee Jagadali Divya
Composer : Shri Lakumeesha ankita on Shri Jitamitra Tirtharu ಈ ಜಗದಲಿ ದಿವ್ಯ ತೇಜೋ ಮಹಿಮೆ ಬೀರಿದ |ಶ್ರೀ ಜಿತಾಮಿತ್ರರ ನಮಿಪೆ |ಪ| ಮೂಜಗಾಧಿಪ ರೂಪಿ ಜಲಜಕ್ಕೆ |ಸೋಜಿಗದಿಂದ ತಾವು ಉಣಿಸುತ |ಶ್ರೀ ಜಗದ್ಗುರು ಮಧ್ವರಾಯರ |ನೈಜ ಕೃಪೆಯನು ಪಡೆದು ಮೆರೆದ |ಅ.ಪ| ಹತ್ತಾವತಾರನ ಉತ್ತಮ ಒಲಿಮೆಯಲಿ |ಕೃತ್ತಿವಾಸಾಂಶ ಕ್ಷಿತಿಯಲಿ |ಯೆತ್ತಿ ಜನ್ಮ ಜಿತ್ತಪ್ಪ ನಾಮದಿ |ಎತ್ತುಗಳ ಹೂಡಿ ಕೃಷಿಯ ಮಾಡುತ |ನಿತ್ಯ ಜನಿವಾರ ಧರಿಸಿ ಊಟದಿ |ಮತ್ತೆ ತೆಗೆಯುತ ಧರಿಪ ವೃತ್ತಿಯುಳ್ಳ |…
