-
Ava kadeyinda bande
Composer : Shri Vadirajaru ಆವ ಕಡೆಯಿಂದ ಬಂದೆ ವಾಜಿ ವದನನೆಭಾವಿಸುವ ವಾದಿರಾಜ ಮುನಿಯ ಕಾಣುತ /ಪ/ ನೇವರಿಸಿ ಮೈಯ ತಡವಿ ನೇಹದಿಂದಲಿ ಮೇಲುನೈವೇದ್ಯವನ್ನು ಇತ್ತು ಭಜಿಸುವೆ /ಅ.ಪ/ ಭಕುತಿ ಕಡಲೆ ಜ್ಞಾನ ವೈರಾಗ್ಯ ಬೆಲ್ಲದಮುಕುತಿ ಆನಂದ ಸುಖದ ಕ್ಷೀರ ಲಡ್ಡಿಗೆಯುಕುತಿ ಧ್ಯಾನ ಕೊಟ್ಟು ನೀನು ಎಲ್ಲ ಮಾತಲಿಶಕುತಿ ಸಂತೋಷ ಮಹಿಮೆ ತೋರಬಂದೆಯ /೧/ ಹೆತ್ತತುಪ್ಪ ಸಕ್ಕರೆಯ ಮಾಡಿ ಮುದ್ದೆಯತುತ್ತು ಮಾಡಿಕೊಡಲು ಅದನು ಮೆಲುತ ಮೆಚ್ಚುತಅತ್ಯಂತ ಸಂತೋಷ ನೀನು ಆಟ ತೋರುತಭೃತ್ಯ ವಾದಿರಾಜ ಮುನಿಯ ಸಲಹ ಬಂದೆಯಾ…
