Lakshmi Hrudaya – Vadirajaru

ಶ್ರೀ ದೇವಿ ತಾನು ಶ್ರೀ ಧಾಮನ್ನ ಮನೆಯಲ್ಲಿ
ಆದಿ ಅಂತ್ಯಗಳಿಲ್ಲದಿರಲು, ಚೋದ್ಯ ಸುಖ
ರೂಪದಿಂದ ಅವಳಿಗೆ ವೇದವಾಲಿಗಳ
ಓದುತ್ತಿರಲು, ಅವಳಿಂದ ಹರಿಯು ಮೂರು
ಮನೆಗಳ ಎಂಬ ಆಲಯಕ್ಕೆ ಅನ್ನ ಭಯವಿಲ್ಲ |
ಮೊದಲೆ ಉದಕವಿಲ್ಲ ಆದಕಾರಣದಿಂದ ಮುದದಿ
ತಾನಾದಳು ಅಚ್ಯುತಗೆ ಅಂಭುದಿಯಾದಳು |
ಆಗ ಮಹಾಲಕುಮಿ ಅಂಬರದ ಆಭರಣವಾದಳು |
ಪೊಂಬಣ್ಣದ ಅಲೆದೆಲೆಯಾದಳು ಎನೆಂಬೆ
ಇವಳ ಸಾಹಸಕ್ಕೆ | ಶ್ರೀಭೂ ದುರ್ಗೆಯರ
ಆಲಿಸಿದನು ಹರಿಯು ತಾ ಆಲದೆಲೆಯ ಮೇಲೆ
ಮಲಗಿದನು | ಅಚ್ಯುತನ ಹೃದಯದಲ್ಲಿ
ಲಿಂಗವಿಶಿಷ್ಟರಾದ ಇನಿತು ಜೀವರ ಹಿಡಿ
ತುಂಬಾಕೊಂಡು | ತನಯನ ನೂರು ವರ್ಷ ಪರಿಯಂತದಿ
ವನಜಾಕ್ಷ ವಟಪತ್ರ ಶಯನನಾಗಿ |
ಜನರೆಲ್ಲ ತಮ್ಮ ಗತಿಗೆ ತಕ್ಕ ಸಾಧನವ ಸಾಧಿಸಿ
ಕೊಳ್ಳಲೆಂದು, ಕರುಣಿ ಪುನರಪಿ ಸೃಷ್ಟಿಯ
ಮಾಡುವೆ ನೆಂದು | ಲಾಲನೆಗೆ ಪ್ರಕೃತಿಯ ಮಮತೆಯಿತ್ತು |
ಗುಣತ್ರಯಾತ್ಮಕ ಸೂಕ್ಷ್ಮ ತತ್ವ ರಾಶಿಯ ಜೀವರನು ಸೃಜಿಸಿದ ಹಯವದನನು ||


SrI dEvi tAnu SrI dhAmanna maneyalli
Adi aMtyagaLilladiralu, cOdya suKa
rUpadiMda avaLige vEdavAligaLa
Oduttiralu, avaLiMda hariyu mUru
manegaLa eMba Alayakke anna Bayavilla |
modale udakavilla AdakAraNadiMda mudadi
tAnAdaLu acyutage aMBudiyAdaLu |
Aga mahAlakumi aMbarada ABaraNavAdaLu |
poMbaNNada aledeleyAdaLu eneMbe
ivaLa sAhasakke | SrIBU durgeyara
Alisidanu hariyu tA Aladeleya mEle
malagidanu | acyutana hRudayadalli
liMgaviSiShTarAda initu jIvara hiDi
tuMbAkoMDu | tanayana nUru varSha pariyaMtadi
vanajAkSha vaTapatra SayananAgi |
janarella tamma gatige takka sAdhanava sAdhisi
koLLaleMdu, karuNi punarapi sRuShTiya
mADuve neMdu | lAlanege prakRutiya mamateyittu |
guNatrayAtmaka sUkShma tatva rASiya jIvaranu sRujisida hayavadananu ||

You might also like

error: Content is protected !!