Composer : Shri Bannanje Govindacharya
Kannada anuvada of Shri Rajarajeshwara Tirtha’s Mangalashtaka – Sogadentu sollu
ಗೋವಿಂದ ಗೋವಿಂದ |
ಗೋವಿಂದ ಗೋವಿಂದ ಪರಮಾನಂದ |
ರಮೆಯವನ ಮಡದಿ | ನಾಲ್ಮೊಗನು ಮಗನು |
ಗರುಡ ಮುಗಿಲಗಾಡಿ | ಮೊಮ್ಮಗನು ಶಿವನು |
ಸುರರ ಸಲಹುವನು | ಶೇಷ ಕಡಲ ಮಂಚ ||
ಬೊಮ್ಮಾಂಡ ಮಹಡಿ | ಸುರರು ಆ ದೊರೆಯ |
ಪರಿಪರಿಯ ಕಿಂಕರರು | ಮೂಜಗವ ಪೊರೆವ |
ಸಂಸಾರಿ ಹರಿಯು | ಕರುಣಿಸಲಿ ಮಂಗಳವನು [೧]
ಕಮಲಭವ ಪವನ | ಶಿವ ಶೇಷ ಗರುಡ |
ಮನುಮಥನು-ಇಂದ್ರ | ಗುರು ಭಾನು ಚಂದ್ರ |
ಮನು ವರುಣ ಅಗ್ನಿ | ನಿಋತಿ ಯಮಧರ್ಮ ||
ಅಶ್ವಿಗಳು ಗಣಪ | ಮರುತಗಣ ಧನಪ |
ಪರ್ಜನ್ಯ ಮಿತ್ರರಂಥ | ಸುರರು ಮಡದಿಯರೊಡನೆ |
ಅನುದಿನವು ನಮಗೆ | ಕರುಣಿಸಲಿ ಮಂಗಳವನು [೨]
ಅತ್ರಿ ವಿಶ್ವಾಮಿತ್ರ ಭೃಗು ಪರಾಶರ ಶಕ್ತಿ |
ಮುನಿಮರೀಚಿಯಗಸ್ತಿ | ಅಂಗಿರಸ ಔರ್ವ |
ಕ್ರತು ಪುಲಸ್ಯ ವಸಿಷ್ಠ | ಮತ್ತುಚಥ್ಯ ಪುಲಹ |
ಮಾಂಡವ್ಯ ಜಮದಗ್ನಿ | ಗೌತಮ ಭರದ್ವಾಜ |
ಮೊದಲಾದ ತಾಪಸರು | ಶ್ರೀಹರಿಯ ಸಿರಿಚರಣ |
ಶರಣರಿವರೆಮಗೆ | ಕರುಣಿಸಲಿ ಮಂಗಳವನು [೩]
ಮಾಂಧಾತ ನಹುಷ | ಸಗರಾಂಬರೀಷ |
ಪೃಥುರಾಜ ಹೈಹಯ | ಶ್ರೀಧರ್ಮಸುತನು |
ನಳನು ದಶರಥನು | ರಾಮ ಯದು ಯಯಾತಿ |
ಇಕ್ಷ್ವಾಕು ಭರತ | ಉತ್ಥಾನಪಾದ |
ಧೃವವಿಭೀಷಣರಂಥ | ನೆಲದೊಡೆಯರೆಲ್ಲ
ಎಂದೆಂದು ನಮಗೆ ಕರುಣಿಸಲಿ ಮಂಗಳವನು [೪]
ಮಂದರವು ಮೇರು | ಕೈಲಾಸದೇರು |
ದಟ್ಟ ಮಂಜು ಬೆಟ್ಟ | ಮಾಹೇಂದ್ರ ಮಲಯ |
ಸಿಂಹಾದ್ರಿ ಸಹ್ಯ | ನಿಷಧ ರೈವತಗಿರಿ ||
ಮೈನಾಕ ಗಂಧ- | ಮಾದನವು ವಿಂಧ್ಯ |
ಮತ್ತೆ ಗೋಮಂತಕ | ಮುಂತಾದ ಗಿರಿಗ-|
ಳೆಂದೆಂದು ನಮಗೆ | ಕರುಣಿಸಲಿ ಮಂಗಳವನು [೫]
ಯಮುನೆ ಭಾಗೀರಥಿಯು | ಸರಯು ಗೋದಾವರಿಯು |
ನರ್ಮದೆಯು ಭೀಮರಥಿಯು | ನದಿ ಸರಸ್ವತಿ | ಗೋ-
ಮತಿ ಕೃಷ್ಣೆ, ಫಲ್ಗುನಿಯು |
ಸಿಂಧುನದಿ ಸಿರಿಗಂಡಕಿ ||
ಕಾವೇರಿ ವಾರಾಹಿ | ಕಪಿಲೆ ನೇತ್ರಾವತಿಯು |
ಪುಣ್ಯ ಪ್ರಯಾಗದಂಥ | ಹರಿಯ ಅಡಿದಾವರೆಯ |
ತೊಳೆವ ತೊರೆಗಳು ನಮಗೆ | ಕರುಣಿಸಲಿ ಮಂಗಳವನು [೬]
ವೇದಗಳು ಪರಿಪರಿಯ | ಉಪನಿಷತ್ತು ಪುರಾಣ |
ಅಂಗಗಳು ಆರು ಜತೆಗೆ | ವೇದಾಂತ ತರ್ಕಗಳು |
ಮಂತ್ರಗಳು ತಂತ್ರಗಳು | ಸ್ಮೃತಿಕಾರರಾಣತಿಗಳು ||
ಕಾವ್ಯ-ನಾಟಕ-ನೀತಿ ಮತ್ತಲಂಕೃತಿರೀತಿ |
ಬಗೆಬಗೆಯ ನುಡಿಯ ಮೋಡಿ |
ಶ್ರೀಹರಿಯ ಹಿರಿಮೆಯನು ವಾದಗಳು
ನಾದಗಳು ಕರುಣಿಸಲಿ ಮಂಗಳವನು [೭]
ಸೊಗ ತರುವ ಸೂರ್ಯಾದಿ | ಗ್ರಹಗಳೊಂಭತ್ತು ಮೇ-|
ಷಾದಿರಾಶಿಗಳು ಕೂಡ | ನಕ್ಷತ್ರ ಯೋಗ ತಿಥಿ |
ಅವುಗಳನ್ನು ನಿಯಮಿಸುವ | ದೇವತೆಗಳವರ ಗಣವು ||
ಮಾಸಗಳು ವರುಷಗಳು | ಋತುಗಳಂತೆಯೆ ಹಗಲು |
ಸಂಜೆಗಳು ಮತ್ತು ಇರುಳು | ಈ ಚರಾಚರವೆಲ್ಲ |
ದಿನದಿನವು ನಮಗೆ | ಕರುಣಿಸಲಿ ಮಂಗಳವನು || ೮ ||
ಈ ಪರಿಯ ಹಿರಿಯ ಸೊಗದೆಂಟು ಸೊಲ್ಲು | ಶ್ರೀರಾಜರಾಜೇಶ್ವರ |
ಹಾಡಿದ್ದು ಜಗಕೆ | ಬೇಡಿದ್ದು ನೀಡಿ |
ಕೇಡುಗಳನೋಡಿಸುವುದು ||
ಮದುವೆ ಮೊದಲಾದ ಮಂಗಳದಲಥವ |
ಸಂಧ್ಯೆಯಲಿ ನಿತ್ಯ ಪಠಿಸೆ |
ಪಡೆವನಾ ಮನುಜ | ಧರ್ಮಾರ್ಥ ಮುಂತಾದ |
ತನ್ನೆಲ್ಲ ಬಯಕೆಗಳನು || ೯ ||
gOviMda gOviMda |
gOviMda gOviMda paramAnaMda |
rameyavana maDadi | nAlmoganu maganu |
garuDa mugilagADi | mommaganu Sivanu |
surara salahuvanu | SESha kaDala maMca ||
bommAMDa mahaDi | suraru A doreya |
paripariya kiMkararu | mUjagava poreva |
saMsAri hariyu | karuNisali maMgaLavanu [1]
kamalaBava pavana | Siva SESha garuDa |
manumathanu-iMdra | guru BAnu caMdra |
manu varuNa agni | niRuti yamadharma ||
aSvigaLu gaNapa | marutagaNa dhanapa |
parjanya mitraraMtha | suraru maDadiyaroDane |
anudinavu namage | karuNisali maMgaLavanu [2]
atri viSvAmitra BRugu parASara Sakti |
munimarIciyagasti | aMgirasa aurva |
kratu pulasya vasiShTha | mattucathya pulaha |
mAMDavya jamadagni | gautama BaradvAja |
modalAda tApasaru | SrIhariya siricaraNa |
SaraNarivaremage | karuNisali maMgaLavanu [3]
mAMdhAta nahuSha | sagarAMbarISha |
pRuthurAja haihaya | SrIdharmasutanu |
naLanu daSarathanu | rAma yadu yayAti |
ikShvAku Barata | utthAnapAda |
dhRuvaviBIShaNaraMtha | neladoDeyarella
eMdeMdu namage karuNisali maMgaLavanu [4]
maMdaravu mEru | kailAsadEru |
daTTa maMju beTTa | mAhEMdra malaya |
siMhAdri sahya | niShadha raivatagiri ||
mainAka gaMdha- | mAdanavu viMdhya |
matte gOmaMtaka | muMtAda giriga-|
LeMdeMdu namage | karuNisali maMgaLavanu [5]
yamune BAgIrathiyu | sarayu gOdAvariyu |
narmadeyu BImarathiyu | nadi sarasvati | gO-
mati kRuShNe, Palguniyu |
siMdhunadi sirigaMDaki ||
kAvEri vArAhi | kapile nEtrAvatiyu |
puNya prayAgadaMtha | hariya aDidAvareya |
toLeva toregaLu namage | karuNisali maMgaLavanu [6]
vEdagaLu paripariya | upaniShattu purANa |
aMgagaLu Aru jatege | vEdAMta tarkagaLu |
maMtragaLu taMtragaLu | smRutikArarANatigaLu ||
kAvya-nATaka-nIti mattalaMkRutirIti |
bagebageya nuDiya mODi |
SrIhariya hirimeyanu vAdagaLu
nAdagaLu karuNisali maMgaLavanu [7]
soga taruva sUryAdi | grahagaLoMBattu mE-|
ShAdirASigaLu kUDa | nakShatra yOga tithi |
avugaLannu niyamisuva | dEvategaLavara gaNavu ||
mAsagaLu varuShagaLu | RutugaLaMteye hagalu |
saMjegaLu mattu iruLu | I carAcaravella |
dinadinavu namage | karuNisali maMgaLavanu || 8 ||
I pariya hiriya sogadeMTu sollu | SrIrAjarAjESvara |
hADiddu jagake | bEDiddu nIDi |
kEDugaLanODisuvudu ||
maduve modalAda maMgaLadalathava |
saMdhyeyali nitya paThise |
paDevanA manuja | dharmArtha muMtAda |
tannella bayakegaLanu || 9 ||

Leave a Reply
You must be logged in to post a comment.