Composer : Shri Gopaladasaru
ದಯವಿರಲಿ ದಯವಿರಲಿ ದಾಮೋದರಾ ||ಪ||
ಸಯವಾಗಿ ಬಿಡದೆನ್ನಾ ಸಾಕುವ ಶ್ರೀಕೃಷ್ಣಾ ||ಅ.ಪ||
ಹೋಗುವಾ ಹಾದಿಯಲಿ ಹೋದ ಹಾಂಗೆಲ್ಲ ನಾ
ಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟು
ತೂಗುವ ತೊಟ್ಟಿಲು ಕೊನೆಗೆ ಸ್ಥಳದಲ್ಲೇ ನಿಲುವಂತೆ
ಹ್ಯಾಂಗೆ ನಡೆಸುವಿ ಹಾಂಗೆ ನಡಕೊಂಬೆ ಸ್ವಾಮಿ ||೧||
ಬಂದೆನೊ ನಾನಿಲ್ಲಿ ಬಹು ಜನ್ಮದಾ ಸುಕೃತ-ದಿಂದ
ನಿನ್ನ ಬಳಿಗೆ ಇಂದಿರೇಶಾ
ಒಂದು ಮಾತ್ರವು ಬಿಟ್ಟು ಸಕಲವು ಅರ್ಪಿಸಿದೆ
ಬಂಧನವ ಕಡಿವ ಜ್ಞಾನ ಭಕುತಿ ಕೊಡೊ ಸ್ವಾಮಿ ||೨||
ಎನಗ್ಯಾವುದೂ ಒಲ್ಲೆ ಎಲ್ಲೆಲ್ಲಿ ಹೋದರೂ
ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನ ಕೊಡೊ ಸ್ವಾಮಿ
ಚಿನುಮಯ ಮೂರುತಿ ಗೋಪಾಲವಿಠ್ಠಲ
ಘನ ಮಹಿಮ ಮಧ್ವಮುನಿ ಮನ ಮಂದಿರವಾಸ ||೩||
dayavirali dayavirali dAmOdarA ||pa||
sayavAgi biDadennA sAkuva SrIkRuShNA ||a.pa||
hOguvA hAdiyali hOda hAMgella nA
sAguvava nAnalla ninna smaraNeya biTTu
tUguva toTTilu konege sthaLadallE niluvaMte
hyAMge naDesuvi hAMge naDakoMbe svAmi ||1||
baMdeno nAnilli bahu janmadA sukRuta-diMda
ninna baLige iMdirESA
oMdu mAtravu biTTu sakalavu arpiside
baMdhanava kaDiva j~jAna Bakuti koDo svAmi ||2||
enagyAvudU olle ellelli hOdarU
kShaNa biDade ninna nOLpa j~jAna koDo svAmi
cinumaya mUruti gOpAlaviThThala
Gana mahima madhvamuni mana maMdiravAsa ||3||

Leave a Reply
You must be logged in to post a comment.