Composer : Shri Harapanahalli Bheemavva
ಗೋದಾ ಎನ್ನೊಳ್-ವಿನೋದದಿಂದ
ಮಾತಾಡಿ ತೋರಿಸೆ ನಿನ್ನ ಪಾದ [ಪ]
ಸಾಧು ಸಜ್ಜನರಿಗೆ ಸ್ನಾನದ ಫಲ ಕೊಟ್ಟು
ಬೋಧಿಸಿ ಹರಿದಯ ಸಾಧಿಸಿ ಕೊಡಿಸುವಿ [೧]
ಅಕ್ಕ ತಂಗೇರು ಕೂಡಿ ಉಕ್ಕೋ ಉಲ್ಲಾಸದೆ
ಲಕ್ಕುಮೀಶನ ಮುದ್ದು ಮಕ್ಕಳ ಮನೆಗೊಯ್ವೆ [೨]
ದೂರದಿ ಬಂದೆ ನಾ ಗೋದಾವರಿಯೆ ನೀನು
ತೋರೆ ಭೀಮೇಶಕೃಷ್ಣನ್ನೂರು ದಾರಿಗಳ [೩]
gOdA ennoL-vinOdadiMda
mAtADi tOrise ninna pAda [pa]
sAdhu sajjanarige snAnada Pala koTTu
bOdhisi haridaya sAdhisi koDisuvi [1]
akka taMgEru kUDi ukkO ullAsade
lakkumISana muddu makkaLa manegoyve [2]
dUradi baMde nA gOdAvariye nInu
tOre BImESakRuShNannUru dArigaLa [3]

Leave a Reply
You must be logged in to post a comment.