Composer : Shri Gurujagannatha dasaru
ಹರನೆ ನಾ ನಿನ್ನ ಪರಿಸರನಯ್ಯಾ
ಪೊರಿ ಎನ್ನ ಜೀಯಾ [ಪ]
ಸುರವರ ಸ್ಮರಮುಖ ಸುರಗಣ ಸೇವ್ಯನೆ
ನರವರನಿಗೆ ನೀ ಹರಿ ಮಹಿಮೆಯ ಪೇಳಿದೆ [ಅ.ಪ]
ಅಂಬಾಧವ ಹೇರಂಬನ ತಾತ,
ಶರಜನ್ಮನ ಪಿತ,
ಶಂಬಾರಾರಿಯ ಭಯ ನಿರ್ಜೀತ,
ಸುರವರನಾಥ | ಸುರವರನಾಥ |
ಕುಂಭಿಣಿರಥ ಹರ ಶಂಭೋ ಶಂಕರ ಶಿವ
ನಂಬಿದೆ ನಿನ್ನನು ತ್ರ್ಯಂಬಕ ಪಾಲಿಸೊ [೧]
ಗಂಗಾಧರ ದಿಗಂಬರ ವೇಷಾ –
ಧರಿಸಿದ ಈಶಾ,
ಲಿಂಗಾಕಾರದಿ ಜನ ಮನ ತೋಷಾ-
ಮಾಡುವಿ ಜಗದೀಶಾ | ಮಾಡುವಿ ಜಗದೀಶಾ |
ಮಂಗಳಕರ ಭವ ಸಂಗ ವಿವರ್ಜಿತ
ತುಂಗ ಮಹಿಮ ಭಸಿತಾಂಗ ಶುಭಾಂಗ [೨]
ದಾತಾ ಗುರುಜಗನ್ನಾಥಾ- ,
ವಿಠಲ ದೂತಾ,
ಪ್ರೀತಾನಾಗೆನ್ನಯ ಮಾತಾ,
ಲಾಲಿಸೊ ಖ್ಯಾತಾ | ಲಾಲಿಸೊ ಖ್ಯಾತಾ |
ಪಾತಕ ಕಾನನ ವೀತಿ ಹೋತ್ರ ಶುಭ
ವ್ರಾತವ ಪಾಲಿಸ್ಯನಾಥನ ಪೊರಿಯೋ [೩]
harane nA ninna parisaranayyA
pori enna jIyA [pa]
suravara smaramuKa suragaNa sEvyane
naravaranige nI hari mahimeya pELide [a.pa]
aMbAdhava hEraMbana tAta,
Sarajanmana pita,
SaMbArAriya Baya nirjIta,
suravaranAtha | suravaranAtha |
kuMBiNiratha hara shaMBO SaMkara Siva
naMbide ninnanu tryaMbaka pAliso [1]
gaMgAdhara digaMbara vEShA –
dharisida ISA,
liMgAkAradi jana mana tOShA-
mADuvi jagadISA | mADuvi jagadISA |
maMgaLakara Bava saMga vivarjita
tuMga mahima BasitAMga SuBAMga [2]
dAtA gurujagannAthA- ,
viThala dUtA,
prItAnAgennaya mAtA,
lAliso KyAtA | lAliso KyAtA |
pAtaka kAnana vIti hOtra SuBa
vrAtava pAlisyanAthana poriyO [3]

Leave a Reply
You must be logged in to post a comment.