Paada kandu pavanadeno

Composer : Shri Rama dasaru [Bade Saheb]

ಪಾದ ಕಂಡು ಪಾವನಾದೆನೋ
ಶ್ರೀ ಗಿರಿಯ ನಿಲಯನ ||ಪ||

ಪಾದ ಕಂಡು ಪಾವನಾದೆನೋ
ಮಾಧವನ ಪ್ರಸಾದ ಪಡೆದೆನೊ
ಹಾದಿಕಾಣದೆ ಪರಮ ದುರ್ಭವ
ಬಾಧೆಯೊಳು ಬಿದ್ದು ತೊಳಲಿ ಬಳಲುತ
ಮೇಧಿನೀಯೊಳು ಜನುಮ ತಾಳಿ
ಅಬೇಧ ಮತದ ಹಾದಿ ಬಿಟ್ಟು ||ಅ.ಪ||

ನೀಲ ಬಣ್ಣದೊಪ್ಪುವ ಸುಂದರ,
ಶುಭಕಾಯ ಇಂದಿರೆ ಲೋಲ ತ್ರಿಜಗ ಮೋಹನಾಕರ,
ಕೊರಳ ಪದಕ ಮಾಲ ಕೌಸ್ತುಭ
ಮುಕುಟ ಮಣಿಹಾರ, ರತ್ನದುಂಗುರ |
ಕಾಲಲ್-ಹೊಳೆಯುವ ಗೆಜ್ಜೆ ಸರಪಳಿ,
ಶೀಲ ವೈಷ್ಣವ ನಾಮ ಪಣೆಯಲಿ,
ಕಾಳ ರಕ್ಕಸ ಕುಲ ಸಂಹಾರನ,
ಪಾಲಸಾಗರ ಕನ್ಯ ವರನ,
ಪಾಲ ಮೂರ್ಲೋಕ ಸಾರ್ವಭೌಮನ,
ಮೇಲು ಭೂ ವೈಕುಂಠದಲ್ಲಿ ||೧||

ಉದಯ ಕಾಲದಿ ಬಾಲನವತಾರ,
ಮಧ್ಯಾಹ್ನ ಕಾಲದಿ ಸದಮಲಾಂಗದ ಯವ್ವನಾಕಾರ,
ಸು-ಸಂಧ್ಯಾಕಾಲದಿ ಮುದುಕನಾಗಿ ಕಾಂಬ ಮನೋಹರ, ಬಹು ಮಹಿಮೆಗಾರ |
ಪದುಮ ವದನ ಮದನನಯ್ಯ ಪದುಮವತಿಯ ಪ್ರಾಣಪ್ರೀಯ,
ವದಗಿ ಬಂದ ಭಕುತ ಜನರನು,
ಹೃದಯದಿಂದ ಕರೆದು ಪ್ರಸಾದ,
ಮುದದಿ ನೀಡುತ ಕೃಪೆಯ ತೋರಿ,
ಸದಮಲ ಸಂಪದವನೀವನ ||೩||

ಉಟ್ಟದೂಕುಲ ಶಲ್ಯ ಜರತಾರ,
ಕೈಯ್ಯಲ್ಲಿ ಕಂಕಣ ಪಟ್ಟ ರತ್ನದ ನಡುವಿಗ್ ಉಡಿದಾರ,
ವರ್ಣಿಸುವರಾರೊ ಸೃಷ್ಟೀಯೊಳಗೀತ ಮೀರಿದವತಾರ,
ಇನಕೋಟಿ ಪ್ರಭಾಕರ |
ಬಿಟ್ಟು ವೈಕುಂಠ ಇಹಕೆ ಸಾಗಿ,
ಬೆಟ್ಟದ ಮೇಲೆ ವಾಸನಾಗಿ ,
ಕೊಟ್ಟು ವರಗಳ ಮೂರು ಜಗಕೆ,
ಶೆಟ್ಟಿಯಂದದಿ ಕಾಸು ಕೊಳ್ಳುವ,
ದುಷ್ಟ ಭ್ರಷ್ಟರ ಶಿಷ್ಠರೆಲ್ಲರ,
ಇಷ್ಟದಾಯಕ ದಿಟ್ಟ ದೇವನಾ ||೪||

ಒಂದೆ ಮನದಲಿ ಸಕಲ ಸೇವಕರು,
ಭಯ ಭಕುತಿಯಿಂದಲಿ ಬಂದು ಹರೆಕಯ
ತಂದು ನೀಡುವರು, ತುಂಬುರು ನಾರದರೊಂದಿಂ ಗಾನದಿಂ
ಪಾಡಿ ಪೊಗಳುವರು, ಆನಂದ ಕೋರುವರು |
ಹೊಂದಿ ಭಜಿಸುತ ಸಪ್ತ ಋಷಿಗಳ,
ಬಂದು ಇಳಿವರು ಬಿಡದೆ ಅನುದಿನ,
ವಂದ್ಯ ನಿಗಮಾದಿ ಬಂಧು ಭಜಿಪರ,
ತಂದುಗೊರಳಾದಿ ಬ್ರಹ್ಮ ಸುರರಿಂ,
ಗಂಧ ಪರಿಮಳ ಕುಸುಮ ದ್ರವ್ಯಗಳಿಂದ, ಸೇವೆಯಗೊಂಬ ದೇವನಾ ||೫||

ತೀರದೀತನ ಲೋಕ ಶೃಂಗಾರ, ಏರಿ ನೋಡಲು
ಪಾರ ಗಿರಿ ತುದಿ ಗಾಳಿ ಗೋಪುರ, ಮುಂದೆ ನಡೆಯಲು
ದಾರಿಯಲ್ಲಿ ಕೊಳ್ಳ ಏಳು ವಿಸ್ತಾರ, ಪರಮ ಪರಾತರ |
ತೋರುವಾ ಮಹಾ ಗುಡಿಯ ಗೋಪುರ,
ದ್ವಾರ ಚಿನ್ನದ ಕಲಶ ಬಂಗಾರ
ಗಾರು ಮಾಡದೆ ದಾಸ ಜನರನು,
ತಾರತಮ್ಯದಿ ಪೊರೆಯಲೋಸುಗ,
ಸೇರಿ ಧಾರುಣಿ ವೈಕುಂಠವೆನಿಸಿದ,
ಧೀರ ವೆಂಕಟ ಶ್ರೀಷ ರಾಮನಾ ||೬||


pAda kaMDu pAvanAdenO
SrI giriya nilayana ||pa||

pAda kaMDu pAvanAdenO
mAdhavana prasAda paDedeno
hAdikANade parama durBava
bAdheyoLu biddu toLali baLaluta
mEdhinIyoLu januma tALi
abEdha matada hAdi biTTu ||a.pa||

nIla baNNadoppuva suMdara,
SuBakAya iMdire lOla trijaga mOhanAkara,
koraLa padaka mAla kaustuBa
mukuTa maNihAra, ratnaduMgura |
kAlal-hoLeyuva gejje sarapaLi,
SIla vaiShNava nAma paNeyali,
kALa rakkasa kula saMhArana,
pAlasAgara kanya varana,
pAla mUrlOka sArvaBaumana,
mElu BU vaikuMThadalli ||1||

udaya kAladi bAlanavatAra,
madhyAhna kAladi sadamalAMgada yavvanAkAra,
su-saMdhyAkAladi mudukanAgi kAMba manOhara, bahu mahimegAra |
paduma vadana madananayya padumavatiya prANaprIya,
vadagi baMda Bakuta janaranu,
hRudayadiMda karedu prasAda,
mudadi nIDuta kRupeya tOri,
sadamala saMpadavanIvana ||3||

uTTadUkula Salya jaratAra,
kaiyyalli kaMkaNa paTTa ratnada naDuvig uDidAra,
varNisuvarAro sRuShTIyoLagIta mIridavatAra,
inakOTi praBAkara |
biTTu vaikuMTha ihake sAgi,
beTTada mEle vAsanAgi ,
koTTu varagaLa mUru jagake,
SeTTiyaMdadi kAsu koLLuva,
duShTa BraShTara SiShTharellara,
iShTadAyaka diTTa dEvanA ||4||

oMde manadali sakala sEvakaru,
Baya BakutiyiMdali baMdu harekaya
taMdu nIDuvaru, tuMburu nAradaroMdiM gAnadiM
pADi pogaLuvaru, AnaMda kOruvaru |
hoMdi Bajisuta sapta RuShigaLa,
baMdu iLivaru biDade anudina,
vaMdya nigamAdi baMdhu Bajipara,
taMdugoraLAdi brahma surariM,
gaMdha parimaLa kusuma dravyagaLiMda, sEveyagoMba dEvanA ||5||

tIradItana lOka SRuMgAra, Eri nODalu
pAra giri tudi gALi gOpura, muMde naDeyalu
dAriyalli koLLa ELu vistAra, parama parAtara |
tOruvA mahA guDiya gOpura,
dvAra cinnada kalaSa baMgAra
gAru mADade dAsa janaranu,
tAratamyadi poreyalOsuga,
sEri dhAruNi vaikuMThavenisida,
dhIra veMkaTa SrISha rAmanA ||6||

Leave a Reply

You might also like

error: Content is protected !!