Hari ninna kruna

Composer : Shri Varadesha vittala

By Smt.Shubhalakshmi Rao

ಹರಿ ನಿನ್ನ ಕರುಣವಿರಾಲಾವ ಭಯವು
ಸ್ಮರಣಿ ಮಾತ್ರದಿ ಸಕಲ ದುರಿತಗಳ ಪರಿಹರಿಪ [ಪ]

ಸಣ್ಣ ವಯದಲಿ ಶ್ರೀ ಜಗನ್ನಾಥ ದಾಸಾರ್ಯ
ಬನ್ನ ಬಡುತಿರೆ ವ್ಯಾಧಿ ಪೀಡೆಯಿಂದ
ಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ –
ಬಿನ್ನಪವನಾಲಿಸಿ ರೋಗ ಮೋಚನ ಗೈದ [೧]

ದಾಸಕುಲ ರತ್ನ ಪ್ರಾಣೇಶ ದಾಸಾರ್ಯರ
ಆಸುವಂಶದ ತರುಳ ರೋಗದಿಂದಾ
ಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನು
ನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ [೨]

ವರದೇಂದ್ರ ಗುರುವರರ ಸುರುಚಿರಾಲಯದಲ್ಲಿ
ಇರಳ್-ಹಗಲು ನಿಮ್ಮ ನಾಮ ಸ್ಮರಿಸುವಂಥ
ತರುಳ ನೀ ಪರಿ ಪೀಡಿಸುವದುಚಿತವೇನೊ ಶ್ರೀ
ಹರಿ ವಿಚಾರಿಸಿ ನೀನೆಸಿ ದಯದಿಂದ ನೋಡೊ [೩]

ವಾಸವಾದ್ಯಮರನುತ ವಾಸುದೇವನೆ ನೀನು
ಈ ಸಮಯದೊಳಗಿವನ ಕರುಣದಿಂದ
ಪೋಷಿಸಲು ನಿನ್ನ ಪೊಂದಿರುವ ಸದ್ ಭಕ್ತರ
ದಾಸನೆಂದೆನಿಸಿ ಜೀವಿಸಲಿಯನವರತ [೪]

ನಿನ್ನನೇ ನಂಬಿರುವೆ ನಿನ್ನನೇ ಪ್ರಾರ್ಥಿಸುವೆ
ಧನ್ವಂತ್ರಿ ನೀನೆನ್ನ ಮೊರೆಯಾಲಿಸೊ
ನಿನ್ನ ಸೇವಕರ ಬಲು ಬನ್ನ ಬಡಿಸಲು ಸಲ್ಲ
ಇನ್ನು ನೀ ಕರುಣಿಪುದು ವರದೇಶ ವಿಠಲ [೫]


hari ninna karuNavirAlAva Bayavu
smaraNi mAtradi sakala duritagaLa pariharipa [pa]

saNNa vayadali SrI jagannAtha dAsArya
banna baDutire vyAdhi pIDeyiMda
Ganna karuNABdi SrI gOpAladAsarA –
binnapavanAlisi rOga mOcana gaida [1]

dAsakula ratna prANESa dAsAryara
AsuvaMSada taruLa rOgadiMdA
yAsa baDuvadu kELi, ASeyane toredihanu
nI salaha bEkayyA karuNadiMdali nODi [2]

varadEMdra guruvarara surucirAlayadalli
iraL-hagalu nimma nAma smarisuvaMtha
taruLa nI pari pIDisuvaducitavEno SrI
hari vicArisi nInesi dayadiMda nODo [3]

vAsavAdyamaranuta vAsudEvane nInu
I samayadoLagivana karuNadiMda
pOShisalu ninna poMdiruva sad Baktara
dAsaneMdenisi jIvisaliyanavarata [4]

ninnanE naMbiruve ninnanE prArthisuve
dhanvaMtri nInenna moreyAliso
ninna sEvakara balu banna baDisalu salla
innu nI karuNipudu varadESa viThala [5]

Leave a Reply

You might also like

error: Content is protected !!