Composer : Shri Jagannatha dasaru
ಶ್ರೀ ಅಗ್ನಿದೇವರ ಸ್ತೋತ್ರ
ದೇವಮುಖ ಎನ್ನಯ ಕರಾವಲಂಬನವಿತ್ತು
ಪಾವಕರಿಗೊಲಿದು ಭವತಾಪ | ಭವತಾಪ ಪರಿಹರಿಸು
ಪಾವಕನ ಜನಕ ಪ್ರತಿದಿನ || ೧ || || ೩೮೧ ||
ಹುತವಹನೆ ಎನ್ನ ದುರ್ಮತಿಯ ಪರಿಹರಿಸಿ ಸ –
ದ್ಗತಿಯ ಪಥ ತೋರೋ ದಯದಿಂದ | ದಯದಿಂದ ನಿತ್ಯ ನಾ
ನುತಿಸುವೆನು ನಿನ್ನ ಕರುಣಾಳೋ || ೨ || || ೩೮೨ ||
ಕೃಷ್ಣವರ್ತ್ಮನೆ ಎನ್ನ ದುಷ್ಟಕರ್ಮವ ನೋಡಿ
ಭ್ರಷ್ಟನೆನ್ನದಲೆ ಸಂತೈಸು | ಸಂತೈಸು ಭಾರ್ಗವಗ –
ಧಿಷ್ಠಾನನೆಂದು ಮೊರೆಹೊಕ್ಕೆ || ೩ || || ೩೮೩ ||
ರುದ್ರಾಕ್ಷಗನೆ ಮಹೋಪದ್ರವವ ಪರಿಹರಿಸು
ಭದ್ರಪ್ರಕಾಶ ಮಹಭದ್ರ | ಮಹಭದ್ರ ವಿಖ್ಯಾತಕರುಣಾಸ –
ಮುದ್ರ ಶರಣೆಂಬೆ || ೪ || || ೩೮೪ ||
ಕಡಲ ಒಡಲೊಳಗಿದ್ದು ಬಡಬಾಗ್ನಿ ಎನಿಸುವಿ
ಅಡವಿಯೊಳಗಿದ್ದು ದಾವಾಗ್ನಿ | ದಾವಾಗ್ನಿಯೆನಿಸುವಿ
ಪೊಡವಿಯೊಳು ಭೌಮ ಎನಿಸುವಿ || ೫ || || ೩೮೫ ||
ಶುಚಿನಾಮಕನೆ ಮನೋವಚನಾದಿಗಳ ದೋಷ –
ನಿಚಯಗಳನೆಣಿಸಿ ದಣಿಸದೆ | ದಣಿಸದೆ ಮಚ್ಚಿತ್ತ
ಖಚಿತವನು ಮಾಡೋ ಹರಿಯಲ್ಲಿ || ೬ || || ೩೮೬ ||
ವೀತಿಹೋತ್ರನೆ ಜಗನ್ನಾಥವಿಟ್ಠಲನ ಸಂ –
ಪ್ರೀತಿಪೂರ್ವಕದಿ ತುತಿಸುವ | ತುತಿಸಿ ಹಿಗ್ಗುವ ಭಾಗ್ಯ
ಜಿತವಾಗಿ ಇರಲಿ ಎಂದೆಂದು || ೭ || || ೩೮೭ ||
SrI agnidEvara stOtra
dEvamuKa ennaya karAvalaMbanavittu
pAvakarigolidu BavatApa | BavatApa pariharisu
pAvakana janaka pratidina || 1 || || 381 ||
hutavahane enna durmatiya pariharisi sa –
dgatiya patha tOrO dayadiMda | dayadiMda nitya nA
nutisuvenu ninna karuNALO || 2 || || 382 ||
kRuShNavartmane enna duShTakarmava nODi
BraShTanennadale saMtaisu | saMtaisu BArgavaga –
dhiShThAnaneMdu morehokke || 3 || || 383 ||
rudrAkShagane mahOpadravava pariharisu
BadraprakASa mahaBadra | mahaBadra viKyAtakaruNAsa –
mudra SaraNeMbe || 4 || || 384 ||
kaDala oDaloLagiddu baDabAgni enisuvi
aDaviyoLagiddu dAvAgni | dAvAgniyenisuvi
poDaviyoLu Bauma enisuvi || 5 || || 385 ||
SucinAmakane manOvacanAdigaLa dOSha –
nicayagaLaneNisi daNisade | daNisade maccitta
Kacitavanu mADO hariyalli || 6 || || 386 ||
vItihOtrane jagannAthaviTThalana saM –
prItipUrvakadi tutisuva | tutisi higguva BAgya
jitavAgi irali eMdeMdu || 7 || || 387 ||

Leave a Reply
You must be logged in to post a comment.