Paposu hoduvalla

Composer : Shri Mohana dasaru

By Smt.Shubhalakshmi Rao

ಪಾಪೋಸು ಹೋದುವಲ್ಲಾ [ಪ]
ಅಪಾರ ಜನ್ಮದಿಂದ ಆರ್ಜನ ಮಾಡಿದ [ಅ.ಪ]

ಉರುಗಾದ್ರಿಯಲ್ಲಿ ಸ್ವಾಮಿ ಪುಷ್ಕರಣಿ ಮೊದಲಾದ
ಪರಿಪರಿ ತೀರ್ಥ ಸ್ನಾನಗಳ ಮಾಡಿ
ಹರಿದಾಸರ ಕೂಡ ಶ್ರೀನಿವಾಸನ ಮೂರ್ತಿ
ದರುಶನದಲಿ ಮೈಮರೆತು ಇದ್ದೆನು ಎನ್ನ [೧]

ಪರಮ ಭಾಗವತರು ಹರಿಕಥೆ ಹೇಳಲು
ಪರಮ ಹರುಷದಿಂದ ಕೇಳುತಿದ್ದೆ
ಪರಮ ಪಾಪಿಷ್ಠರ ಪಾಲಾಗಿ ಹೋದಾವು
ಪರಮಾತ್ಮನ ಚಿತ್ತಕೆ ಬಂದಿತೀಗೆನ್ನ [೨]

ಮಾಯಿ ಒಲಿದು ಎನಗೆ ಕೊಂಡು ಕೊಟ್ಟಿದ್ದಳು
ದಾಯಿಗಾರರು ನೋಡಿ ಸಹಿಸಲಿಲ್ಲಾ
ಮಾಯಾರಮಣ ನಮ್ಮ ಮೋಹನ್ನ ವಿಠಲನ್ನ
ಮಾಯದಿಂದಲಿ ಮಟ್ಟವಾಯಿತು ಎನ್ನ [೩]


pApOsu hOduvallA [pa]
apAra janmadiMda Arjana mADida [a.pa]

urugAdriyalli svAmi puShkaraNi modalAda
paripari tIrtha snAnagaLa mADi
haridAsara kUDa SrInivAsana mUrti
daruSanadali maimaretu iddenu enna [1]

parama BAgavataru harikathe hELalu
parama haruShadiMda kELutidde
parama pApiShThara pAlAgi hOdAvu
paramAtmana cittake baMditIgenna [2]

mAyi olidu enage koMDu koTTiddaLu
dAyigAraru nODi sahisalillA
mAyAramaNa namma mOhanna viThalanna
mAyadiMdali maTTavAyitu enna [3]

Leave a Reply

You might also like

error: Content is protected !!