Composer : Shri Helavanakatte Giriyamma
ಕಡೆಗಣ್ಣಲಿ ನೀ ನೋಡದಿರೆನ್ನಯ್ಯ |
ಬಿಡ ಬೇಡವೊ ಕೈಯ್ಯ |
ಬಡವರ ಬಂಧು ಬಹು ಕೃಪಾಸಿಂಧು |
ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ || ಪ ||
ಶತ ಅಪರಾಧವ ಮಾಡಿದೆನಯ್ಯ |
ಸೇರಿದೆ ನಾ ನಿನ್ನ ಬೆನ್ನಾ
ಅತಿ ಪಾತಕಿ ಅಜಾಮಿಳನ ಉದ್ಧರಿಸಿದೆ |
ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ || ೧ ||
ನೆಲೆಗಾಣದೆ ನಾನಾ ಪರಿ ಚಿಂತೆಗೆ |
ಒಳಗಾದೆನೊ ನಾ ಹೀಗೆ
ಬಳಲಿಸ ಬ್ಯಾಡವೊ ಭಕ್ತ ಕುಟುಂಬಿ |
ನಳಿನದಳಾಂಬಕ ನೀ ಸಲಹೆನ್ನನು || ೨ ||
ಸಾರಿ ಪೇಳುವೆ ಎನ್ನಯ ಬಳಗದ |
ಆರಭಾರವು ನಿನ್ನದು
ಹೇರೊಪ್ಪಿಸಿದ ಮ್ಯಾಲ್ಯಾತರ ಸುಂಕವು |
ಕಾರುಣ್ಯನಿಧಿ ಹೆಳವನಕಟ್ಟೆ ರಂಗಯ್ಯಾ || ೩ ||
kaDegaNNali nI nODadirennayya |
biDa bEDavo kaiyya |
baDavara baMdhu bahu kRupAsiMdhu |
oDeya nInallade enage byArillavo || pa ||
Sata aparAdhava mADidenayya |
sEride nA ninna bennA
ati pAtaki ajAmiLana uddhariside |
pRuthiviyoLage birudAMta SrIkAMta || 1 ||
nelegANade nAnA pari ciMtege |
oLagAdeno nA hIge
baLalisa byADavo Bakta kuTuMbi |
naLinadaLAMbaka nI salahennanu || 2 ||
sAri pELuve ennaya baLagada |
AraBAravu ninnadu
hEroppisida myAlyAtara suMkavu |
kAruNyanidhi heLavanakaTTe raMgayyA || 3 ||

Leave a Reply
You must be logged in to post a comment.