Composer : Shri Harapanahalli Bheemavva
ರುದ್ರಕುಮಾರನ ಚರಣಕೆ ವಂದನೆ ಮಾಡಿ
ವಿದ್ಯಾಭಿಮಾನಿ ವಾಣಿಯ
ಸುಪದ್ಮ ಪಾದಗಳಿಗೆ ಎರಗಿ ನಾ ಪೇಳುವೆ
ಶುದ್ದಾಗಿ ಕೊಡು ಮತಿಯ (೧)
ಶ್ರಾವಣಮಾಸ ಶುಕ್ಕುರುವಾರ ಶುಭಮುಹೂರ್ತ
ಕಾಲದಿ ಕಮಲಾಕ್ಷಿಯನು
ಆಲಯದೊಳಗೆ ಇಟ್ಟು ಆದರದಿಂದ ಪೂಜಿಸಿ
ಬೇಡಿದ ಅಭೀಷ್ಟ ನೀಡುವಳು (೨)
ಇರುತಿರಲು ಒಂದು ಪಟ್ಟಣದಲ್ಲಿ ರಾಜನು
ತನಯರು ಇಲ್ಲದ ಕಾರಣವು
ವಿವಾಹದ ಉತ್ಸವಕೆಂದು ತೆರಳೋ ಪತಿಯ ಕಂಡು
ತೆಗೆದಿಟ್ಟಳು ಆತನ ಆಯುಧವ (೩)
ಪಟ್ಟದ ಕತ್ತಿಯ ಬಿಟ್ಟು ಬಂದೆನೆಂದು
ಅಟ್ಟಿಹ ತನ್ನ ದೂತರನು
ನೆಟ್ಟನೆ ಎರಡು ಕಾಲು ಚಾಚಿ ಕುಳ್ಳಿರಲು ಆಗ
ತಟ್ಟನೆ ದಾಟಿ ನಡೆದನು (೪)
ಮೂರು ತಿಂಗಳು ಗರ್ಭವಾಸಕ್ಕಾಗಿ ಬಂದಿತು
ನೀನು ಈಗ ದಾಟಿ ಪೋಗುವರೆ
ಕೇಳಿ ಸಂಭ್ರಮದಿಂದ ಹೇಳೆ ರಾಜಗೆ ಬಂದು
ತಾಳಿದ ಪರಮ ಹರುಷವನು (೫)
ಸದ್ದು ಮಾಡದೆ ಸೂಲಗಿತ್ತಿಯ ಕರೆಸಿ
ತಾನು ಇದ್ದ ವಾರ್ತೆಗಳ ಹೇಳಿದಳು
ಮುದ್ದುಕೂಸಿನ ತಂದು ಕೊಟ್ಟರೆ ನಿನಗೀಗ
ಮುತ್ತಿಲು ತುಂಬ ಹೊನ್ನು ಕೊಡುವೆ (೬)
ಹುಡುಕುತ ಬಂದಳು ಕಡೆಯ ಬಜಾರಕ್ಕೆ
ಬಡವ ಬ್ರಾಹ್ಮಣನ ಮಂದಿರದಿ
ಬಡದಿಗೆ ಮೂರು ತಿಂಗಳು ಗರ್ಭವಾಗಿದೆ
ಕಡೆಹಾಯಿಸಲು ಎನ್ನ ಕರೆಸೆಂದಳು (೭)
ಮೂರು ತಿಂಗಳ ರಾಜನರಸಿಗೆ ಮೊಗ್ಗೆಯು
ಏಳುತಿಂಗಳು ಹೂವ ಮುಡಿಸಿ
ಎಂಟು ತಿಂಗಳಿಗೆ ಸೀಮಂತದ ಉತ್ಸವ ಮಾಡಿ
ಬಂತಾಗ ನವಮಾಸಗಳು (೮)
ವಿಪ್ರನ ಮಡದಿಗೆ ಒತ್ತಿ ಬಂದವು ಬ್ಯಾನೆ
ಕಟ್ಟಿ ಕಣ್ಣುಗಳ ನಿಚ್ಚಣಿಕೆ
ಹತ್ತಿ ಇಳಿದು ಹಡೆದಳು ಗಂಡುಕುಮಾರನ
ಎತ್ತಿಕೊಂಡು ಒಯ್ದಳು ಆ ಕ್ಷಣವೆ (೯)
ಕಲ್ಲುಗುಂಡನೆ ಹಡೆದಿಯೆ ನೀನು ಎಂಬಂಥ
ಸೊಲ್ಲು ಕೇಳುತಲೆ ತಲ್ಲಣಿಸಿ
ಎಲ್ಲಿದ್ದರೆನ್ನ ಕುಮಾರನು ಸುಖದಿ
ಬಾಳಲೆಂದಲ್ಲಿ ನೇಮವ ನಡೆಸಿದಳು (೧೦)
ಇತ್ತ ಕೂಸಿಗೆ ಮಧುವಿಟ್ಟು ಜಾತಕ ಬರೆಸಿ
ಸಕ್ಕರೆ ಸಗಟದಿಂದ ಹಂಚಿ
ದಕ್ಷಿಣೆ ತಾಂಬೂಲ ಸಹಿತ ಬ್ರಾಹ್ಮಣರಿಗೆಲ್ಲಾ
ಇಟ್ಟು ಭೋಜನವ ಮಾಡಿಸಿದ (೧೧)
ನಾಮಕರಣ ಜಾವಳ ಜುಟ್ಟು ಉಪನಯನ
ಪ್ರೇಮದಿಂದ ವಿದ್ಯವ ಕಲಿಸಿ
ಸೋಮನಂದದಿ ಹೊರಗೆ ಹೊರಟ ತಮ್ಮಮ್ಮನ
ನೋಡಿ ಮೋಹಿಸಿದನಾಕ್ಷಣದಿ (೧೨)
ಕತ್ತಲೊಳಗೆ ಬರುತಿರಲು ಬಾಗಿಲ ಮುಂದೆ
ಕಟ್ಟಿದ್ದ ಗೋವು ಕಾಣದಲೆ
ವತ್ಸದ ಕಾಲು ತುಳಿಯಲಾಗ ಅದು ಬಾಯಿ
ಬಿಟ್ಟು ಒದರಿತು ಭಯದಿಂದ (೧೩)
ಅಮ್ಮ ನೀ ಬಾರೆ ತಮ್ಮ ಅಮ್ಮನ ಅರಿಯದವ
ನಮ್ಮನ್ನು ಬಲ್ಲನೆ
ಒಮ್ಮೆ ಅಲ್ಲದೆ ಎರಡು ಬಾರಿ ಆಲಿಸಿ ಅದರ ಮಾತು
ತಮ್ಮ ಹಿರಿಯರನ್ನು ಕೇಳಿದನು (೧೪)
ಮಂದಾಕಿನಿಯ ಸ್ನಾನವ ಮಾಡಿ ಬಂದರೆ
ಸಂದೇಹ ಪರಿಹಾರವಾಗುವುದು ಹಾಗೆಂದು
ಹೇಳಿದ ಹಿರಿಯರ ವಾಕ್ಯವ ಕೇಳಿ
ಗಂಗಾಯಾತ್ರೆಗೆ ತೆರಳಿದನು (೧೫)
ನಡೆದು ಬಂದನು ನಡುಮಾರ್ಗದಿ ಪಟ್ಟಣ
ಹಡೆದ ಮನೆಯ ಬಾಗಿಲಲ್ಲಿ
ಕೊಡಬೇಕು ನಮಗೆ ಇಷ್ಟು ಸ್ಥಳಗಳೆಂದೆನುತಲಿ
ನುಡಿದು ಪವಡಿಸಿದ ತಾನಲ್ಲಿ (೧೬)
ಹೊರಗಿಂದ ಬಂದ ಶೆಟವಿ ಬಂದಳು ಮಹಾಲಕ್ಷುಮಿ
ಒಳಗಿಂದ ಬಂದಳು
ಎನ್ನ ವರಪುತ್ರ ಇವನ ದಾಟಲು ನಿನ್ನ ಶಿರವು
ಸಿಡಿದು ಸಹಸ್ರ ಹೋಳಾಗೋದೆನಲು (೧೭)
ಅದು ಕೇಳಿ ಶೆಟವಿ ತಾ ತಿರುಗಿ ಪೋಗುತಲಿರೆ
ಬದಿಯಲ್ಲಿ ಬದುಕಿದ್ದ ಶಿಶುವು
ಇದು ನಿನ್ನ ಪುಣ್ಯದಿಂದ ಉಳಿದಿತೆಂದು ಎನುತಲಿರೆ
ಅಧಿಕ ಸಂತೋಷವಾಗಿ ಹೊರಟು (೧೮)
ಭಾಗೀರಥಿಯ ಸ್ನಾನವ ಮಾಡಿ ತಾನು
ಪ್ರಯಾಗಕ್ಕೆ ನಡೆತರಲು
ಬ್ಯಾಗ ಮಾಡಿದ ದಾನ ಧರ್ಮಕಾರ್ಯಗಳ
ತಾನಾಗ ಕಂಡನು ಚತುರ್ಹಸ್ತ (೧೯)
ನಾಲ್ಕು ಹಸ್ತಗಳ ಕಂಡ ಕಾರಣ ಏನೆಂದು
ವ್ಯಾಕುಲದಿಂದ ಕೇಳಿದನು
ಸಾಕಿದವರು ಹಡೆದವರು ಉಂಟು ನಿನಗೆಂದು
ವಿವೇಕ ಬುದ್ಧಿ ಅವರು ಹೇಳಿದರು (೨೦)
ಗೊತ್ತಿಲೆ ಬಂದನು ಪಟ್ಟಣದೊಳಗೊಂಡು
ಹೆತ್ತ ಆರುದಿನದ ಮಂದಿರದಿ
ಹೊಸ್ತಿಲೊಳಗೆ ಅಡ್ಡ ಮಲಗಿದ್ದ ಕಾಲಕ್ಕೆ
ಮತ್ತಾಗ ಬಂದಳು ಶೆಟವಿ (೨೧)
ಚೊಚ್ಚಿಲ ಮಗನ ದಾಟಲು ನಿನ್ನ ಶಿರವು
ಬಿಚ್ಚಿ ಸಹಸ್ರ ಹೋಳಾಗೋದು ಎನಲು
ಲಕ್ಷ್ಮೀ ಮಾತಿಗೆ ತಿರುಗಿದಳೆನ್ನ ತುತ್ತಿಗೆ
ಮಿರ್ತ್ಯಾದ ಪಾಪಿ ಎಂದೆನುತ (೨೨)
ಸತ್ಯವಂತನೆ ನಿನ್ನ ಪುಣ್ಯದಿಂದ ಇಬ್ಬರು
ಪುತ್ರರು ಉಳಿದರೆಂತಿಹರು
ಅರ್ಥಿಯಿಂದವರ ಮಾತುಗಳ ಕೇಳುತ
ತನ ಪಟ್ಟಣಕ್ಕೆ ನಡೆತಂದ (೨೩)
ಗಂಗಾಸ್ನಾನವ ಮಾಡಿಕೊಂಡು ಕಾವಡಿ ಹೊತ್ತು
ಬಂದ ಶ್ರಾವಣಮಾಸದಲ್ಲಿ
ಅಂದಿನಾರಭ್ಯ ಬ್ರಾಹ್ಮಣರಿಗೆ ಮೃಷ್ಟಾನ್ನ
ಕುಟುಂಬ ಭೋಜನವ ಮಾಡಿಸಿದ (೨೪)
ನಿತ್ಯ ನಿತ್ಯದಿ ಭಕ್ಷ್ಯ ತುಪ್ಪ ಮಂಡಿಗೆ ಕ್ಷೀರ
ಸಕ್ಕರೆ ಸೂರೆ ಮಾಡುತಲಿ
ಗೊತ್ತಾಗದೆನ್ನ ಕಾರ್ಯಗಳು ಪಟ್ಟಣದೊಳು
ಮತ್ತ್ಯಾರು ಉಳಿದವರೆಂದ (೨೫)
ಪಟ್ಟಣದೊಳು ಬಡ ಬ್ರಾಹ್ಮಣನರಸಿಯು
ನಿಷ್ಟೆಲಿ ವ್ರತದಿಂದ ಇರುವಳು
ಎಷ್ಟು ಕರೆದರು ಬಾರಳಾಕೆ ಶ್ರೀಗೌರಿಯ
ಶುಕ್ರವಾರದ ವ್ರತವಂತೆ (೨೬)
ನಾನೆ ಬರಲೊ ತನ್ನ ಮಂದಿರಕಾಗಲೆ
ತಾನೆ ಬರುವಳೊ ನಮ್ಮ ಮನೆಗೆ
ಮಾಡಿದ ಅಪ್ಪಣೆ ಜುಲುಮಾನೆಯ ಕೊಡುವೊಳೆ
ಕೇಳಿ ಬನ್ನಿ ಎಂದು ಕಳಿಸಿದನು (೨೭)
ಇಷ್ಟು ಛಲಗಳು ಯಾತಕೆ ಈಗ ಬರುವೆನೆಂದು
ಲಕ್ಷ್ಮೀದೇವೇರ ಪೂಜೆ ಮಾಡಿ
ಭಕ್ತಿಯಿಂದ ಆರತಿ ಮಟಿಗೆಯನೆ ಉಡಿಕಟ್ಟಿ
ಬಂದಳು ಭಾಗ್ಯಶಾಲಿ (೨೮)
ಬರುತಿರಲು ಆಗ ಅಂಗನೆ ಅರಮನೆಯಿಂದ
ಹರಿದ ಅಕ್ಕಿ ಕಚ್ಚು ಕಾಣುತಲಿ
ಸ್ಥಿರವಾಗಲಿ ಎನ್ನ ಕುಮಾರಗೆ ಆಯುಷ್ಯಗಳೆಂದು
ಬದಲು ಮಾರ್ಗದಲಿ ನಡೆದಳು (೨೯)
ಮೂರುಕಾಲಿನ ಮಣೆ ಮುಂದೆ ತಂದಿಟ್ಟರೆ
ಕೂಡಲಾಗದು ನಮ್ಮ ವ್ರತವು
ಹಾಗಲಹಂದರ ಪೋಗಲು ಹಸಿರು ಬಳೆಯ ಬಿಟ್ಟು
ನೀಲನಿಟ್ಟಳು ಕರದಲ್ಲಿ (೩೦)
ಹಸಿರು ಪೀತಾಂಬರ ಹಸನಾದ ಕುಡಿ ಎಲೆ
ಹೊಸಮೊರದೊಳಗೆ ಅನ್ನವನು
ಬಿಸಿ ಬಿಸಿ ಮೊಗೆಯಲಿ ಸಾರು ತಂದು ಹಾಕಲು
ಶಶಿಮುಖಿ ಅದು ಒಲ್ಲೆನೆನುತಲಿ (೩೧)
ಕಂದು ಕೆಂಪಿನ ಪೀತಾಂಬರವ ಉಡುಕೊಟ್ಟು
ಛಂದವಾದೆಲೆಯ ಹಾಕಿದರು
ಬಂಗಾರ ಹರಿವಾಣದೊಳಗೆ ಅನ್ನವು ಬೆಳ್ಳಿ
ತಂಬಿಗೆ ಸಾರು ಬಡಿಸಿದರು (೩೨)
ಬಡವನ ಮಡದಿಯ ಬಡಿವಾರ ನೋಡಿರೆ
ಸಡಗರ ಬಂತೇನು ಇವತ್ತೇ
ಪಡೆದಳಾ ಅರಸಿನ ಐಶ್ವರ್ಯವೆನುತಲಿ
ನುಡಿದರು ಜನರು ಹಾಸ್ಯದಲಿ (೩೩)
ಉಟ್ಟ ಪೀತಾಂಬರ ಕಟ್ಟಿದ ಉಡಿದಾರ
ರತ್ನದ ಕಡಗ ಕೈಯಲ್ಲಿ
ಪಚ್ಛದ ಪದಕ ಮುತ್ತಿನ ಕಂಠಿ ಕೊರಳಲ್ಲಿ
ಪುತ್ಥಳಿ ಸರ ಹೊಳೆಯುತಲಿ (೩೪)
ನೀಲ ಮಾಣಿಕ್ಯದ ವಜ್ರದ ಹರಳಿನ ಉಂಗುರಗಳು
ಆಣಿ ಮುತ್ತಿಟ್ಟು ಕಿವಿಯಲ್ಲಿ
ಪಾಣಿಯ ಮುಗಿದು ಬ್ರಾಹ್ಮಣರಿಗೆ
ಭೋಜನಕೆ ಉಪಚಾರ ಮಾಡುತಲಿ ತಾ ಬಂದ (೩೫)
ದೊರೆಯು ತುಪ್ಪವ ಬಡಿಸುತಲಿ ಸಾಲೆಡೆಯಲ್ಲಿ
ಬರುತಿರೆ ತಾಯಿಸ್ತನಗಳು ಭರದಿಂದ
ಉಕ್ಕೇರಿ ಬಂದವು ಕ್ಷೀರಮುಖದಲ್ಲಿ
ತೊರೆದು ಚಿಮ್ಮಿದವು ಆ ಕ್ಷಣದಿ (೩೬)
ಹಾಲು ಬಿದ್ದರೆ ತನ್ನ ಶಾಲಿನಿಂದ ಒರೆಸುತ್ತಾ
ಮಹಲಿನ ಮ್ಯಾಲೆ ನಡೆದನು
ಆಲಯಕ್ಕೆ ಅವರನು ಬಿಡದಂತೆ ಅಪ್ಪಣೆ ಮಾಡಿ
ತಾ ಮಲಗಿದ ಮಂಚದಲ್ಲಿ (೩೭)
ಹುಟ್ಟಾ ಬಡವಿಯ ದೌಲತ್ತನೆ ನೋಡಿರೆ
ಉಟ್ಟಳು ಪೀತಾಂಬರವ
ಗಟ್ಟಿಯಾಗಿ ಸೆರಗೊ ಹೊದಿಯದೆ ತನ್ನ ಮಾನವ
ಬಿಟ್ಟಳೆಂದು ಆಡಿಕೊಂಬುವರು (೩೮)
ಎತ್ತನೋಡಿದರಿಲ್ಲ ಚಿತ್ತ ಚಂಚಲವಾಗಿ
ಮತ್ತೆಲ್ಲೂ ಮಗನ ಕಾಣದಲೆ
ಹತ್ತಿ ಬಂದಳು ಮಹಲಿನಲ್ಲೇ ಮಂಚದಿ
ಮಲಗಿಪ್ಪೋ ಸುತನ ಕಂಡಳಾಗ (೩೯)
ಏನು ಕಾರಣ ಮಲಗಿದಿ ಮಾತನಾಡೆಂದು
ಲಾಲಿಸಿ ಮಗನ ಮುದ್ದಿಸುತ
ಬಾಲಕ ನೀನಿಷ್ಟು ಬಳಲುವುದು ಯಾಕೆಂದು
ಕೇಳಿದಳು ಅತಿ ಮೋಹದಿಂದ (೪೦)
ಹಡೆವರು ಯಾರೆ ಎನ್ನೊಡನೆ ನೀ ಹೇಳೆಂದು
ಬಿಡು ಭಯ ಬೇಡವೆಂದೆನುತ
ಹಡೆಯಲಿಲ್ಲವೋ ಎನ್ನ ಮ್ಯಾಲೆ ರಾಜನು ಒಬ್ಬ
ಮಡದಿಯ ತರುವೋನೆಂದೆನುತ (೪೧)
ಹೊನ್ನು ಹಣವ ಕೊಟ್ಟು ನಿನ್ನನು ತರಿಸಿದೆ
ಎನ್ನ ಕೂಸೆಂದು ಸಾಕಿದೆನು
ಇನ್ನ್ಯಾರ ಮಗನೋ ನಾನರಿಯೆನೆಂದೆನುತಲಿ
ಮನ್ನಿಸಿ ಮಾತನಾಡಿದಳು (೪೨)
ಆದರೇನಮ್ಮಯ್ಯ ರಾಜಸಿಂಹಾಸನ
ಏರಿದೆ ನಿನ್ನ ಪುಣ್ಯದಲಿ ನೀ ಮಾಡಿದ
ಉಪಕಾರ ಮರೆಯಲಾರೆನೆಂದು
ಪಾದಕ್ಕೆ ಬಂದೆರಗಿದನು (೪೩)
ಬಣ್ಣದ ಅಂದಣ ಕಳಿಸಿದ ಸೂಲಗಿತ್ತಿಗೆ
ಮನ್ನಿಸಿ ಮಣೆಯನು ಹಾಕಿದರು
ಅಣ್ಣಯ್ಯ ಕರೆಸಿದ ಕಾರಣೇನೆಂದು
ಬಣ್ಣಿಸಿ ಬಂದು ಕುಳಿತಳು (೪೪)
ಎತ್ತಣಿಂದಲಿ ಎನ್ನ ತಂದೆ ವಾರ್ತೆಗಳನು
ಸತ್ಯವಾಗಿ ಹೇಳಬೇಕೆನುತ ವಿಪ್ರಸುತ
ನಿನ್ನಿಲ್ಲಿಗೆ ತಂದುಕೊಟ್ಟೆನೋ
ಮುತ್ತಿಲು ಹೊನ್ನಿಗೆ ಆಸೆ ಮಾಡಿ (೪೫)
ಹಾಕಿದೆ ಕಲ್ಲುಗುಂಡನು ನಿಮ್ಮಮ್ಮಗೆ
ಹಾಕ್ಯಾ ಮಾತುಗಳ ಆಡಿದೆನು
ಗೋಕುಲಕೊಳು ಕೃಷ್ಣ ಬಂದಂತೆ ನಿನ್ನ
ತಂದೆ ಸಾಕಿದಳು ಯಶೋಧೆಯಂತೆ (೪೬)
ಮಕ್ಕಳನಗಲಿ ದೇವಕ್ಕಿಯಂದದಿ ನಿನ್ನ
ಹೊಸ್ತಿಲೊಳಗೆ ಕುಳಿತಿಹರು
ಅಕ್ಕರದಿಂದ ಅವರ ಕೂಡೆಂದುನುತಲಿ
ಹಸ್ತವ ಮುಗಿದು ಹೇಳಿದಳು (೪೭)
ಮುದುಕಿ ಮಾತನು ಕೇಳಿ ಪದಕ ಮುತ್ತಿನ ಸರ
ನಗುತ ಹಾಕಿ ಕೊರಳಲ್ಲೇ
ಜರತಾರಿ ಸೀರೆ ಕುಪ್ಪುಸ ಉಡುಗೊರೆ ಕೊಟ್ಟು
ಕರೆಸಿದ ತಾಯಿ ತಂದೆಯರ (೪೮)
ಕರೆದರು ಎಂದರೆ ಕಂಪ ಹುಟ್ಟಿತು ದೇಹದಿ
ಸುರಿಸುತ ಕಣ್ಣ ಜಲಗಳ
ದೊರೆತನಕ್ಕೆದುರು ನಾವೇನೆಂದು ಮನದಲ್ಲಿ
ಮರಗುತ ಯೋಚನೆಯ ಮಾಡಿದಳು (೪೯)
ಬಡಿಸೋನೋ ಬೈದು ಬಿಡುವನೋ ಕೈಯಿಂದಲಿ
ಕೊಡಿಸೋನೊ ಜುಲುಮಾನವ
ಇಡಿಸೋನೋ ಸೆರೆಮನೆ ಒಳಗೆ ನಮ್ಮಿಂದಲಿ
ನುಡಿಸಿ ಬಿಡುವನೋ ತಪ್ಪೆನುತಾ (೫೦)
ಏನು ಮಾಡುವನೋ ಬಂದ ಜನರೊಳು ನಮ್ಮ
ಮಾನವ ಕಳೆದು ಬಿಡುವನೋ
ಮಾನಾಭಿಮಾನ ನಿನ್ನದು
ಮಹಲಕ್ಷುಮಿ ಪಾದವೇ ಗತಿ ಎಂದರಾಗ (೫೧)
ನಡುಗುತ ಬಂದರು ಮುಡಿಯ ಮುಂದಕೆ ಬಾಗಿ
ಕಡು ಚಿಂತೆಯಿಂದ ನಿಂತಿರಲು
ಹಡೆದ ತಾಯಿ ತಂದೆ ನೀವೇ ಏನು ಎಂದು
ನುಡಿದು ತಾ ಚರಣಕ್ಕೆರಗಿದನು (೫೨)
ಕಂದ ನಾನೆಂದರೆ ಸಂಭ್ರಮವಾದ
ಆನಂದ ಬಾಷ್ಪಗಳು ಉದುರಿದವು
ತಂದೆ ತಾಯಿ ಮಕ್ಕಳೊಂದಾದರೆನುತಲಿ
ದುಂದುಭಿ ಭೇರಿ ಬಡಿದವು (೫೩)
ಹರುಷದಿಂದ ಇಬ್ಬರೂ ಒಂದಾಗಿ ತಾಯಂದಿರು
ಬರೆಸಿದರಾಗ ಪತ್ರಿಕವ
ಕರೆಸಿದರು ಬಂಧು ಬಳಗ ನಿಬ್ಬಣವನ್ನು
ಅರಸ ಮದುವೆ ಸಂಭ್ರಮದಿ (೫೪)
ಹಾದಿಗೆ ಹಂದರ ಹಾಕಿ ಮೇಲೆ ತೋರಣ ಕಟ್ಟಿ
ಬೀದಿ ನೌಬತ್ತು ವಾಲಗವು
ಬ್ರಾಹ್ಮಣರೆಲ್ಲರು ನೆರೆದರು ನಾಲ್ಕು
ವೇದವ ಹೇಳುತ ಮಂಗಳಾಷ್ಟಕವ (೫೫)
ವಲ್ಲಭನೆದುರಿಗೆ ಚೆಲ್ವ ಸತಿಯ ತಂದು
ಚೆಲ್ಲುತ ಮಂತ್ರಾಕ್ಷತೆಯ
ಮಲ್ಲಿಗೆ ಬಾಸಿಂಗವನು ಕಟ್ಟಿ ಕೊರಳ
ಮಾಂಗಲ್ಯ ಬಂಧನ ಮಾಡಿದರು (೫೬)
ಹಾಗಲ ಹಂದರದೊಳಗೆ ಹಸಿರು ಪತ್ತಲ
ಕೊಟ್ಟು , ಆಗ ನೇಮ ಬಿಡಿಸಿದರು
ಡಾಗುಕುಡಿಬಾಳೆ ಎಲೆಯ ಭೂಮವನುಂಡು
ನಾಗವಲಿಗಳ ಮಾಡಿದರು (೫೭)
ಮುತ್ತಿನ ಪಲ್ಲಕ್ಕಿ ಒಳಗೆ ಶ್ರೀಗೌರಿಯ
ಪಟ್ಟಣದೊಳು ಮೆರೆಸುತಲಿ
ಅರ್ಥಿಯಿಂದಲಿ ಬಂದು ಅರಸು ಸಿಂಹಾಸನಕ್ಕೆ
ಒಪ್ಪಿದಳು ಆಗ ಮಹಲಕ್ಷ್ಮೀ (೫೮)
ಅರಿಷಿಣ ಕುಂಕುಮ ಅರಳು ಮಲ್ಲಿಗೆ ಗಂಧ
ಪರಿಪರಿ ಭಕ್ಷ್ಯ ಪಾಯಸವು
ನರಸಿಂಹನರಸಿಗೆ ಅರ್ಪಿಸುತ ಆರತಿ ಮಾಡೆ
ಹರುಷದಿಂದ ವರವ ನೀಡುವಳು (೫೯)
ಮಂಗಳ ಜಯವೆನ್ನಿ ಮಂಗಳ ಶುಭವೆನ್ನಿ
ಮಂಗಳಾಂಗನೆ ಮಹಾಲಕ್ಷ್ಮೀ
ಕಂಗಳು ತೆರೆದು ಕಟಾಕ್ಷದಿ ನೋಡಲು
ಹಿಂಗೋದು ಸಕಲ ಪಾಪಗಳು (೬೦)
ಬಿತ್ತಿದ ಬೆಳೆರಾಸಿ ಒಕ್ಕುವ ಧಾನ್ಯವು
ಉಕ್ಕುವ ಕ್ಷೀರದಂದದಲಿ
ಲೆಕ್ಕವಿಲ್ಲದೆ ಮಕ್ಕಳಾಗೋರು ಮನೆತುಂಬ
ಮುತ್ತೈದೆತನವ ನೀಡುವಳು (೬೧)
ತಾ ಸುರ ಕಾಮಧೇನುವಿನಂತೆ ಬಂದು
ಭೀಮೇಶಕೃಷ್ಣನ ಸಹಿತಾಗಿ
ಲೇಸಾದ ಸಕಲ ಸಂಪತ್ತನೆ ಕೊಟ್ಟು ತಾ
ವಾಸ ಮಾಡೋಳು ಮನೆಯಲ್ಲಿ (೬೨)
SrAvaNa saMpattu SukravArada hADu
rudrakumArana caraNake vaMdane mADi
vidyABimAni vANiya
supadma pAdagaLige eragi nA pELuve
SuddAgi koDu matiya (1)
SrAvaNamAsa SukkuruvAra SuBamuhUrta
kAladi kamalAkShiyanu
AlayadoLage iTTu AdaradiMda pUjisi
bEDida aBIShTa nIDuvaLu (2)
irutiralu oMdu paTTaNadalli rAjanu
tanayaru illada kAraNavu
vivAhada utsavakeMdu teraLO patiya kaMDu
tegediTTaLu Atana Ayudhava (3)
paTTada kattiya biTTu baMdeneMdu
aTTiha tanna dUtaranu
neTTane eraDu kAlu cAci kuLLiralu Aga
taTTane dATi naDedanu (4)
mUru tiMgaLu garBavAsakkAgi baMditu
nInu Iga dATi pOguvare
kELi saMBramadiMda hELe rAjage baMdu
tALida parama haruShavanu (5)
saddu mADade sUlagittiya karesi
tAnu idda vArtegaLa hELidaLu
muddukUsina taMdu koTTare ninagIga
muttilu tuMba honnu koDuve (6)
huDukuta baMdaLu kaDeya bajArakke
baDava brAhmaNana maMdiradi
baDadige mUru tiMgaLu garBavAgide
kaDehAyisalu enna kareseMdaLu (7)
mUru tiMgaLa rAjanarasige moggeyu
ELutiMgaLu hUva muDisi
eMTu tiMgaLige sImaMtada utsava mADi
baMtAga navamAsagaLu (8)
viprana maDadige otti baMdavu byAne
kaTTi kaNNugaLa niccaNike
hatti iLidu haDedaLu gaMDukumArana
ettikoMDu oydaLu A kShaNave (9)
kalluguMDane haDediye nInu eMbaMtha
sollu kELutale tallaNisi
elliddarenna kumAranu suKadi
bALaleMdalli nEmava naDesidaLu (10)
itta kUsige madhuviTTu jAtaka baresi
sakkare sagaTadiMda haMci
dakShiNe tAMbUla sahita brAhmaNarigellA
iTTu BOjanava mADisida (11)
nAmakaraNa jAvaLa juTTu upanayana
prEmadiMda vidyava kalisi
sOmanaMdadi horage horaTa tammammana
nODi mOhisidanAkShaNadi (12)
kattaloLage barutiralu bAgila muMde
kaTTidda gOvu kANadale
vatsada kAlu tuLiyalAga adu bAyi
biTTu odaritu BayadiMda (13)
amma nI bAre tamma ammana ariyadava
nammannu ballane
omme allade eraDu bAri Alisi adara mAtu
tamma hiriyarannu kELidanu (14)
maMdAkiniya snAnava mADi baMdare
saMdEha parihAravAguvudu hAgeMdu
hELida hiriyara vAkyava kELi
gaMgAyAtrege teraLidanu (15)
naDedu baMdanu naDumArgadi paTTaNa
haDeda maneya bAgilalli
koDabEku namage iShTu sthaLagaLeMdenutali
nuDidu pavaDisida tAnalli (16)
horagiMda baMda SeTavi baMdaLu mahAlakShumi
oLagiMda baMdaLu
enna varaputra ivana dATalu ninna Siravu
siDidu sahasra hOLAgOdenalu (17)
adu kELi SeTavi tA tirugi pOgutalire
badiyalli badukidda SiSuvu
idu ninna puNyadiMda uLiditeMdu enutalire
adhika saMtOShavAgi horaTu (18)
BAgIrathiya snAnava mADi tAnu
prayAgakke naDetaralu
byAga mADida dAna dharmakAryagaLa
tAnAga kaMDanu caturhasta (19)
nAlku hastagaLa kaMDa kAraNa EneMdu
vyAkuladiMda kELidanu
sAkidavaru haDedavaru uMTu ninageMdu
vivEka buddhi avaru hELidaru (20)
gottile baMdanu paTTaNadoLagoMDu
hetta Arudinada maMdiradi
hostiloLage aDDa malagidda kAlakke
mattAga baMdaLu SeTavi (21)
coccila magana dATalu ninna Siravu
bicci sahasra hOLAgOdu enalu
lakShmI mAtige tirugidaLenna tuttige
mirtyAda pApi eMdenuta (22)
satyavaMtane ninna puNyadiMda ibbaru
putraru uLidareMtiharu
arthiyiMdavara mAtugaLa kELuta
tana paTTaNakke naDetaMda (23)
gaMgAsnAnava mADikoMDu kAvaDi hottu
baMda SrAvaNamAsadalli
aMdinAraBya brAhmaNarige mRuShTAnna
kuTuMba BOjanava mADisida (24)
nitya nityadi BakShya tuppa maMDige kShIra
sakkare sUre mADutali
gottAgadenna kAryagaLu paTTaNadoLu
mattyAru uLidavareMda (25)
paTTaNadoLu baDa brAhmaNanarasiyu
niShTeli vratadiMda iruvaLu
eShTu karedaru bAraLAke SrIgauriya
SukravArada vratavaMte (26)
nAne baralo tanna maMdirakAgale
tAne baruvaLo namma manege
mADida appaNe julumAneya koDuvoLe
kELi banni eMdu kaLisidanu (27)
iShTu CalagaLu yAtake Iga baruveneMdu
lakShmIdEvEra pUje mADi
BaktiyiMda Arati maTigeyane uDikaTTi
baMdaLu BAgyaSAli (28)
barutiralu Aga aMgane aramaneyiMda
harida akki kaccu kANutali
sthiravAgali enna kumArage AyuShyagaLeMdu
badalu mArgadali naDedaLu (29)
mUrukAlina maNe muMde taMdiTTare
kUDalAgadu namma vratavu
hAgalahaMdara pOgalu hasiru baLeya biTTu
nIlaniTTaLu karadalli (30)
hasiru pItAMbara hasanAda kuDi ele
hosamoradoLage annavanu
bisi bisi mogeyali sAru taMdu hAkalu
SaSimuKi adu ollenenutali (31)
kaMdu keMpina pItAMbarava uDukoTTu
CaMdavAdeleya hAkidaru
baMgAra harivANadoLage annavu beLLi
taMbige sAru baDisidaru (32)
baDavana maDadiya baDivAra nODire
saDagara baMtEnu ivattE
paDedaLA arasina aiSvaryavenutali
nuDidaru janaru hAsyadali (33)
uTTa pItAMbara kaTTida uDidAra
ratnada kaDaga kaiyalli
pacCada padaka muttina kaMThi koraLalli
putthaLi sara hoLeyutali (34)
nIla mANikyada vajrada haraLina uMguragaLu
ANi muttiTTu kiviyalli
pANiya mugidu brAhmaNarige
BOjanake upacAra mADutali tA baMda (35)
doreyu tuppava baDisutali sAleDeyalli
barutire tAyistanagaLu BaradiMda
ukkEri baMdavu kShIramuKadalli
toredu cimmidavu A kShaNadi (36)
hAlu biddare tanna SAliniMda oresuttA
mahalina myAle naDedanu
Alayakke avaranu biDadaMte appaNe mADi
tA malagida maMcadalli (37)
huTTA baDaviya daulattane nODire
uTTaLu pItAMbarava
gaTTiyAgi serago hodiyade tanna mAnava
biTTaLeMdu ADikoMbuvaru (38)
ettanODidarilla citta caMcalavAgi
mattellU magana kANadale
hatti baMdaLu mahalinallE maMcadi
malagippO sutana kaMDaLAga (39)
Enu kAraNa malagidi mAtanADeMdu
lAlisi magana muddisuta
bAlaka nIniShTu baLaluvudu yAkeMdu
kELidaLu ati mOhadiMda (40)
haDevaru yAre ennoDane nI hELeMdu
biDu Baya bEDaveMdenuta
haDeyalillavO enna myAle rAjanu obba
maDadiya taruvOneMdenuta (41)
honnu haNava koTTu ninnanu tariside
enna kUseMdu sAkidenu
innyAra maganO nAnariyeneMdenutali
mannisi mAtanADidaLu (42)
AdarEnammayya rAjasiMhAsana
Eride ninna puNyadali nI mADida
upakAra mareyalAreneMdu
pAdakke baMderagidanu (43)
baNNada aMdaNa kaLisida sUlagittige
mannisi maNeyanu hAkidaru
aNNayya karesida kAraNEneMdu
baNNisi baMdu kuLitaLu (44)
ettaNiMdali enna taMde vArtegaLanu
satyavAgi hELabEkenuta viprasuta
ninnillige taMdukoTTenO
muttilu honnige Ase mADi (45)
hAkide kalluguMDanu nimmammage
hAkyA mAtugaLa ADidenu
gOkulakoLu kRuShNa baMdaMte ninna
taMde sAkidaLu yaSOdheyaMte (46)
makkaLanagali dEvakkiyaMdadi ninna
hostiloLage kuLitiharu
akkaradiMda avara kUDeMdunutali
hastava mugidu hELidaLu (47)
muduki mAtanu kELi padaka muttina sara
naguta hAki koraLallE
jaratAri sIre kuppusa uDugore koTTu
karesida tAyi taMdeyara (48)
karedaru eMdare kaMpa huTTitu dEhadi
surisuta kaNNa jalagaLa
doretanakkeduru nAvEneMdu manadalli
maraguta yOcaneya mADidaLu (49)
baDisOnO baidu biDuvanO kaiyiMdali
koDisOno julumAnava
iDisOnO seremane oLage nammiMdali
nuDisi biDuvanO tappenutA (50)
Enu mADuvanO baMda janaroLu namma
mAnava kaLedu biDuvanO
mAnABimAna ninnadu
mahalakShumi pAdavE gati eMdarAga (51)
naDuguta baMdaru muDiya muMdake bAgi
kaDu ciMteyiMda niMtiralu
haDeda tAyi taMde nIvE Enu eMdu
nuDidu tA caraNakkeragidanu (52)
kaMda nAneMdare saMBramavAda
AnaMda bAShpagaLu uduridavu
taMde tAyi makkaLoMdAdarenutali
duMduBi BEri baDidavu (53)
haruShadiMda ibbarU oMdAgi tAyaMdiru
baresidarAga patrikava
karesidaru baMdhu baLaga nibbaNavannu
arasa maduve saMBramadi (54)
hAdige haMdara hAki mEle tOraNa kaTTi
bIdi naubattu vAlagavu
brAhmaNarellaru neredaru nAlku
vEdava hELuta maMgaLAShTakava (55)
vallaBanedurige celva satiya taMdu
celluta maMtrAkShateya
mallige bAsiMgavanu kaTTi koraLa
mAMgalya baMdhana mADidaru (56)
hAgala haMdaradoLage hasiru pattala
koTTu , Aga nEma biDisidaru
DAgukuDibALe eleya BUmavanuMDu
nAgavaligaLa mADidaru (57)
muttina pallakki oLage SrIgauriya
paTTaNadoLu meresutali
arthiyiMdali baMdu arasu siMhAsanakke
oppidaLu Aga mahalakShmI (58)
ariShiNa kuMkuma araLu mallige gaMdha
paripari BakShya pAyasavu
narasiMhanarasige arpisuta Arati mADe
haruShadiMda varava nIDuvaLu (59)
maMgaLa jayavenni maMgaLa SuBavenni
maMgaLAMgane mahAlakShmI
kaMgaLu teredu kaTAkShadi nODalu
hiMgOdu sakala pApagaLu (60)
bittida beLerAsi okkuva dhAnyavu
ukkuva kShIradaMdadali
lekkavillade makkaLAgOru manetuMba
muttaidetanava nIDuvaLu (61)
tA sura kAmadhEnuvinaMte baMdu
BImESakRuShNana sahitAgi
lEsAda sakala saMpattane koTTu tA
vAsa mADOLu maneyalli (62)

Leave a Reply
You must be logged in to post a comment.