Jayarayara nodiro

Composer : Shri Vijaya dasaru

ಜಯರಾಯರ ನೋಡಿರೋ ಸಜ್ಜನರೆಲ್ಲ
ಜಯರಾಯರ ಪಾಡಿರೋ ||ಪ||

ಜಯರಾಯರ ನೋಡಿ ಜಪಿಸಿ ಮನದಿ ಪಾಡಿ
ಜಯವಾಗುವುದು ನಿಮಗೆ
ಭಯನಾಶ ಸಂತತ ||ಅ.ಪ||

ದುರುಳ ಮತವೆಂಬೊ ಕರಿಗೆ ಅಂಕುಶವಿತ್ತು
ಸುರಸಾದ ಗ್ರಂಥ ಆನಂದಮುನಿ
ವಿರಚಿಸಿ ಇರಲಾಗಿ ಪರಮ ಭಕ್ತಿಯಿಂದ ವಿ
ಸ್ತರ ಮಾಡಿದಾ ಕರದ ಕನ್ನಡಿಯಂತೆ ||೧||

ವಾದಿಗಳನ್ನೆಲ್ಲಾ ಜೈಸಿ ಡಂಗುರ ಹೊಯ್ಸಿ
ಭೇದಾರ್ಥ ಜ್ಞಾನ ಸತ್ಯವೆನಿಸಿ
ಈ ಧರಿಯೊಳಗೆ ಹರಿಯೆ ಪರ ದೈವವೆಂದು
ಸಾಧಿಸಿ ಉದ್ದಂಡವಾದ ಗುರುತಿಲಕ ||೨||

ಅಕ್ಷೋಭ್ಯ ತೀರ್ಥರ ಕರದಿಂದ ಜನಿಸಿ
ಮೋಕ್ಷಕೆ ಜಯ ಪತ್ರಿಕೆ ಕೊಡಿಸಿ
ಪಕ್ಷಿವಾಹನ ಸಿರಿ ವಿಜಯವಿಠ್ಠಲನ್ನ
ಈಕ್ಷಿಸುವದಕ್- ಉಪದೇಶ ಕೊಡುವ ಋಷಿ ||೩||


jayarAyara nODirO sajjanarella
jayarAyara pADirO ||pa||

jayarAyara nODi japisi manadi pADi
jayavAguvudu nimage
BayanASa saMtata ||a.pa||

duruLa mataveMbo karige aMkuSavittu
surasAda graMtha AnaMdamuni
viracisi iralAgi parama BaktiyiMda vi
stara mADidA karada kannaDiyaMte ||1||

vAdigaLannellA jaisi DaMgura hoysi
BEdArtha j~jAna satyavenisi
I dhariyoLage hariye para daivaveMdu
sAdhisi uddaMDavAda gurutilaka ||2||

akShOBya tIrthara karadiMda janisi
mOkShake jaya patrike koDisi
pakShivAhana siri vijayaviThThalanna
IkShisuvadak- upadESa koDuva RuShi ||3||

Leave a Reply

You might also like

error: Content is protected !!