Composer : Shri Tande Sripati vittala
ಪಾಂಡುರಂಗ ತ್ವತ್ಪಾದ ಪಾಲಿಸಯ್ಯ
ಕರುಣದಿ ಪಿಡಿಕೈಯ್ಯ ||ಪ||
ಪುಂಢಲೀಕಮುನಿವರದ ನಮಿಪೆ ನಿನಗೇ ನೀ ತ್ವರಿತದಲ್ಲೆನಗೆ||ಅ.ಪ||
ಸುರಚಿರ ಮಹಿಮನೆ ಭಜಕಾಮರಧೇನೂ-ವಸುದೇವರ ಸೂನೂ
ಧರಣಿಯೊಳಗೆ ನಮ್ಮ ಹಿರಿಯರನುದ್ಧಾರಾ-ಮಾಡಿದ ಗಂಭೀರಾ
ದೊರೆಯೇ ನಿನ್ಹೊರತನ್ಯರನಾನರಿಯೇ-ಕೇಳಲೊ ನರಹರಿಯೇ
ಕರೆಕರೆ ಭವದೊಳು ಬಿದ್ದು ಬಾಯ್ಬಿಡುವೇ-ಪೊರೆಯೆಂದು ನುಡಿವೇ || ೧ ||
ವನಜಭವಾದಿ ಸಮಸ್ತ ಸುರವ್ರಾತಾ-ವಂದಿತ ಶ್ರೀನಾಥಾ
ಪ್ರಣತಾರ್ಥಿಹರನೆ ಕಾಮಿತಫಲದಾತಾ-ಮುನಿಗಣಸಂಜಾ ತಾ
ನೆನೆವ ಜನರ ಮನದೊಳಿಹ ವಿಖ್ಯಾತಾ-ಭುವನಾದಿನಾಥಾ
ಘನಮಹಿಮ ಒಲಿದು ಪಾಲಿಸೆನ್ನ ಮಾತಾ-ದಯಮಾಡಿ ತ್ವರಿತಾ || ೨ ||
ಬಂದ ಜನರ ಭವಸಾಗರ ಪರಿಮಿತಿ-ತೋರಿಸುತಿಹ ರೀತೀ
ಚೆಂದದಿಂದ ಕರವಿಟ್ಟು ಕಟಿಗಳಲ್ಲಿ-ಈ ಸುಕ್ಷೇತ್ರದಲೀ
ನಿಂದಿಹ ಭೀಮಾತೀರ ಚಂದ್ರಭಾಗಾ ಅಲ್ಲಿಯ ವೈಭೋಗಾ
ತಂದೆ ಶ್ರೀಪತಿ ವಿಠ್ಠಲ ಸುಖಸಿಂಧೋ-ಅನಾಥ ಬಂಧೋ || ೩ ||
pAMDuraMga tvatpAda pAlisayya
karuNadi piDikaiyya ||pa||
puMDhalIkamunivarada namipe ninagE nI tvaritadallenage||a.pa||
suracira mahimane BajakAmaradhEnU-vasudEvara sUnU
dharaNiyoLage namma hiriyaranuddhArA-mADida gaMBIrA
doreyE ninhoratanyaranAnariyE-kELalo narahariyE
karekare BavadoLu biddu bAybiDuvE-poreyeMdu nuDivE || 1 ||
vanajaBavAdi samasta suravrAtA-vaMdita SrInAthA
praNatArthiharane kAmitaPaladAtA-munigaNasaMjA tA
neneva janara manadoLiha viKyAtA-BuvanAdinAthA
Ganamahima olidu pAlisenna mAtA-dayamADi tvaritA || 2 ||
baMda janara BavasAgara parimiti-tOrisutiha rItI
ceMdadiMda karaviTTu kaTigaLalli-I sukShEtradalI
niMdiha BImAtIra caMdraBAgA alliya vaiBOgA
taMde SrIpati viThThala suKasiMdhO-anAtha baMdhO || 3 ||

Leave a Reply
You must be logged in to post a comment.