Vijayamooruti poreyo

Composer : Shri Kamalesha vittala

By Smt.Shubhalakshmi Rao

ವಿಜಯಮೂರುತಿ ಪೊರೆಯೋ ವಿಜಯೀಂದ್ರ ಯತಿವರ್ಯ
ವಿಜಯನಗರೇಶನುತ ಪಾದಪಂಕಜನೇ [ಪ]
ಕಾವೇರಿ ತಟ ನಿಕಟ ಕುಂಭಕೋಣಾವಾಸಿ
ಶೈವಯತಿ ಮತ್ತೇಭ ಪಂಚಾನನ [ಅ.ಪ]

ಪರಮಗುರು ಶ್ರೀಮದಾನಂದತೀರ್ಥೋದ್ಯಾನ
ಪರಶಾಸ್ತ್ರವೆಂಬ ಸತಾರಸದಿ ವಿಹರಿಸು
ಪರಮಹಂಸನೇ ಯಮ್ಮ ಪರಿಕಿಸದಲನವರತ
ಪರವಾದಿಜಯವೀಯೋ ನರಹರಿಯ ಪ್ರಿಯನೇ [೧]

ಹತ್ತ ಹತ್ತು ನಾಲ್ಕು ಸತಿಗಳನು ವಿರಚಿಸಿ
ಮಿಥ್ಯವಾದವ ಮುರಿದ ಸತ್ಯಶೀಲ ಯತೀಂದ್ರ
ಮತ್ತ ಕಾಶಿನಿಯರಂ ಕಣ್ಣೆತ್ತಿ ನೋಡದಲೆ
ಚಿತ್ತೇಶನಂ ಗೆಲಿದೆ ಸುತ್ತಲೂ ಕಾಯೆಮ್ಮ [೨]

ಪಂಥವನು ತೊಟ್ಟು ಅಪ್ಪಯ್ಯದೀಕ್ಷಿತರೆಂಬ
ಮತ್ತವಾದಿಯ ಜಯಿಸಿ ಮಧ್ವಮತ ರಕ್ಷಿಸಿದೆ
ಪತಿತ ಪಾವನ ನಮ್ಮ ಕಮಲೇಶನಂಘ್ರಿಯನು
ನುತಿಸುತ್ತಲನವರತ ಭಕುತರನು ಪೊರೆಯುತಿಹೆ [೩]


vijayamUruti poreyO vijayIMdra yativarya
vijayanagarESanuta pAdapaMkajanE [pa]
kAvEri taTa nikaTa kuMBakONAvAsi
Saivayati mattEBa paMcAnana [a.pa]

paramaguru SrImadAnaMdatIrthOdyAna
paraSAstraveMba satArasadi viharisu
paramahaMsanE yamma parikisadalanavarata
paravAdijayavIyO narahariya priyanE [1]

hatta hattu nAlku satigaLanu viracisi
mithyavAdava murida satyaSIla yatIMdra
matta kASiniyaraM kaNNetti nODadale
cittESanaM gelide suttalU kAyemma [2]

paMthavanu toTTu appayyadIkShitareMba
mattavAdiya jayisi madhvamata rakShiside
patita pAvana namma kamalESanaMghriyanu
nutisuttalanavarata Bakutaranu poreyutihe [3]

Leave a Reply

You might also like

error: Content is protected !!