Vageesha Teerthara

Composer : Shri Lakumeesha ankita

By Smt.Shubhalakshmi Rao

ವಾಗೀಶತೀರ್ಥರ ನೀ ಭಜಿಸೋ
ಸಂತತ ಸುಖಿಸೋ || ಪ ||

ಭೋಗಾದಿ ಬಿಡಿಸಿ ಭಾಗ್ವತರ್ಕೂಡಿಸಿ |
ಯೋಗಾದಿ ತಿಳಿಸುವ ಯೋಗಿವರೇಣ್ಯ || ಅ.ಪ ||

ಶ್ರೀ ಗುರು ಕವೀಂದ್ರರ ಕರ ದಿವ್ಯ ಸಂಜಾತ |
ಜಗದೊಳು ರಾರಾ-ಜಿಸುವ ಯತಿನಾಥ |
ಸೊಗಸಾದ ಮಧ್ವರ ನಿಗಮವತಾವ್-ಹೋದಿ |
ಹಗರಣ ದುರ್ಮತ ವಾದದಿ ಗೆದ್ದಂಥ ||೧||

ವ್ಯಾಸರ ರಚಿತ ಶ್ರೀ ಬ್ರಹ್ಮಸೂತ್ರವಾ |
ಭಾಷ್ಯ ಗೀತಾದಿ ಸುಧಾ ಪಾಠವಾ |
ರಾಶಿ ಶಿಷ್ಯರಿಗೆ ಬೋಧಿಸಿ | ಶ್ರೀ ಮೂಲ |
ದಾಶರಥಿಯ ಪದ ತೋಷದಿ ತುತಿಸಿದ ||೨||

ಪದ ವ್ಯಾಖ್ಯಾನಗಳಲ್ಲಿ ಕುಶಲರು |
ಮುದದಿಂದ ಲಕುಮೀಶನ್ನ ಧ್ಯಾನಿಪರು |
ಕುಧರನ ಜಾತೆಯ ನಡು ಗಡ್ಡೆಯಲಿ |
ತದಿಯ ಚೈತ್ರ ವದ್ಯ ವೃಂದಾವನ ಸೇರ್ದೆ ||೩||


vAgISatIrthara nI BajisO
saMtata suKisO || pa ||

BOgAdi biDisi BAgvatarkUDisi |
yOgAdi tiLisuva yOgivarENya || a.pa ||

SrI guru kavIMdrara kara divya saMjAta |
jagadoLu rArA-jisuva yatinAtha |
sogasAda madhvara nigamavatAv-hOdi |
hagaraNa durmata vAdadi geddaMtha ||1||

vyAsara racita SrI brahmasUtravA |
BAShya gItAdi sudhA pAThavA |
rASi SiShyarige bOdhisi | SrI mUla |
dASarathiya pada tOShadi tutisida ||2||

pada vyAKyAnagaLalli kuSalaru |
mudadiMda lakumISanna dhyAniparu |
kudharana jAteya naDu gaDDeyali |
tadiya caitra vadya vRuMdAvana sErde ||3||

Leave a Reply

Your email address will not be published. Required fields are marked *

You might also like

error: Content is protected !!