Composer: Shri Vijaya dasaru
ಗುರು ಪುರಂದರ ದಾಸರೇ ನಿಮ್ಮ
ಚರಣ ಕಮಲವ ನಂಬಿದೆ ||ಪ||
ಗರುವ ರಹಿತನ ಮಾಡಿ ಎನ್ನನು
ಪೊರೆವ ಭಾರವು ನಿಮ್ಮದೆ ||ಅ.ಪ||
ಒಂದು ಅರಿಯದ ಮಂದಮತಿ ನಾನ್
ಇಂದು ನಿಮ್ಮನು ವಂದಿಪೆ
ಇಂದಿರೇಶನ ಪಾದ ತೋರಿಸೊ
ತಂದೆ ಮಾಡೆಲೊ ಸತ್ಕೃಪೆ (೧)
ಮಾರಜನಕನ ಸನ್ನಿಧಾನದಿ
ಸಾರಗಾಯನ ಮಾಡುವ
ನಾರದರೆ ಈ ರೂಪದಿಂದಲಿ
ತೊರಿ ದರುಶನ ತೋರಿದೆ (೨)
ಪುರಂದರಾಲಯ ಘಟ್ಟದೊಳು
ನೀ ನಿರುತ ಧನವ ಘಳಿಸಲು
ಪರಮ ಪುರುಷನು ವಿಪ್ರನಂದದಿ
ಕರವ ನೀಡಿ ಯಾಚಿಸೆ (೩)
ಪರಮ ನಿರ್ಗುಣ ಮನವರಿತು
ಸರುವ ಸೂರೆಯ ಘಳಿಸಿದ
ಅರಿತು ಮನದಲಿ ಜರಿದು ಭವಗಳ
ತರುಣಿ ಸಹ ಹೊರ ಹೊರಟನೆ (೪)
ಅಜ ಭವಾದಿಗಳರಸನಾದ
ವಿಜಯ ವಿಠಲನ ಧ್ಯಾನಿಪ
ನಿಜ ಸುಜ್ಞಾನವ ಕೊಡಿಸಬೇಕೆಂದು
ಭಜಿಪೆನೋ ಕೇಳ್ ಗುರುವರಾ (೫)
guru puraMdara dAsarE nimma
caraNa kamalava naMbide ||pa||
garuva rahitana mADi ennanu
poreva BAravu nimmade ||a.pa||
oMdu ariyada maMdamati nAn
iMdu nimmanu vaMdipe
iMdirESana pAda tOriso
taMde mADelo satkRupe (1)
mArajanakana sannidhAnadi
sAragAyana mADuva
nAradare I rUpadiMdali
tori daruSana tOride (2)
puraMdarAlaya ghaTTadoLu
nI niruta dhanava ghaLisalu
parama puruShanu vipranaMdadi
karava nIDi yAcise (3)
parama nirguNa manavaritu
saruva sUreya ghaLisida
aritu manadali jaridu BavagaLa
taruNi saha hora horaTane (4)
aja BavAdigaLarasanAda
vijaya viThalana dhyAnipa
nija suj~jAnava koDisabEkeMdu
BajipenO kEL guruvarA (5)

Leave a Reply
You must be logged in to post a comment.