Composer: Shri Prasannavenkata dasaru
ಜಯಭೋ ಜಯಭೋ ಜಯ ವೆಂಕಟೇಶ ಪ್ರಭೊ
ಜಯಕರ್ತಾ ಭಯಹರ್ತಾಭಯ-ದಾಯಕ ಮೂರ್ತೆ [ಪ]
ಫಣಿಗಿರಿವರ ಫಣಮಂದಿರ ಪ್ರಣತಮನೋಹರ
ಘನ ಸದ್ಗುಣಗಣ ಪೂರ್ಣ ಘನ ಶಾಮಲವರ್ಣ
ಮನ್ಮಾನಸ ಮುನಿತಾಪಸ ಮನೋಮಾನಸ ಹಂಸ
ದನುಸುತಹರ ಧನು ಸಂಹರ ದಿನಮಣೀಶ ರುಚಿರ [೧]
ವನಜಾಕ್ಷಾ ವನಿಜಾಂತಕ ವನಜಾಸನ ಜನಕ
ಕನಕಾಕ್ಷಹ ಕನಕಾಲಯ ಕನಕ ಸ್ತ್ರೀಪ್ರಿಯ
ವನಭ್ರಮಣಾ ವನಿರಮಣ ವಿನತಾತ್ಮಜ ಗಮನ
ಅನಿಮಿತ್ತಜ ಅನಸೂಯಜ ಅನಿಮಿಷೇಂದ್ರಾನುಜ [೨]
ಅರಿಧರಧರ ಅರಿ ಪರಿಹರ ಅರುಣಾಂಬರಧರ
ಚಿರಮಣಿ ರುಚಿರಾಭರಣಾನುಚರ ಸುರತರು ವೀರ
ಸುರ ಪರಮಾಪ್ತನೆ ಸಾಸಿರ ಕ್ರೀಡಾಶ್ಚರ್ಯ ಗಾರ
ಕಲಿ ಕಲುಷ ಹರ ಕರುಣಾಕರ
ಪ್ರಸನ್ವೆಂಕಟೇಶ್ವರ [೩]
jayaBO jayaBO jaya veMkaTESa praBo
jayakartA BayahartABaya-dAyaka mUrte [pa]
PaNigirivara PaNamaMdira praNatamanOhara
Gana sadguNagaNa pUrNa Gana SAmalavarNa
manmAnasa munitApasa manOmAnasa haMsa
danusutahara dhanu saMhara dinamaNISa rucira [1]
vanajAkShA vanijAMtaka vanajAsana janaka
kanakAkShaha kanakAlaya kanaka strIpriya
vanaBramaNA vaniramaNa vinatAtmaja gamana
animittaja anasUyaja animiShEMdrAnuja [2]
aridharadhara ari parihara aruNAMbaradhara
ciramaNi rucirABaraNAnucara surataru vIra
sura paramAptane sAsira krIDAScarya gAra
kali kaluSha hara karuNAkara
prasanveMkaTESvara [3]
Leave a Reply