Nadedu barayya krishna

Composer: Shri Harapanahalli Bheemavva

Smt.Nirmala Narasimhan

ನಡೆದು ಬಾರಯ್ಯ ಕೃಷ್ಣ ನಡೆದು [ಪ]

ಪಕ್ಷಿವಾಹನ ಪರ ಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗ
ರಕ್ಷಿಸುವಾತನೆಂದು ವಕ್ಷ ಸ್ಥಳದಿ ಶ್ರೀಮಾ-
ಲಕ್ಷ್ಮಿ ಧರಿಸಿ ಪಾಂಡು ಪಕ್ಷನೆನಿಸಿ ನೀ ಪ-
ರೀಕ್ಷಕನುಳುಹಿ-ದಂತಕ್ಷದಿ
ನೋಡುತಧೋಕ್ಷಜ ಹರಿಯೆ (೧)

ಸತ್ಯವಂತನೆ ಕೇಳಸತ್ಯ ಅಜ್ಞಾನ ಭವ-
ಕತ್ತಲೊಳಗೆ ಬಹಳ ಶತ್ರು ಸಮೂಹದಲ್ಲಿ
ಸುತ್ತಿ ಬಳಲುವೆ ಕೇಳಾಪತ್ತು ಬಾಂಧವ ನಿನ್ನ
ಚಿತ್ತಕ್ಕೆ ತಂದು ಸಮಸ್ತ ಸುರೇಶ ನಿನ್ನ
ಹತ್ತಿಲೆ ಕರಿ ಸರ್ವೋತ್ತಮ ಹರಿಯೆ (೨)

ಧೀರ ಗಂಭೀರ ನಿನ್ನ ಸಾರಥ್ಯ ದೊರೆಯಲ್ವಿ-
ಚಾರ ಮಾಡಿದರು ನಿನ್ನಾರು ತಿಳಿಯಲಿಲ್ಲೊ
ಶೂರ ಸುತಗೆ ಸುಕುಮಾರನೆನಿಸಿದಂಥ ಅ-
ಪಾರ ಮಹಿಮನೆ ಸಮೀರಜ ಭವ ಸುರ
ನಾರದ ಪ್ರಿಯನೆ ಉದ್ಧಾರ ಮಾಡು ಎನ್ನನು (೩)

ಗಜರಾಜ ವರದನೆ ತ್ರಿಜಗದೊಡೆಯ ನಿನ್ನ
ಧ್ವಜ ವಜ್ರಾಂಕುಶ ಪಾದ ಭಜಕರೆನಿಸುವಂಥ
ಸುಜನರ್ ವಂದಿತನಾದ ಕುಜನ ಕುಠಾರಿಯೆ ನೀ
ಅಜಮಿಳಗೊಲಿದಂಥ ಜಗಣೇಂದ್ರನ ಪ್ರಿಯ
ನಿಜವಾಗಿ ನೋಡೆನ್ನ ರಜತಮ ಕಳೆಯುವ (೪)

ಕಡಲ ಶಯನನಾದ ಉಡುರಾಜ ವದನ ಬಿಟ್ಟು
ಭಿಡಿಯ ಭೀಮೇಶ ಕೃಷ್ಣ್ನೆನ್ನೊಡೆಯನೆನುತ ಬಂದ
ಬಡವ ಸುದಾಮಗಿಟ್ಟಿ ಹಿಡಿ ಹಿಡೀ ಎಂದು ಭಾಗ್ಯ
ತಡೆಯದೆ ನಾ ನಿನ್ನಡಿಗಳಿಗೆರಗುವೆ ಕೊಡು
ಕೊಡು ವರಗಳ ಪೊಡವಿ ಪಾಲಿಪನೆ (೫)


naDedu bArayya kRuShNa naDedu [pa]

pakShivAhana para pEkShArahita ninna kukShiyoLage jaga
rakShisuvAtaneMdu vakSha sthaLadi SrImA-
lakShmi dharisi pAMDu pakShanenisi nI pa-
rIkShakanuLuhi-daMtakShadi
nODutadhOkShaja hariye (1)

satyavaMtane kELasatya aj~jAna Bava-
kattaloLage bahaLa Satru samUhadalli
sutti baLaluve kELApattu bAMdhava ninna
cittakke taMdu samasta surESa ninna
hattile kari sarvOttama hariye (2)

dhIra gaMBIra ninna sArathya doreyalvi-
cAra mADidaru ninnAru tiLiyalillo
SUra sutage sukumAranenisidaMtha a-
pAra mahimane samIraja Bava sura
nArada priyane uddhAra mADu ennanu (3)

gajarAja varadane trijagadoDeya ninna
dhvaja vajrAMkuSa pAda BajakarenisuvaMtha
sujanar vaMditanAda kujana kuThAriye nI
ajamiLagolidaMtha jagaNEMdrana priya
nijavAgi nODenna rajatama kaLeyuva (4)

kaDala SayananAda uDurAja vadana biTTu
BiDiya BImESa kRuShNnennoDeyanenuta baMda
baDava sudAmagiTTi hiDi hiDI eMdu BAgya
taDeyade nA ninnaDigaLigeraguve koDu
koDu varagaLa poDavi pAlipane (5)

Leave a Reply

Your email address will not be published. Required fields are marked *

You might also like

error: Content is protected !!