Composer: Shri Vijayadasaru
ರಾಗ: ಕಲ್ಯಾಣಿ
ಧ್ರುವತಾಳ
ದಾಸರು ದಾಸರ ಸುತರು ನಾಲ್ವರು ಮುಂದೆ
ದೇಶ ಕಾಲವ ತಿಳಿದು ಲೇಶ ಸಂಶಯವಿಡದೆ
ದೇಶದೊಳಗೆ ತಮ್ಮ ದಾಸ ಪುಟ್ಟುವನೆಂದು
ಲೇಸಾಗಿ ದಯವನ್ನು ಸೂಸಿ ಕೇವಲವಾಗಿ
ಪೋಷಿಸಬೇಕೆಂದು ಏಸು ಪರಿಯಲ್ಲಿ
ಘಾಶಿಗೊಳಿಸುವಂಥ ದೋಷಗಳಟ್ಟಿ ಬರ –
ಲೀಸದೆ ಪ್ರತಿದಿನ ವಾಸವಾಗಿ ಕಾಯ್ವರು
ಸಾಸಿರ ಜನರು ಪಂಕ್ತಿಸಾಗಿ ಕುಳ್ಳಿರೆ
ರಾಶಿ ಶುಭಪದಾರ್ಥ ತಾ ಸವಿವಾಗ ಜನನಿ
ಆ ಶಿಶುವಿಗುತ್ತಮ ಗ್ರಾಸ ಉಳಿಸಿ ಉಣಿಸಿದೋಪಾದಿಲಿ
ಈ ಸುಲಭರು ಎನಗೆ ಶ್ರೀಶನ್ನ ಕಥಾಮೃತ –
ದಾ ಶುಭ ಪದಾರ್ಥವಾ ಮೀಸಲು ಭಕ್ತಿಯಲಿ ಹಾ –
ರೈಸಿ ಸವಿದದರ ಶೇಷ ಉಣಿಸಿ ಯಿಂದು
ಶಾಶ್ವಿತವಾಗಿರುವರು
ಶೇಷಶಯನ ನಮ್ಮ ವಿಜಯವಿಟ್ಠಲನ ತು –
ತೀಸುವಂತೆ ಮಾಡಿ ಕ್ಲೇಶವ ಬಿಡಿಸಿದರು || ೧ ||
ಮಟ್ಟತಾಳ
ಅಪ್ರಬುದ್ಧರೊಳಿಡದೆ ಕ್ಷಿಪ್ರದಲ್ಲಿ ಎನ್ನ
ವಿಪ್ರಗರ್ಭದಲ್ಲಿ ಅಪ್ರತಿಕೂಲರಾಗಿ
ಸುಪ್ರೇಮದಿ ತಂದು ಈ ಪೃಥ್ವಿಯೊಳಗೆ
ಸುಪ್ರವೀಣರು ಕಾಮ ಪ್ರಸರೋಡಿಸಿ
ಅಪ್ರತಿದೈವದ ಕಥಾಪ್ರಸಂಗ ನಾನಾ ಪ್ರಕಾರದಲ್ಲಿ –
ದ್ದು ಪ್ರವಾಹದಂತೆ ಸುಪ್ರಸಾಧನ ಕೀರ್ತಿ
ಅಪ್ರಿಯಾಗದಂತೆ ಸುಪ್ರಸಾದ ವಾತ
ತತ್ಪ್ರಮಾಣಿಕವು ಪ್ರೇರಿಸಿದರೊ
ಅಪ್ರಾಕೃತ ಲೀಲಾ ವಿಜಯವಿಟ್ಠಲನ ಪಾ –
ದ ಪ್ರಾರ್ಥನೆ ಮಾಡುವ ಪ್ರಭಾಸದಲ್ಲಿ || ೨ ||
ತ್ರಿವಿಡಿತಾಳ
ಭಕುತಂಗೆ ಬೆಂಬಲವಾಗಿ ಬಿಡದೆ ನಿತ್ಯ
ಸಕಲ ಕಾರ್ಯಂಗಳು ಮಾಡುವ ಅಲ್ಲಿಗೆ
ಅಖಿಳ ಬಗೆಯಿಂದ ಸಹಾಯವಾಗಿ ಸಾ –
ಧಕವ ಮಾಡಿಸುವರೊ ಮೋದದಿಂದ
ಶಕುತಿ ಯುಕುತಿ ವಿರಕುತಿ ಭಕುತಿ ಮ್ಯಾಲೆ
ಭಕುತಿ ಮುಕುತಿ ಸರ್ವ ಉಕುತಿಯಲ್ಲಿಗೆ ಮನಾ
ಕಕುಲಾತಿ ಮಾಡಲು ಅದೆ ವಹಿಸಿಕೊಂಡು
ಸಿಕರ ಬಪ್ಪುದೆ ಸಪ್ತಾಂಬುಧಿ ಮಾಡಿ ತೋರಿಸಿ
ಸುಖವ ಬಡಿಸಿದರೊ ಸರಳಾಗಿ ಕಲಕಾಲ
ದುಃಖ ಬಾರದಂತೆ ರಕ್ಷಿಸುತಿಪ್ಪರೊ
ರುಕುಮಿಣಿಪತಿ ನಮ್ಮ ವಿಜಯವಿಟ್ಠಲನಂಘ್ರಿ
ನಖದಾಶ್ರಯದಲ್ಲಿ ನಿಲ್ಲಿಸಿ ನಲಿದಾಡಿದರೊ || ೩ ||
ಅಟ್ಟತಾಳ
ಎನಗೊಬ್ಬಗಲ್ಲ ಇವರು ಮಾಡಿದ ದಯ
ವನಿತೆ ತನುಜ ಮತ್ತೆ ಅನುಜರು ಕೇವಲ
ತನು ಸಂಬಂಧಿಗಳಿಗೆ ಮನ ಸಂಬಂಧಿಗಳಿಗೆ
ಮನೆಮನೆ ನೆರೆಹೊರೆಯಲ್ಲಿ ನೆನಪು ಮಾಡುವವರಿಗೆ
ಕನಸಿನೊಳಗೆ ಸ್ಮರಣೆ ಬಪ್ಪವರಿಗೆ
ಅನುದಿನ ತಾ ಟೊಂಕವನು ಕಟ್ಟಿ ನಿಂತು
ಎನ ಬೆನ್ನ ಛಪ್ಪರಿಸಿ ಭಯವನು ಬಿಡು ಯೆಂದು
ವನಜಭವಾದ್ಯರ ಅನುಕರಿಸಿಕೊಂಡು
ತನುವಿನ ಆಪತ್ತು ಜನರಪವಾದವ
ತೃಣ ಮಾಡಿ ಕಳೆದು ಶಾಂತನ ಮಾಳಿಪೆವೆಂದು
ಅನಿಮಿತ್ತರಾಗಿ ಪಾವನರು ನಿಂದೈಧಾರೆ
ಎನಗ್ಯಾತರ ಚಿಂತಿ ವಿಜಯವಿಟ್ಠಲನ್ನ
ನೆನಿಸುವ ಪ್ರೀಯರು ಅನುದಿನ ವಲಿದರೆ || ೪ ||
ಆದಿತಾಳ
ಇವರನೆಲ್ಲ ಎನ್ನಾಧೀನದಲ್ಲಿಟ್ಟು
ಅವನಿಯೊಳಗೆ ಬದುಕಿ ಚಿರಕಾಲದಲ್ಲಿ ಹರಿಯ
ಶ್ರವಣ ಮನನ ಧ್ಯಾನ ಯೋಗವಂತರಾಗಿ
ಕವಿಗಳೆನಿಸಿ ಪರಿಪೂರ್ಣಾಯು ಸ್ಥಿರವಾಗಿ
ವಿವಾಹ ಮಹೋತ್ಸವ ನಾನಾ ಸಂಭ್ರಮಗಳು
ಎವೆಯಿಡುವನಿತರೊಳು ಸಾವಿರ ಮಾಡಿಸುತ್ತ
ಸವೆಯಾದ ಮನೋಭಿಷ್ಟಿ ಸವಿದುಂಡು ಸುಖಿಸೆಂದು
ಭವದೂರರು ಇನಿತು ಮಾಡಿಸುತಿಹರೊ
ಇವರು ನಾನು ಸಹ ಹರಿದಾಸರು ಕಾಣೊ
ಪವನನಿಂದಲಿ ನಮ್ಮ ದುರಿತಮೋಚನವೆಂದು
ಕವಿ ವಮ್ಮೆ ನುಡಿಯಲು ಲವಣ ಕರಗಿದಂತೆ
ತವಕದಿಂದಲಿ ಪಾಪ ನಿವಹವು ಪೋಗೋವು
ಪವನಂತರ್ಗತನಾದ ವಿಜಯವಿಟ್ಠಲನಲ್ಲಿ
ಲವಲವಿಕೆಯುಳ್ಳನುಭವರು ಕೈವಿಡಿದರೊ || ೫ ||
ಜತೆ
ಇನ್ನು ಕ್ಲೇಶದ ಭವ ಎಂಥಾದೊ ಎಂಥಾದೊ
ಚನ್ನ ವಿಜಯವಿಟ್ಠಲನ ದಾಸಬಾಂಧವರು ||
rAga: kalyANi
dhruvatALa
dAsaru dAsara sutaru nAlvaru muMde
dESa kAlava tiLidu lESa saMSayaviDade
dESadoLage tamma dAsa puTTuvaneMdu
lEsAgi dayavannu sUsi kEvalavAgi
pOShisabEkeMdu Esu pariyalli
GASigoLisuvaMtha dOShagaLaTTi bara –
lIsade pratidina vAsavAgi kAyvaru
sAsira janaru paMktisAgi kuLLire
rASi SuBapadArtha tA savivAga janani
A SiSuviguttama grAsa uLisi uNisidOpAdili
I sulaBaru enage SrISanna kathAmRuta –
dA SuBa padArthavA mIsalu Baktiyali hA –
raisi savidadara SESha uNisi yiMdu
SASvitavAgiruvaru
SEShaSayana namma vijayaviTThalana tu –
tIsuvaMte mADi klESava biDisidaru || 1 ||
maTTatALa
aprabuddharoLiDade kShipradalli enna
vipragarBadalli apratikUlarAgi
suprEmadi taMdu I pRuthviyoLage
supravINaru kAma prasarODisi
apratidaivada kathAprasaMga nAnA prakAradalli –
ddu pravAhadaMte suprasAdhana kIrti
apriyAgadaMte suprasAda vAta
tatpramANikavu prErisidaro
aprAkRuta lIlA vijayaviTThalana pA –
da prArthane mADuva praBAsadalli || 2 ||
triviDitALa
BakutaMge beMbalavAgi biDade nitya
sakala kAryaMgaLu mADuva allige
aKiLa bageyiMda sahAyavAgi sA –
dhakava mADisuvaro mOdadiMda
Sakuti yukuti virakuti Bakuti myAle
Bakuti mukuti sarva ukutiyallige manA
kakulAti mADalu ade vahisikoMDu
sikara bappude saptAMbudhi mADi tOrisi
suKava baDisidaro saraLAgi kalakAla
duHKa bAradaMte rakShisutipparo
rukumiNipati namma vijayaviTThalanaMGri
naKadASrayadalli nillisi nalidADidaro || 3 ||
aTTatALa
enagobbagalla ivaru mADida daya
vanite tanuja matte anujaru kEvala
tanu saMbaMdhigaLige mana saMbaMdhigaLige
manemane nerehoreyalli nenapu mADuvavarige
kanasinoLage smaraNe bappavarige
anudina tA ToMkavanu kaTTi niMtu
ena benna Capparisi Bayavanu biDu yeMdu
vanajaBavAdyara anukarisikoMDu
tanuvina Apattu janarapavAdava
tRuNa mADi kaLedu SAMtana mALipeveMdu
animittarAgi pAvanaru niMdaidhAre
enagyAtara ciMti vijayaviTThalanna
nenisuva prIyaru anudina validare || 4 ||
AditALa
ivaranella ennAdhInadalliTTu
avaniyoLage baduki cirakAladalli hariya
SravaNa manana dhyAna yOgavaMtarAgi
kavigaLenisi paripUrNAyu sthiravAgi
vivAha mahOtsava nAnA saMBramagaLu
eveyiDuvanitaroLu sAvira mADisutta
saveyAda manOBiShTi saviduMDu suKiseMdu
BavadUraru initu mADisutiharo
ivaru nAnu saha haridAsaru kANo
pavananiMdali namma duritamOcanaveMdu
kavi vamme nuDiyalu lavaNa karagidaMte
tavakadiMdali pApa nivahavu pOgOvu
pavanaMtargatanAda vijayaviTThalanalli
lavalavikeyuLLanuBavaru kaiviDidaro || 5 ||
jate
innu klESada Bava eMthAdo eMthAdo
canna vijayaviTThalana dAsabAMdhavaru ||
Leave a Reply