Purandara dasara suladi – Gotra

Composer: Shri Vijayadasaru

Smt.Nandini Sripad

ರಾಗ: ಹಿಂದೋಳ
ಧ್ರುವತಾಳ
ಗೋತ್ರ ಪ್ರವರೋಚ್ಚಾರಣಿ ವಂದೇ ಕಾಣೊ
ಧಾತ್ರಿಯೊಳಗೆ ತಂದೆ ಮಕ್ಕಳು ಮಾಡುವ ಕಾ –
ಲತ್ರಯ ಸಂಧ್ಯಾವೆಲ್ಲ ಎಂದಿಗೆ ಭೇದವಿಲ್ಲ
ಪುತ್ರನಿಗೆ ಪಿತನು ಆನಾರಂಭದಲ್ಲಿ ನಾಮ
ಮಾತ್ರ ನುಡಿಸುವ ಬುದ್ಧಿ ಪೇಳಿ
ಚಿತ್ರವ ಗೋಡಿ ಮೇಲೆ ರಚಿಸಿರಲು ನೋಡಿ
ಸ್ತೋತ್ರವ ಮಾಡಿದರೇನಹುದೊ
ಚಿತ್ರಕೆ ಬಹು ವಿವೇಕ ವುಳ್ಳವನೆಂದು
ಪಾತ್ರರ ಮುಂದೆ ಕೊಂಡಾಡಿದಂತೆ
ಧಾತ್ರಿಯೊಳಗೆ ನಮ್ಮ ಪುರಂದರದಾಸರ
ಸ್ತೋತ್ರವ ಮಾಡಿರೈ ಸಚೈಲರಾಗಿ
ಗಾತ್ರ ನಿರ್ಮಲವಕ್ಕು ಯೆಂದಿಗೆಂದಿಗೆ ದಿವ್ಯ –
ನೇತ್ರದಿಂದಲಿ ಹರಿಯ ಸಂದರುಶನ
ರಾತ್ರಿಂಚರವೆಂದು ಪೆಸರುಳ್ಳವು ಕುಮುದ –
ಮಿತ್ರಗೆ ಸಮವೇನೊ ಉಳಿದಾದವು
ಶ್ರೋತ್ರಾಭರಣವಾದ ದಾಸರ ಕವನ ಅ –
ನ್ಯತ್ರರು ನುಡಿದದ್ದು ಧಿಕ್ಕರಿಪುದು
ನಿತ್ರಾಣನಾದ ಮನುಜ ಹಿರಿಯರ ವಿತ್ತದಿಂದ
ಯಾತ್ರಿಯ ಮಾಡಿ ಪುಣ್ಯ ಘಳಿಸಿದಂತೆ
ಸೂತ್ರ ಮೀಟಿ ಮೇಲು ಪಂಕ್ತಿ ಹಾಕಿಕೊಡಲು
ಮಾತ್ರೆಗಳನು ನೋಡಿ ಬರದಂತೆವೊ
ಶತ್ರು ಸಂಹಾರ ನಮ್ಮ ವಿಜಯವಿಟ್ಠಲನಂಘ್ರಿ ಶತ –
ಪತ್ರ ಬಲ್ಲವರಿಂದ ಯಿದೆ ವಿಸ್ತಾರ ನಿರ್ಮಾಣ || ೧ ||

ಮಟ್ಟತಾಳ

ಕಠಿಣವಾಗಿದ್ದ ಸಂಸಾರವೆಂದೆಂಬೊ
ಕೋಟಲೆ ಹೊಳೆಯನ್ನು ಹರುಷದಿಂದಲಿ ಜನರು
ದಾಟಿ ಪೋಗುವದಕ್ಕೆ ದಯದಲ್ಲಿ ಬಂದು
ನೀಟಾದ ಸೇತುವಿಯ ರಚಿಸಿದರು ಅಂದು
ಬೂಟಕತನ ಬಿಟ್ಟು ಸುಲಭ ಜ್ಞಾನದಲ್ಲಿ
ಹಾಟಕಾಂಬರಧರ ವಿಜಯವಿಟ್ಠಲರೇಯನ
ನಾಟಕವ ಕೇಳೆ ನಾನಾ ಫಲವಕ್ಕು || ೨ ||

ತ್ರಿವಿಡಿತಾಳ

ಕಟ್ಟೆಯ ಕಟ್ಟಿದರು ಭವಸಾಗರಕೆ ಸ್ವಲ್ಪ
ಬಿಟ್ಟು ವೇಗದಿಂದ ಸಾಧ್ಯ ಮಾಡಿಕೊಂಡು
ಮೆಟ್ಟಿಕೆಯಿಂದಲಿ ದಾಟಿ ಪೋದರು ಜಗ –
ಜಟ್ಟಿ ದಾಸರು ತಮಗೆ ಸುಲಭವಾದುದೆ ಎನಗೆ
ಇಟ್ಟು ಇದ್ದದೆ ಯಿಂದು ನೋಡಪೋದರೆ ಬಹು
ಗುಟ್ಟು ತೋರುತಲಿದೆ ಸಾಧಾರಣವಲ್ಲ
ಬಿಟ್ಟಿಯವರಿಗೆ ತಿಳಿಯಲಾಹದೆ
ಧಿಟ್ಟವಾದ ಕವನ ಎನ್ನಿಂದಾದುದಲ್ಲ
ಕೊಟ್ಟಿಗೆ ಮೇಲುಪ್ಪರಿಗ್ಯಾಗುವದೆ
ಹುಟ್ಟಾರಭ್ಯವಾಗಿ ಮಂದನಾಗಿ
ಮೆಟ್ಟು ಇಲ್ಲದೆ ಬುದ್ಧಿ ಬರುವದೆಂತೊ
ದಟ್ಟಡಿ ಮಹಿಮ ಧರ್ಮಶೀಲ ವಿಜಯ –
ವಿಟ್ಠಲರೇಯನ ಪಾದಕಮಲ ಮನ –
ಮುಟ್ಟಿ ಭಜಿಸುವ ದಾಸರ ಕರುಣವೆನ್ನು || ೩ ||

ಅಟ್ಟತಾಳ

ಎಲ್ಲಿ ಉಪದೇಶ ಎಲ್ಲಿ ದಾಸರ ದಯ
ಎಲ್ಲಿ ಅವರ ಕಾಂಬುವದು ಮತ್ತಾವಲ್ಲಿ
ಎಲ್ಲಿ ವರ್ತಮಾನ ಅವರೆಲ್ಲಿ ನೀನೆಲ್ಲಿ
ಎಲ್ಲಿ ಕಾಲದವರು ಎಲ್ಲಿ ಈ ದಿವಸವು
ಎಲ್ಲಿಯ ಮತಿಯೆಂದು ಪೋಗಲಾಡದಿರಿ
ಬಲ್ಲವರಿಗೆ ಇಂದು ಯತಾರ್ಥವೆನಿಪದು
ಸೊಲ್ಲು ಪೇಳುವೆ ಕೇಳಿ ಸಜ್ಜನರು ದಿನಂಪ್ರತಿ –
ಯಲ್ಲಿ ಕಾಶಿಗೆ ಸರ್ವ ದೇವಾದಿಗಳು ಬಂದು
ನಿಲ್ಲದೆ ಮಣಿಕರ್ಣಿಕೆಯಲ್ಲಿ ಸ್ನಾನವ ಮಾಡಿ
ಎಲ್ಲ ಸತ್ಪುಣ್ಯ ಪುರುಷರು ಸಂಚರಿಪರು
ಅಲ್ಲಿಗೆ ಪೋದಾಗ ಎನ್ನ ಗುರುಗಳ ಕರುಣಾ
ವಲ್ಲಡಿಗೆ ಸ್ತುತಿಸಿ ಪೇಳಲಳವೆ
ಬಲ್ಲಿದರೊಡೆಯ ವಿಜಯವಿಟ್ಠಲನಂಘ್ರಿ
ಪಲ್ಲವ ಪೂಜಿಸುವ ಭಾಗ್ಯವೆ ದೊರಕಿತು || ೪ ||

ಆದಿತಾಳ

ಅಂಕಿತ ಒಂದೆ ಬ್ಯಾರೆ ವಿಜಯ ನಾಮವಲ್ಲದೆ
ಶಂಕಿಸದಿರಿ ಜನರು ಮಿಗಿಲಾದದ್ದೆಲ್ಲ ಸಮ
ಕೊಂಕುಗಳೊಂದಿಲ್ಲ ದಾಸರು ನುಡಿಸಿದಂತೆ
ಅಂಕುರವಾಗುತಿದೆ ಎನ್ನಿಂದ ಮಾಳ್ಪ ಕೃತಿ
ಟಂಕಸಾಲೆಯೊಳು ಮುದ್ರೆಗಾರನು ತನ್ನ
ಕಿಂಕರನ್ನ ಕರೆದು ಹಣಹೊನ್ನಿಗೆ ನೀನೆ
ಡೊಂಕಾಗದಂತೆ ಮುದ್ರೆ ಹಾಕೆಂದ ತೆರನಯ್ಯ
ಮಂಕು ಮಾನವ ನಾನು ಅವರಾಜ್ಞದವನಾಗಿ
ಶಂಕೆ ಇಲ್ಲದೆ ಬಹು ಕೀರ್ತನೆ ಪೇಳುವೆ
ಪಂಕಜಪತಿ ನಮ್ಮ ವಿಜಯವಿಟ್ಠಲರೇಯಾ
ಸೋಂಕಿದಾಕ್ಷಣವೆ ಸರ್ವಾಭಿಷ್ಟೆಯಾಗುವದು || ೫ ||

ಜತೆ

ಉಭಯ ಜನಕೆ ವಿಜಯ ಕೊಡುವನು ತಡೆಯದೆ
ವಿಭುವೆ ವಿಜಯವಿಟ್ಠಲ ತನ್ನವರಿಗೆ ಪ್ರಾಣ ||


rAga: hiMdOLa
dhruvatALa
gOtra pravarOccAraNi vaMdE kANo
dhAtriyoLage taMde makkaLu mADuva kA –
latraya saMdhyAvella eMdige BEdavilla
putranige pitanu AnAraMBadalli nAma
mAtra nuDisuva buddhi pELi
citrava gODi mEle racisiralu nODi
stOtrava mADidarEnahudo
citrake bahu vivEka vuLLavaneMdu
pAtrara muMde koMDADidaMte
dhAtriyoLage namma puraMdaradAsara
stOtrava mADirai sacailarAgi
gAtra nirmalavakku yeMdigeMdige divya –
nEtradiMdali hariya saMdaruSana
rAtriMcaraveMdu pesaruLLavu kumuda –
mitrage samavEno uLidAdavu
SrOtrABaraNavAda dAsara kavana a –
nyatraru nuDidaddu dhikkaripudu
nitrANanAda manuja hiriyara vittadiMda
yAtriya mADi puNya GaLisidaMte
sUtra mITi mElu paMkti hAkikoDalu
mAtregaLanu nODi baradaMtevo
Satru saMhAra namma vijayaviTThalanaMGri Sata –
patra ballavariMda yide vistAra nirmANa || 1 ||

maTTatALa

kaThiNavAgidda saMsAraveMdeMbo
kOTale hoLeyannu haruShadiMdali janaru
dATi pOguvadakke dayadalli baMdu
nITAda sEtuviya racisidaru aMdu
bUTakatana biTTu sulaBa j~jAnadalli
hATakAMbaradhara vijayaviTThalarEyana
nATakava kELe nAnA Palavakku || 2 ||

triviDitALa

kaTTeya kaTTidaru BavasAgarake svalpa
biTTu vEgadiMda sAdhya mADikoMDu
meTTikeyiMdali dATi pOdaru jaga –
jaTTi dAsaru tamage sulaBavAdude enage
iTTu iddade yiMdu nODapOdare bahu
guTTu tOrutalide sAdhAraNavalla
biTTiyavarige tiLiyalAhade
dhiTTavAda kavana enniMdAdudalla
koTTige mElupparigyAguvade
huTTAraByavAgi maMdanAgi
meTTu illade buddhi baruvadeMto
daTTaDi mahima dharmaSIla vijaya –
viTThalarEyana pAdakamala mana –
muTTi Bajisuva dAsara karuNavennu || 3 ||

aTTatALa

elli upadESa elli dAsara daya
elli avara kAMbuvadu mattAvalli
elli vartamAna avarelli nInelli
elli kAladavaru elli I divasavu
elliya matiyeMdu pOgalADadiri
ballavarige iMdu yatArthavenipadu
sollu pELuve kELi sajjanaru dinaMprati –
yalli kASige sarva dEvAdigaLu baMdu
nillade maNikarNikeyalli snAnava mADi
ella satpuNya puruSharu saMcariparu
allige pOdAga enna gurugaLa karuNA
vallaDige stutisi pELalaLave
ballidaroDeya vijayaviTThalanaMGri
pallava pUjisuva BAgyave dorakitu || 4 ||

AditALa

aMkita oMde byAre vijaya nAmavallade
SaMkisadiri janaru migilAdaddella sama
koMkugaLoMdilla dAsaru nuDisidaMte
aMkuravAgutide enniMda mALpa kRuti
TaMkasAleyoLu mudregAranu tanna
kiMkaranna karedu haNahonnige nIne
DoMkAgadaMte mudre hAkeMda teranayya
maMku mAnava nAnu avarAj~jadavanAgi
SaMke illade bahu kIrtane pELuve
paMkajapati namma vijayaviTThalarEyA
sOMkidAkShaNave sarvABiShTeyAguvadu || 5 ||

jate

uBaya janake vijaya koDuvanu taDeyade
viBuve vijayaviTThala tannavarige prANa ||

Leave a Reply

Your email address will not be published. Required fields are marked *

You might also like

error: Content is protected !!