Composer: Shri Vijayadasaru
ರಾಗ: ಷಣ್ಮುಖಪ್ರಿಯ
ಧ್ರುವತಾಳ
ದಾಸರ ಕರುಣವೆ ಎನಗೆ ಸ್ನಾನ ಸಂಧ್ಯಾ
ದಾಸರ ಕರುಣವೆ ಎನಗೆ ಜಪ ತಪವು
ದಾಸರ ಕರುಣವೆ ಎನಗೆ ಉತ್ತಮ ಜ್ಞಾನ
ದಾಸರ ಕರುಣವೆ ಎನಗೆ ಮೌನ ಧ್ಯಾನ
ದಾಸರ ಕರುಣವೆ ಎನಗೆ ಸರ್ವಶಕ್ತಿ
ದಾಸರ ಕರುಣದಿಂದ ಘಾಸಿಯಾಗದ ಮನ
ಮೀಸಲ ಮನದಲಿ ಏಸೇಸು ದಿವಸಕ್ಕೆ
ತ್ರಾಸು ತೂಗಿದಂತೆ ಲೇಸು ಸಮನಿಸಿತು
ಶಾಶ್ವತ ಸ್ಥಿರನಾಮ ವಿಜಯವಿಟ್ಠಲನ್ನ
ಆಸರವಿಡಿದ ನಿಜ ದಾಸರೊಳು ನೆರೆದೆ || ೧ ||
ಮಟ್ಟತಾಳ
ವೇದ ಶಾಸ್ತ್ರ ತರ್ಕ ಓದಿಕೊಂಡವನಲ್ಲ
ಭೇದಾರ್ಥದ ಜ್ಞಾನ ನಿದರುಶನವಿಲ್ಲ
ಸಾಧು ಸಜ್ಜನರಿಂದ ಬೋಧೆಯಾದವನಲ್ಲ
ನಾದ ಬಿಂದು ಮೊದಲಾದವೆ ಒಂದಿಲ್ಲ
ಆಧಾರ ನಿಲಯ ವಿಜಯವಿಟ್ಠಲನ್ನ
ಪಾದವೆ ನೆರೆನಂಬಿ ಕ್ರೋಧರಹಿತನಾದೆ || ೨ ||
ತ್ರಿವಿಡಿತಾಳ
ಲಕ್ಷಣ ಛಂದಸ್ಸು ಆದಿ ಅಂತ್ಯ ಪ್ರಾಸ
ಅಕ್ಷರ ವಡಿ ಗಣ ಯಮಕ ನಾನಾ ವಚನ
ದೀಕ್ಷಿತನಾಗಿ ಪೇಳುವ ವಿಧಿನಿಷೇಧ
ಲಕ್ಷಕ್ಕೊಂದಾದರು ನೋಡಸಲ್ಲ
ಈ ಕ್ಷಿತಿಯೊಳಗುಳ್ಳ ನಿಜಭಾಗವತರು ಉ –
ಪೇಕ್ಷವ ಮಾಡದಲೆ ಆಲಿಸಿ ತಿಳಿವದು
ಕಕ್ಷಿ ನಮಗಿಲ್ಲ ಕರವ ಮುಗಿವೆ ಪರ –
ಪಕ್ಷವೆಣಿಸದಲೆ ಮನದಲ್ಲಿ ನಿಲ್ಲಿಪುದು
ನಕ್ಷತ್ರನೇಮಿ ಸಿರಿ ವಿಜಯವಿಟ್ಠಲನ್ನ
ಸಾಕ್ಷಾತ್ಕರಿಸಿಕೊಂಡ ದಾಸರೇ ಗುರುಗಳು || ೩ ||
ಅಟ್ಟತಾಳ
ನೇತ್ರ ಉಳ್ಳವನಿಗೆ ಕಾಷ್ಟದ ಪರಿವೇನು
ನೇತ್ರಹೀನನು ಕಾಷ್ಟವನರಸುವನು
ಕ್ಷೇತ್ರದಂತೆ ಗುರು ಸರ್ವಸ್ಸು ಪ್ರಧಾನ
ಗಾತ್ರದ ಮೇಲೆ ಪೂರ್ಣ ದಯವಿರಲಿಕ್ಕೆ
ಗಾತ್ರ ಲಘು ಪ್ರಮಾಣಾದಿಗಳು ನೋಡಿ
ಸೂತ್ರವ ರಚಿಸಿ ಕಲಾಪ ಬೀಳುವುದ್ಯಾಕೆ
ಶತ್ರುಜಿತ ನಾಮ ವಿಜಯವಿಟ್ಠಲರೇಯ
ಧಾತ್ರಿಯೊಳಗೆ ಸರ್ವತ್ರರ ಕರುಣೀ || ೪ ||
ಆದಿತಾಳ
ಇಕ್ಷುದಂಡ ಅದಂತ ಪರೀಕ್ಷಿಸಿ ಮೆಲಿಯ ಬಲ್ಲನೆ
ಅಕ್ಷಿಗತನು ಶುದ್ಧವಸ್ತು ವೀಕ್ಷಿಸಿ ಪೇಳಬಲ್ಲನೆ
ಈ ಕ್ಷಿತಿಯೊಳಗೆ ಜ್ಞಾನಚಕ್ಷುನಿಂದ ಹರಿಯ ಪಾದಾ –
ಪೇಕ್ಷ ಮಾಡಿ ಬದುಕುವಂಥ ಮೋಕ್ಷ ಸಾಧನ ಪುರುಷ
ಸೂಕ್ಷ್ಮದಿಂದಲಿ ತಿಳಿದು ತೀಕ್ಷ್ಣದಲ್ಯೊಡಂಬಡುವ
ನಕ್ಷತ್ರನಾಮ ದೇವ ವಿಜಯವಿಟ್ಠಲ ಬಂಧು
ರಕ್ಷಿಸುವನು ತನ್ನ ದಾಸರ ಮನ್ನಿಸಿದವನ || ೫ ||
ಜತೆ
ಸೊರಗಿ ಕೆಡುವುದಲ್ಲ ಎನ್ನ ಸ್ವಾತಂತ್ರವಲ್ಲ
ಗುರುವೆ ಬಲ್ಲ ಕ್ಷಮ ವಿಜಯವಿಟ್ಠಲನೆ ಪ್ರೇರಕ ||
rAga: ShaNmuKapriya
dhruvatALa
dAsara karuNave enage snAna saMdhyA
dAsara karuNave enage japa tapavu
dAsara karuNave enage uttama j~jAna
dAsara karuNave enage mauna dhyAna
dAsara karuNave enage sarvaSakti
dAsara karuNadiMda GAsiyAgada mana
mIsala manadali EsEsu divasakke
trAsu tUgidaMte lEsu samanisitu
SASvata sthiranAma vijayaviTThalanna
AsaraviDida nija dAsaroLu nerede || 1 ||
maTTatALa
vEda SAstra tarka OdikoMDavanalla
BEdArthada j~jAna nidaruSanavilla
sAdhu sajjanariMda bOdheyAdavanalla
nAda biMdu modalAdave oMdilla
AdhAra nilaya vijayaviTThalanna
pAdave nerenaMbi krOdharahitanAde || 2 ||
triviDitALa
lakShaNa CaMdassu Adi aMtya prAsa
akShara vaDi gaNa yamaka nAnA vacana
dIkShitanAgi pELuva vidhiniShEdha
lakShakkoMdAdaru nODasalla
I kShitiyoLaguLLa nijaBAgavataru u –
pEkShava mADadale Alisi tiLivadu
kakShi namagilla karava mugive para –
pakShaveNisadale manadalli nillipudu
nakShatranEmi siri vijayaviTThalanna
sAkShAtkarisikoMDa dAsarE gurugaLu || 3 ||
aTTatALa
nEtra uLLavanige kAShTada parivEnu
nEtrahInanu kAShTavanarasuvanu
kShEtradaMte guru sarvassu pradhAna
gAtrada mEle pUrNa dayaviralikke
gAtra laGu pramANAdigaLu nODi
sUtrava racisi kalApa bILuvudyAke
Satrujita nAma vijayaviTThalarEya
dhAtriyoLage sarvatrara karuNI || 4 ||
AditALa
ikShudaMDa adaMta parIkShisi meliya ballane
akShigatanu Suddhavastu vIkShisi pELaballane
I kShitiyoLage j~jAnacakShuniMda hariya pAdA –
pEkSha mADi badukuvaMtha mOkSha sAdhana puruSha
sUkShmadiMdali tiLidu tIkShNadalyoDaMbaDuva
nakShatranAma dEva vijayaviTThala baMdhu
rakShisuvanu tanna dAsara mannisidavana || 5 ||
jate
soragi keDuvudalla enna svAtaMtravalla
guruve balla kShama vijayaviTThalane prEraka ||
Leave a Reply