Sulabha Pujeya madi

Composer: Shri Purandara dasaru

ಸುಲಭ ಪೂಜೆಯ ಮಾಡಿ ಬಲವಿಲ್ಲದವರು (ಪ)
ನಳಿನನಾಭನ ಪಾದ ನಳಿನ ಸೇವಕರು (ಅ .ಪ)

ಇರಳು ಹಚ್ಚುವ ದೀಪ ಹರಿಗೆ ನೀರಾಜನವು
ಮರೆಮಾಡುವ ವಸ್ತ್ರ ಪರಮ ಮಡಿಯು
ತಿರುಗಾಡಿ ದಣಿಯುವುದೆ ಹರಿಗೆ ಪ್ರದಕ್ಷಿಣೆಯೂ
ಹೊರಳಿ ಮಲಗುವುದೆಲ್ಲ ಹರಿಗೆ ವಂದನೆಯು (೧)

ನುಡಿವ ಮಾತುಗಳೆಲ್ಲ ಕಡಲಶಯನನ ಜಪವು
ಮಡದಿ ಮಕ್ಕಳು ಮತ್ತೆ ಒಡನೆ ಪರಿವಾರ
ನಡುಮನೆಯ ಅಂಗಳವು ಉಡುಪಿ ಭೂ ವೈಕುಂಟಗಳು
ಎಡ ಬಲದ ಮನೆಯವರು ಕಡು ಭಾಗವತರು (೨)

ಹೀಗೆ ಅನುದಿನ ತಿಳಿದು ಹಿಗ್ಗುವ ಜನರ….. ಭವ
ರೋಗ ಪರಿಹರವು ಮೂಜಗದಿ ಸುಕವು
ಹೋಗುತಿದೆ ಈ ಆಯು ಬೇಗದಿಂದಲಿ ನಮ್ಮ
ಯೋಗೇಶ ಪುರಂದರ ವಿಟ್ಟಲನ ನೆನೆನೆನೆದು (೩)


sulaBa pUjeya mADi balavilladavaru (pa)
naLinanABana pAda naLina sEvakaru (a .pa)

iraLu haccuva dIpa harige nIrAjanavu
maremADuva vastra parama maDiyu
tirugADi daNiyuvude harige pradakShiNeyU
horaLi malaguvudella harige vaMdaneyu (1)

nuDiva mAtugaLella kaDalaSayanana japavu
maDadi makkaLu matte oDane parivAra
naDumaneya aMgaLavu uDupi BU vaikuMTagaLu
eDa balada maneyavaru kaDu BAgavataru (2)

hIge anudina tiLidu higguva janara….. Bava
rOga pariharavu mUjagadi sukavu
hOgutide I Ayu bEgadiMdali namma
yOgESa puraMdara viTTalana nenenenedu (3)

Leave a Reply

Your email address will not be published. Required fields are marked *

You might also like

error: Content is protected !!