Snana madirayya

Composer: Shri Purandara dasaru

By Smt.Shubhalakshmi Rao

ಸ್ನಾನ ಮಾಡಿರಯ್ಯ ಜ್ಞಾನ ತೀರ್ಥದಲಿ
ನಾನು ನೀನೆಂಬಹಂಕಾರವ ಬಿಟ್ಟು ||ಪ.||

ತನ್ನೊಳು ತಾನೆ ತಿಳಿದರೊಂದು ಸ್ನಾನ
ಅನ್ಯಾಯಗಾರಿ ಕಳೆದರೊಂದು ಸ್ನಾನ
ಅನ್ಯಾಯವಾಡದಿದ್ದರೊಂದು ಸ್ನಾನ
ಚೆನ್ನಾಗಿ ಹರಿಯ ನೆನೆದರೊಂದು ಸ್ನಾನ (೧)

ಪರಸತಿಯ ಬಯಸದಿದ್ದರೆ ಒಂದು ಸ್ನಾನ
ಪರನಿಂದೆ ಮಾಡದಿದ್ದರೆ ಒಂದು ಸ್ನಾನ
ಪರದ್ರವ್ಯ ಅಪಹರಿಸದಿರೆ ಒಂದು ಸ್ನಾನ
ಪರತತ್ವ ತಿಳಿದುಕೊಂಡರೆ ಒಂದು ಸ್ನಾನ (೨)

ತಂದೆತಾಯಿಗಳ ಸೇವೆ ಒಂದು ಸ್ನಾನ
ಮುಂದಿನ ಮಾರ್ಗ ತಿಳಿದರೊಂದು ಸ್ನಾನ
ಬಂಧನವನು ಬಿಡಿಸಿದರೊಂದು ಸ್ನಾನ
ಸಂಧಿಸಿ ತಿಳಿದುಕೊಂಡರೆ ಸೇತು ಸ್ನಾನ (೩)

ಅತ್ತೆ ಮಾವನ ಸೇವೆಯೊಂದು ಸ್ನಾನ
ಭರ್ತನ ಮಾತು ಕೇಳುವುದೊಂದು ಸ್ನಾನ
ಕ್ಷೇತ್ರಪಾತ್ರರ ಸಹವಾಸ ಒಂದು ಸ್ನಾನ
ಪಾರ್ಥಸಾರಥಿ ನಿಮ್ಮ ಧ್ಯಾನವೆ ಸ್ನಾನ (೪)

ವೇದ ಶಾಸ್ತ್ರಗಳನೋದಿದರೊಂದು ಸ್ನಾನ
ಭೇದಾಭೇದ ತಿಳಿದರೊಂದು ಸ್ನಾನ
ಸಾಧು ಸಜ್ಜನರ ಸಂಗ ಒಂದು ಸ್ನಾನ
ಪುರಂದರವಿಠಲನ ಧ್ಯಾನವೆ ಸ್ನಾನ (೫)


snAna mADirayya j~jAna tIrthadali
nAnu nIneMbahaMkArava biTTu ||pa.||

tannoLu tAne tiLidaroMdu snAna
anyAyagAri kaLedaroMdu snAna
anyAyavADadiddaroMdu snAna
cennAgi hariya nenedaroMdu snAna (1)

parasatiya bayasadiddare oMdu snAna
paraniMde mADadiddare oMdu snAna
paradravya apaharisadire oMdu snAna
paratatva tiLidukoMDare oMdu snAna (2)

taMdetAyigaLa sEve oMdu snAna
muMdina mArga tiLidaroMdu snAna
baMdhanavanu biDisidaroMdu snAna
saMdhisi tiLidukoMDare sEtu snAna (3)

atte mAvana sEveyoMdu snAna
Bartana mAtu kELuvudoMdu snAna
kShEtrapAtrara sahavAsa oMdu snAna
pArthasArathi nimma dhyAnave snAna (4)

vEda SAstragaLanOdidaroMdu snAna
BEdABEda tiLidaroMdu snAna
sAdhu sajjanara saMga oMdu snAna
puraMdaraviThalana dhyAnave snAna (5)

Leave a Reply

Your email address will not be published. Required fields are marked *

You might also like

error: Content is protected !!