Sevaka Tanada Ruchi

Composer: Shri Purandara dasaru

Smt.Nandini Sripad

ರಾಗ: ಪೂರ್ವಿಕಲ್ಯಾಣಿ ಖಂಡಛಾಪುತಾಳ

ಸೇವಕತನದ ರುಚಿಯ ಏನಳೆದ್ಯೋ ॥ ಪ ॥
ದೇವ ಹನುಮರಾಯ ವೈರಾಗ್ಯಭಾಗ್ಯ ಬೇಡಿ ॥ ಅ ಪ ॥

ಉದಧಿ ಲಂಘಿಸಿ ಸೀತೆಯ ಕಂಡು ಬಂದಾಗ ।
ಮದುವೆಯ ಮಾಡೆನ್ನಬಾರದಿತ್ತೆ , ರಾಮ॥
ಪದದಿ ಪಾಷಾಣ ಪೆಣ್ಣ ಮಾಡಿದವನಿಗೆ ।
ಇದು ಏನಾಶ್ಚರ್ಯವೋ ಹನುಮ ನೀನೊಲ್ಲದೆ ॥ 1 ॥

ಕ್ಷಣದೊಳು ಸಂಜೀವನಗಿರಿ ತಂದಾಗ ।
ಹಣ ಹೊನ್ನು ಬೇಡಲು ಕೊಡದಿಹನೆ ರಾಮ ॥
ವನಜಾಕ್ಷಿ ಸಿರಿದೇವಿ ಅರಸು ಉದಾರನಿಗೆ ।
ಘನವಾಗಿಹುದು ಏನೋ ನೀ ಬಯಸಲೊಲ್ಲದೆ ॥ 2 ॥

ಸಾರ್ವಭೌಮನು ತಾನೇ ಮೆಚ್ಚಿ ಬಂದಾಗಲೇ ।
ಊರ್ವಿಯ ಬೇಡಲು ಕೊಡದಿಹನೇ ರಾಮ ॥
ಸರ್ವವ ತೊರೆದು ಶ್ರೀಪುರಂದರವಿಠಲನ ।
ನಿರ್ವ್ಯಾಜ ಭಕುತಿಯ ಬೇಡಿಕೊಂಡ್ಯಲ್ಲದೆ ॥ 3 ॥


SrI puraMdaradAsara kRuti
rAga: pUrvikalyANi KaMDaCAputALa

sEvakatanada ruciya EnaLedyO || pa ||
dEva hanumarAya vairAgyaBAgya bEDi || a pa ||

udadhi laMGisi sIteya kaMDu baMdAga |
maduveya mADennabAraditte , rAma||
padadi pAShANa peNNa mADidavanige |
idu EnAScaryavO hanuma nInollade || 1 ||

kShaNadoLu saMjIvanagiri taMdAga |
haNa honnu bEDalu koDadihane rAma ||
vanajAkShi siridEvi arasu udAranige |
GanavAgihudu EnO nI bayasalollade || 2 ||

sArvaBaumanu tAnE mecci baMdAgalE |
Urviya bEDalu koDadihanE rAma ||
sarvava toredu SrIpuraMdaraviThalana |
nirvyAja Bakutiya bEDikoMDyallade || 3 ||

Leave a Reply

Your email address will not be published. Required fields are marked *

You might also like

error: Content is protected !!