Composer: Shri Purandara dasaru
ರಾಮಕೃಷ್ಣರು ಮನೆಗೆ ಬಂದರು ಬಾಗಿಲು ತೆಗೆಯಿರೊ ||ಪ||
ಕಾಮಧೇನು ಬಂದಂತಾಯಿತು ವರವ ಬೇಡಿರೊ ||ಅ.ಪ||
ಚೆಂಡು ಬುಗುರಿ ಚಿಣ್ಣೀ ಕೋಲು ಗಜ್ಜುಗವಾಡುತ
ದುಂಡು ಮಲ್ಲಿಗೆ ಮುಡಿದು ಕೊಳಲನೂದಿ ಪಾಡುತ
ಹಿಂಡುಪೆಣ್ಗಳ ಮುದ್ದು ಮುಖದ ಸೊಬಗ ನೋಡುತ
ಭಂಡು ಮಾಡಿ ಬಾಲೆಯರೊಡನೆ ಸರಸವಾಡುತ ||೧||
ಮಕರ ಕುಂಡಲ ನೀಲಮುತ್ತಿನ ಬಾವುಲಿಡುತಲಿ
ಕಂಕಣ ಹಾರ ತೋಳಬಂದಿ ತೊಡಿಗೆ ತೊಡುತಲಿ
ಸುಕುಮಾರ ಸುಂದರವಾದ ಉಡುಗೆ ಉಡುತಲಿ
ಮುಖದ ಕಮಲ ಮುಗುಳು ನಗೆಯ ಸುಖವ ಕೊಡುತಲಿ ||೨||
ಪೊಕ್ಕುಳಲ್ಲಿ ಅಜನ ಪಡೆದ ದೇವದೇವನು
ಚಿಕ್ಕ ಉಂಗುಷ್ಟದಲಿ ಗಂಗೆಯ ಪಡೆದನು
ಮಕ್ಕಳ ಮಾಣಿಕ್ಯ ಗುರು ಪುರಂದರವಿಠಲನು
ಅಕ್ಕರೆಯಿಂದಲಿ ಮುಕುತಿ ಕೊಡುವ ರಂಗನಾಥನು ||೩||
rAmakRuShNaru manege baMdaru bAgilu tegeyiro ||pa||
kAmadhEnu baMdaMtAyitu varava bEDiro ||a.pa||
ceMDu buguri ciNNI kOlu gajjugavADuta
duMDu mallige muDidu koLalanUdi pADuta
hiMDupeNgaLa muddu muKada sobaga nODuta
BaMDu mADi bAleyaroDane sarasavADuta ||1||
makara kuMDala nIlamuttina bAvuliDutali
kaMkaNa hAra tOLabaMdi toDige toDutali
sukumAra suMdaravAda uDuge uDutali
muKada kamala muguLu nageya suKava koDutali ||2||
pokkuLalli ajana paDeda dEvadEvanu
cikka uMguShTadali gaMgeya paDedanu
makkaLa mANikya guru puraMdaraviThalanu
akkareyiMdali mukuti koDuva raMganAthanu ||3||
Leave a Reply