Composer: Shri Pradyumna Tirtharu
ಭ್ರಷ್ಟನೆಂದಿಸಿದೆಯಾ ಕೃಷ್ಣನೇ ಎನ್ನ [ಪ]
ಭ್ರಷ್ಟನೆಂದಿನಿಸಿದ್ಯಾ ಸೃಷ್ಟಿಗೀಶನೆ ಪರ
ಮೇಷ್ಟಿ ಜನಕ ದಿವ್ಯ ದೃಷ್ಟಿ ಕೊಡದಲೆನ್ನ [ಅ.ಪ]
ನರರ ಸಂದಣಿಯಲಿ ವಿರತಿ ಮಾತಾಡಿಸಿ
ಮಾರನಾಟದಿ ಮನವೆರಗುವಂದದಿ ಮಾಡಿ (೧)
ಕಾಷಾಯ ದಂಡಿ ವೇಷವ ಧರಿಸಿಸಿ ಮುನ್ನ
ಮೋಸಪಡಿಸಿ ಸ್ತ್ರೀಯರಾಸೆ ಬಿಡಿಸದೆನ್ನ (೨)
ಸೀಲರಂದದಿ ಜಪಮಾಲೆ ಕೈಯಲಿ ಪಿಡಿಸಿ
ಕಾಳಿಮರ್ಧನ ದೇವ ಮಲಿನ ಮನವನಿತ್ತು (೩)
ಕರವಶವನೆ ಮಾಡಿ ಸರಸದಿಂ ಕಲೆಹಾಕಿ
ಮರೆಸಿ ನಿನ್ನನೆ ಕೃಷ್ಣ ನಿರಯಭಾಗಿಯ ಮಾಡಿ (೪)
ಕರುಣವಾರಿಧಿ ಎನ್ನ ಮರುಳುಗೊಳಿಸಿ ವಿಷಯ
ಶರಪಂಜರದಿ ಬಿಗಿದು ಚರಣ ತೋರಿಸದಲೆ (೫)
ಮದ ಮತ್ಸರ ಕಾಮ ಕ್ರೋಧ ಲೋಭ ಮೋಹ
ಒದಗಿಸೆನ್ನಲಿ ದೂರನಾದಿಯ ಹೇ ಮಾಧವ (೬)
ಪತಿತಾಗ್ರಣಿಯು ನಾನು ಪತಿತ ಪಾವನ ನೀನು
ಸತತ ನಿನ್ನಯ ಸಂಸ್ಮೃತಿಯ ನೀಡದಲೆನ್ನ (೭)
ದ್ವಿಜ ಅಜಮಿಳ ನಿನ್ನ ನಿಜ ನಾಮದಿಂದಲಿ
ಸುಜನನೆಂದೆನಿಸಿದ್ದು ನಿಜ ತೋರದಲೆನ್ನ (೮)
ಹೀನರೊಳೆನ್ನೆಂಥ ಹೀನ ಜನರ ಕಾಣೆ
ಸಾನುರಾಗದಿ ಕಾಯೊ ಶ್ರೀ ನರಹರಿಯೆ (೯)
BraShTaneMdisideyA kRuShNanE enna [pa]
BraShTaneMdinisidyA sRuShTigISane para
mEShTi janaka divya dRuShTi koDadalenna [a.pa]
narara saMdaNiyali virati mAtADisi
mAranATadi manaveraguvaMdadi mADi (1)
kAShAya daMDi vEShava dharisisi munna
mOsapaDisi strIyarAse biDisadenna (2)
sIlaraMdadi japamAle kaiyali piDisi
kALimardhana dEva malina manavanittu (3)
karavaSavane mADi sarasadiM kalehAki
maresi ninnane kRuShNa nirayaBAgiya mADi (4)
karuNavAridhi enna maruLugoLisi viShaya
SarapaMjaradi bigidu caraNa tOrisadale (5)
mada matsara kAma krOdha lOBa mOha
odagisennali dUranAdiya hE mAdhava (6)
patitAgraNiyu nAnu patita pAvana nInu
satata ninnaya saMsmRutiya nIDadalenna (7)
dvija ajamiLa ninna nija nAmadiMdali
sujananeMdenisiddu nija tOradalenna (8)
hInaroLenneMtha hIna janara kANe
sAnurAgadi kAyo SrI narahariye (9)
Leave a Reply