Drushti Ninna padadalli

Composer: Shri Purandara dasaru

By Smt.Shubhalakshmi Rao

ದೃಷ್ಟಿ ನಿನ್ನ ಪಾದದಲ್ಲಿ ಇಡೊ ಹಾಂಗೆ , ಧರೆ
ದುಷ್ಟ ಜನ ಸಂಗಗಳ ಬಿಡೋ ಹಾಂಗೆ
ಕೆಟ್ಟ ಮಾತು ಕಿವಿಯಿಂದ ಕೇಳದ್-ಹಾಂಗೆ ,ಮನ
ಕಟ್ಟಿ ಸದಾ ನಿನ್ನ ಧ್ಯಾನ ಬಿಡದ ಹಾಂಗೆ ||ಪ||

ದಿಟ್ಟನಾಗಿ ಕೈಯನೆತ್ತಿ ಕೊಡೊ ಹಾಂಗೆ , ಶ್ರೀ
ಕೃಷ್ಣ ನಿನ್ನ ಪೂಜೆಯನು ಮಾಡೋ ಹಾಂಗೆ
ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಂಗೆ ,ಬಲು
ಶಿಷ್ಟ ಜನ ಸೇವೆಯನು ಮಾಡೋ ಹಾಂಗೆ |೧|

ಪುಟ್ಟಿಸಿದ ತಾಯಿ ತಂದೇಯಲ್ಲೊ ನೀನು , ಒಂದು
ಹೊಟ್ಟೆಗಾಗಿ ದೈನ್ಯಪಡ ಬೇಕೆ ನಾನು
ಪಟ್ಟೆ ಪಟ್ಟಾವಳಿ ಬೇಡಲಿಲ್ಲ ನಾನು , ಎನ್ನ
ಗುಟ್ಟು ಅಭಿಮಾನಗಳ ಕಾಯೊ ನೀನು |೨|

ನೆಟ್ಟ ನೀರೊಳಗೆ ಈಸಲಾರೆ ನಾನು, ಎತ್ತಿ
ಕಟ್ಟೆ ಸೇರಿಸ ಬೇಕಯ್ಯಾ ನೀನು
ಬೆಟ್ಟದಂಥ ಪಾಪ ಹೊತ್ತಿರುವೆ ನಾನು, ಅದ
ಸುಟ್ಟು ಬಿಡು ಪುರಂದರವಿಠ್ಠಲ ನೀನು |೩|


dRuShTi ninna pAdadalli iDo hAMge , dhare
duShTa jana saMgagaLa biDO hAMge
keTTa mAtu kiviyiMda kELad-hAMge ,mana
kaTTi sadA ninna dhyAna biDada hAMge ||pa||

diTTanAgi kaiyanetti koDo hAMge , SrI
kRuShNa ninna pUjeyanu mADO hAMge
BraShTanAgi nAlvaroLu tirugada hAMge ,balu
SiShTa jana sEveyanu mADO hAMge |1|

puTTisida tAyi taMdEyallo nInu , oMdu
hoTTegAgi dainyapaDa bEke nAnu
paTTe paTTAvaLi bEDalilla nAnu , enna
guTTu aBimAnagaLa kAyo nInu |2|

neTTa nIroLage IsalAre nAnu, etti
kaTTe sErisa bEkayyA nInu
beTTadaMtha pApa hottiruve nAnu, ada
suTTu biDu puraMdaraviThThala nInu |3|

Leave a Reply

Your email address will not be published. Required fields are marked *

You might also like

error: Content is protected !!