Composer: Shri Purandara dasaru
ಅಂಬಿಗ ನಾ ನಿನ್ನ ನಂಬಿದೆ
ಜಗದಂಬಾರಮಣ ನಿನ್ನ ನಂಬಿದೆ [ಪ]
ತುಂಬಿದ ಹರಿಗೋಲಂಬಿಗ
ಅದಕೊಂಬತ್ತು ಛಿದ್ರ ನೋಡಂಬಿಗ
ಸಂಬ್ರಮದಿಂದ ನೀನಂಬಿಗ
ಅದರಿಂಬು ನೋಡಿ ನಡೆಸಂಬಿಗ [೧]
ಹೊಳೇಯ ಭರವ ನೋಡಂಬಿಗ
ಅದಕೆ ಸೆಳೆವು ಘನವಯ್ಯ ಅಂಬಿಗ
ಸುಳಿಯೊಳು ಮುಳುಗಿದೆ ಅಂಬಿಗ
ಎನ್ನ ಸೆಳೆದು ಕೊಂಡೊಯ್ಯೋ ನೀನಂಬಿಗ [೨]
ಆರು ತೆರೆಯ ನೋಡಂಬಿಗ
ಅದುಮೀರಿ ಬರುತಲಿದೆ ಅಂಬಿಗ
ಯಾರಿಂದ ಲಾಗದು ಅಂಬಿಗ
ಅದ ನಿವಾರಿಸಿ ಧಾಟಿಸೋ ಅಂಬಿಗ [೩]
ಸತ್ಯ ವೆಂಬುದೆ ಹುಟ್ಟಂಬಿಗ
ಸದಾ ಭಕ್ತಿ ಎಂಬುದೆ ಪಥವಂಬಿಗ
ಯುಕ್ತಿದಾಯಕ ನಮ್ಮ ಪುರಂದರ ವಿಠಲ,
ಮುಕ್ತಿ ಮಂಟಪಕೊಯ್ಯೋ ಅಂಬಿಗ [೪]
aMbiga nA ninna naMbide
jagadaMbAramaNa ninna naMbide [pa]
tuMbida harigOlaMbiga
adakoMbattu Cidra nODaMbiga
saMbramadiMda nInaMbiga
adariMbu nODi naDesaMbiga [1]
hoLEya bharava nODaMbiga
adake seLevu ghanavayya aMbiga
suLiyoLu muLugide aMbiga
enna seLedu koMDoyyO nInaMbiga [2]
Aru tereya nODaMbiga
adumIri barutalide aMbiga
yAriMda lAgadu aMbiga
ada nivArisi dhATisO aMbiga [3]
satya veMbude huTTaMbiga
sadA bhakti eMbude pathavaMbiga
yuktidAyaka namma puraMdara viThala,
mukti maMTapakoyyO aMbiga [4]
Leave a Reply