Composer : Shri Vijaya dasaru
ಅಡಿಗಳಿಗೊಂದಿಪೆ ಪುರಂದರ ಗುರುವೆ ॥ ಪ ॥
ಕಡು ಜ್ಞಾನ-ಭಕ್ತಿ-ವೈರಾಗ್ಯದ ನಿಧಿಯೆ ॥ ಅ.ಪ ॥
ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ ।
ಗುರು ವ್ಯಾಸರಾಯರಿಂದುಪದೇಶಗೊಂಡೆ ॥
ಎರಡೆರಡು ಲಕ್ಷದಿಪ್ಪತೈದು ಸಾವಿರ ।
ವರ ನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ॥ 1 ॥
ಗಂಗಾದಿ ಸಕಲ ತೀರ್ಥಂಗಳ ಚರಿಸಿ ತು – ।
ರಂಗವದನ ವೇದವಾಸ್ಯನ ॥
ಹಿಂಗದೆ ಮನದಲ್ಲಿ ನೆನೆದು ನೆನೆದು ಮರೆವ ।
ಮಂಗಳ ಮಹಿಮೆಯ ನುತಿಸಿ ನುತಿಸಿ ನಾ ॥ 2 ॥
ನಿನ್ನತಿಶಯಗುಣ ವರ್ಣಿಸಲಳವಲ್ಲ ।
ನಿನ್ನ ಸೇವಕನ ಸೇವಕನೆಂತೆಂದು ॥
ಪನ್ನಗಶಯನ ಮುಕುಂದ ಕರುಣ ಪ್ರ – ।
ಸನ್ನ ವಿಜಯವಿಠ್ಠಲ ಸಂಪನ್ನ ॥ 3 ॥
aDigaLigoMdipe puraMdara guruve || pa ||
kaDu j~jAna-Bakti-vairAgyada nidhiye || a.pa ||
vara madhvamata kShIrAMbudhige caMdranAde |
guru vyAsarAyariMdupadESagoMDe ||
eraDeraDu lakShadippataidu sAvira |
vara nAmAvaLi mADi harige arpiside || 1 ||
gaMgAdi sakala tIrthaMgaLa carisi tu – |
raMgavadana vEdavAsyana ||
hiMgade manadalli nenedu nenedu mareva |
maMgaLa mahimeya nutisi nutisi nA || 2 ||
ninnatiSayaguNa varNisalaLavalla |
ninna sEvakana sEvakaneMteMdu ||
pannagaSayana mukuMda karuNa pra – |
sanna vijayaviThThala saMpanna || 3 ||
Leave a Reply