Taarakka Bindige

Composer : Shri Purandara dasaru

Explanation by Shri Kesava Rao Tadipatri

ತಾರಕ್ಕ ಬಿಂದಿಗೆ ನಾ ನೀರಿಗ್-ಹೋಗುವೆ
ತಾರೇ ಬಿಂದಿಗೆಯ |
ಬಿಂದಿಗೆ ಒಡೆದರೆ ಒಂದೇ ಕಾಸು
ತಾರೇ ಬಿಂದಿಗೆಯ |ಅ.ಪ|

ರಾಮ ನಾಮವೆಂಬೊ ರಸವುಳ್ಳ ನೀರಿಗೆ
ತಾರೇ ಬಿಂದಿಗೆಯ,
ಕಾಮಿನಿಯರ ಕೂಡೆ ಏಕಾಂತವಾಡೇನು
ತಾರೇ ಬಿಂದಿಗೆಯ (೧)

ಗೋವಿಂದ ಎಂಬೊ ಗುಣವುಳ್ಳ ನೀರಿಗೆ
ತಾರೇ ಬಿಂದಿಗೆಯ
ಆವಾವ ಪರಿಯಲಿ ಅಮೃತದ ಪಾನಕೆ
ತಾರೇ ಬಿಂದಿಗೆಯ (೨)

ಬಿಂದು ಮಾಧವನ ಘಟ್ಟಕ್ಕೆ ಹೋಗುವೆ
ತಾರೇ ಬಿಂದಿಗೆಯ,
ಪುರಂದರ ವಿಟ್ಟಲಗೆ ಅಭಿಶೇಕ ಮಾಡುವೆ
ತಾರೇ ಬಿಂದಿಗೆಯ (೩)


tArakka biMdige nA nIrig-hOguve
tArE biMdigeya |
biMdige oDedare oMdE kAsu
tArE biMdigeya |a.pa|

rAma nAmaveMbo rasavuLLa nIrige
tArE biMdigeya,
kAminiyara kUDe EkAMtavADEnu
tArE biMdigeya (1)

gOviMda eMbo guNavuLLa nIrige
tArE biMdigeya
AvAva pariyali amRutada pAnake
tArE biMdigeya (2)

biMdu mAdhavana ghaTTakke hOguve
tArE biMdigeya,
puraMdara viTTalage abhishEka mADuve
tArE biMdigeya (3)

Leave a Reply

Your email address will not be published. Required fields are marked *

You might also like

error: Content is protected !!