Composer : Shri Gopala dasaru
ಮಂಗಳಂ ಮಂಗಳಂ ಭವತು ತೇ ರಮಾಪತೆ ||ಪ||
ಮಂಗಳಂ ಮಧುವೈರಿ ದೇವವರೇಣ್ಯ ||ಅಪ||
ಮಾರಜನಕ ದಿವ್ಯಸಾರ ಸುಂದರ ದೇಹ
ವಾರಿಜ ದಳನೇತ್ರ ಕಾರುಣ್ಯ ಗುಣನಿಧೆ |೧|
ಮಣಿಮಯ ಶುಭಕರ ಕನಕ ಕುಂಡಲಧರ
ಮಿನುಗುವ ಮುಕುಟ ಶೋಭನಕರ ಮೂರ್ತೆ |೨|
ವೇದ ವಿಬುಧ ವಂದ್ಯ ಗೋಪಾಲ ವಿಠ್ಠಲ
ಸಾಧು ಸಜ್ಜನಪಾಲ ಶ್ರೀದೇವಿ ಲೋಲ |೩|
maMgaLaM maMgaLaM Bavatu tE ramApate ||pa||
maMgaLaM madhuvairi dEvavarENya ||apa||
mArajanaka divyasAra suMdara dEha
vArija daLanEtra kAruNya guNanidhe |1|
maNimaya SuBakara kanaka kuMDaladhara
minuguva mukuTa SOBanakara mUrte |2|
vEda vibudha vaMdya gOpAla viThThala
sAdhu sajjanapAla SrIdEvi lOla |3|
Leave a Reply