Ninne Irulinali Chenniga

Composer : Shri Gopala dasaru

By Smt.Shubhalakshmi Rao

ಕ್ಷೀರಸಾಗರ ಬಿಟ್ಟು ಲವಣ ಸಾಗರದಲ್ಲಿ
ಮನೆಯ ಕಟ್ಟುವರೇನೋ ?
ಉತ್ತಮ ತ್ರಿಧಾಮವ ಬಿಟ್ಟು ಮರ್ತ್ಯಲೋಕದಲ್ಲಿ
ಬಂದು ಪುಟ್ಟುವರೇನೋ ?
ನಿತ್ಯ ಸರ್ವಜ್ಞ ಪ್ರಕಾಶ ಮತ್ತೆ ಯಾದವರ
ಕೂಡಿ ಆದುವುದೇನೋ ?
ನಿತ್ಯತೃಪ್ತನು ನೀನು ಮುಕ್ತರೊಡೆಯ ರಂಗ
ಮತ್ತೆ ವಿದುರನ ಮನೆಯ ಪಾಲ್ಕುಡಿವರೇನೋ ?
ಸತ್ಯ ಸಂಕಲ್ಪ ಗೋಪಾಲವಿಠಲ ನಿನ್ನ
ಕೃತ್ಯಕೊಂದು ಅನಂತಾನಂತ ನಮೋ ನಮೋ ಎಂಬೆ |


ನಿನ್ನೆ ಇರುಳಿನಲಿ ಚೆನ್ನಿಗ ಪುರುಷನು
ಎನ್ನ ಮಂದಿರಕೆ ಬಂದಿರುವ, ಇವನ್ಯಾರೆ ಅವ್ವ ||ಪ||

ಕಣ್ಣು ಬಿಡುತಲೆ ಬೆನ್ನೊಳಗಡಗಿಸಿ
ತನ್ನ ಮೋರೆತ್ತಿ ನೋಡನೆ ಬಾಯಾರಿಹನೆ
ಮಣ್ಣು ನಲುವುತಾನೆ ತನ್ನೊಳು ಕಾದಿ ಉಣದೆ
ಹೆಣ್ಣುಗಳನೆ ಮೋಹಿಸುವ ಹಯನೇರಿ ಮೆರೆವ ||೧||

ಜಲವ ಬಿಟ್ಟರೆ ಸತತ ನೆಲನೆ ಕೆದರುತಲಿಪ್ಪ
ಪಲ್ಗಿರಿದು ದಾನವ ಬೇಡುವ ಪೆತ್ತವಳನೆ ಜರಿವ
ಶಿಲೆಯ ಮಾತಾಡಿಸುವ ಕೊಳಲೂದಿ ಕೃತ್ಯವೇದ
ಹಳಿವ ಹಗೆಗಳನೆ ಸದೆಬಡಿವ ಹಯನೇರಿ ಮೆರೆವ ||೨||

ಚರಣ ರೋಮಗಳಿಲ್ಲ ಮಗನ ಮುಗಿಲೆ ಬಂದ
ಎರಡು ರೂಪದಿ ಬಾಲಕ ಬಾಹುಜ ಕುಲಗೊಯ್ಕ
ಅರಸಾಗಿ ಗೋಪಾಲವಿಠ್ಠಲ ಮೋಹ ಖಳರ ತರಿವ
ತನ್ನಾಳಾಗನೆ ಪಾರವ ಹಯನೇರಿ ಮೆರೆವ ||೩||


kShIrasAgara biTTu lavaNa sAgaradalli
maneya kaTTuvarEnO ?
uttama tridhAmava biTTu martyalOkadalli
baMdu puTTuvarEnO ?
nitya sarvaj~ja prakASa matte yAdavara
kUDi AduvudEnO ?
nityatRuptanu nInu muktaroDeya raMga
matte vidurana maneya pAlkuDivarEnO ?
satya saMkalpa gOpAlaviThala ninna
kRutyakoMdu anaMtAnaMta namO namO eMbe |


ninne iruLinali cenniga puruShanu
enna maMdirake baMdiruva, ivanyAre avva ||pa||

kaNNu biDutale bennoLagaDagisi
tanna mOretti nODane bAyArihane
maNNu naluvutAne tannoLu kAdi uNade
heNNugaLane mOhisuva hayanEri mereva ||1||

jalava biTTare satata nelane kedarutalippa
palgiridu dAnava bEDuva pettavaLane jariva
Sileya mAtADisuva koLalUdi kRutyavEda
haLiva hagegaLane sadebaDiva hayanEri mereva ||2||

caraNa rOmagaLilla magana mugile baMda
eraDu rUpadi bAlaka bAhuja kulagoyka
arasAgi gOpAlaviThThala mOha KaLara tariva
tannALAgane pArava hayanEri mereva ||3||

Leave a Reply

Your email address will not be published. Required fields are marked *

You might also like

error: Content is protected !!