Composer : Shri Jagannatha dasaru
ಗೋಪಾಲದಾಸರಾಯ ನಿನ್ನಯ ಪಾದ
ನಾ ಪೊಂದಿದೆನೋ ನಿಶ್ಚಯ | ಪ |
ಈ ಪೀಡಿಪ ತ್ರಯ ತಾಪಗಳೋಡಿಸಿ
ಕೈಪಿಡಿದೆನ್ನನು ನೀ ಪಾಲಿಸನುದಿನ | ಅ.ಪ |
ಘೋರವ್ಯಾಧಿಗಳ ನೋಡಿ ವಿಜಯರಾಯ
ಭೂರಿ ಕರುಣವ ಮಾಡಿ
ತೋರಿದರಿವರೇ ಉದ್ಧಾರಕರಂದಂದಿ-
ನಾರಭ್ಯ ತವಪಾದ ಸೇರಿದೆ ಸಲಹೆಂದು
ಸೂರಿ ಜನ ಸಂಪ್ರಿಯ ಸುಗುಣೋ-
ದಾರ ದುರುಳನ ದೋಷನಿಚಯವ
ದೂರಗೈಸೊ ದಯಾಂಬುನಿಧಿ ನಿ-
ವಾರಿಸಿ ಕರಪಿಡಿದು ಬೇಗನೆ | ೧ |
ಅಪಮೃತ್ಯುವನು ತೊರೆದೆ
ಎನ್ನೊಳಗಿದ್ದ ಅಪರಾಧಂಗಳ ಮರೆದೆ
ಚಪಲ ಚಿತ್ತನಿಗೊಲಿದು ವಿಪುಳ ಮತಿಯನಿತ್ತು
ನಿಪುಣನೆಂದೆನಿಸಿದೆ ತಪಸಿಗಳಿಂದಲಿ
ಕೃಪಣವತ್ಸಲ ನಿನ್ನ ಕರುಣಕೆ
ಉಪಮೆಗಾಣೆನೊ ಸಂತತವು
ಕಾಶ್ಯಪಿಯೊಳಗೆ
ಬುಧರಿಂದ ಜಗದಾ-ಧಿಪನ
ಕಿಂಕರನೆನಿಸಿ ಮೆರೆದೆ | ೨ |
ಎನ್ನ ಪಾಲಿಸಂದದಿ ಸಕಲ,ಪ್ರ-
ಪನ್ನರ ಸಲಹೋ ಮೋದಿ
ಅನ್ಯರಿಗೀಪರಿ ಬಿನ್ನಪಗೈಯೆ ಜ-
ಗನ್ನಾಥವಿಠಲನ ಸನ್ನುತಿಸುವ ಧೀರ
ನಿನ್ನ ನಂಬಿದ ಜನರಿಗೀ ಪರಿ
ಬನ್ನವೆ ಭಕ್ತಾನುಕಂಪಿ ಶ-
ರಣ್ಯ ಬಂದೊದಗೀ ಸಮಯದಿ ಅ-
ಹರ್ನಿಶಿ ಧ್ಯಾನಿಸುವೆ ನಿನ್ನ | ೩ |
gOpAladAsarAya ninnaya pAda
nA poMdidenO niScaya | pa |
I pIDipa traya tApagaLODisi
kaipiDidennanu nee pAlisanudina | a.pa |
GOravyAdhigaLa nODi vijayarAya
BUri karuNava mADi
tOridarivarE uddhArakaraMdaMdi-
nAraBya tavapAda sEride salaheMdu
sUri jana saMpriya suguNO-
dAra duruLana dOShanicayava
dUragaiso dayAMbunidhi ni-
vArisi karapiDidu bEgane | 1 |
apamRutyuvanu torede
ennoLagidda aparAdhaMgaLa marede
capala cittanigolidu vipuLa matiyanittu
nipuNaneMdeniside tapasigaLiMdali
kRupaNavatsala ninna karuNake
upamegANeno saMtatavu
kAshyapiyoLage
budhariMda jagadA-dhipana
kiMkaranenisi merede | 2 |
enna pAlisaMdadi sakala,pra-
pannara salahO mOdi
anyarigIpari binnapagaiye ja-
gannAthaviThalana sannutisuva dhIra
ninna naMbida janarigI pari
bannave BaktAnukaMpi Sa-
raNya baMdodagI samayadi a-
harniSi dhyAnisuve ninna | 3 |
Leave a Reply