Baagi Beduve pidiyo

Composer : Shri Shyamasundara dasaru

By Smt.Shubhalakshmi Rao
Smt.Nandini Sripad

ಬಾಗಿ ಬೇಡುವೆ ಪಿಡಿಯೊ ಬೇಗ ಕೈಯ್ಯಾ
ಬಾಗವತ ಜನಪ್ರಿಯ ಭಾಗಣ್ಣ ದಾಸಾರ್ಯ [ಪ]

ದ್ವಿಜಕುಲಾಬ್ದಿಗೆ ಪೂರ್ಣದ್ವಿಜರಾಜ-ನೆಂದೆನಿಪ
ವಿಜಯವಿಠಲ ದಾಸರೋಲುಮೆ ಪಾತ್ರ
ನಿಜಮನದಿ ನಿತ್ಯದಲಿ ಭುಜಗ ಶಯನನ ಪಾದ
ಭಜಿಪ ಭಾಗ್ಯದಿ ನಲಿವ ಸುಜನರೊಳಿಡು ಎಂದು [೧]

ನೀನೆವೆ ಗತಿ ಎಂದ ದೀನರಿಗೆ ನಾನೆಂಬ
ಹೀನಮತಿ ಕಳೆದು ಪವಮಾನ ಪಿತನ
ದ್ಯಾನಗೈಯ್ಯುವ ದಿವ್ಯ ಜ್ನಾನ ಮಾರ್ಗವ ತೋರಿ
ಸಾನುರಾಗದಿ ಪೊರೆವ ದಾನಿ ದಯವಾರಿಧಿಯೆ [೨]

ಮಂದಜನ ಸಂದೊಹ ಮಂದಾರತರು ವಿಜಿತ
ಕಂದರ್ಪ ಕಾರುಣ್ಯ ಸಿಂದು ಬಂಧೋ
ಕಂದನೆಂದರಿದೆನ್ನ ಕುಂದು ಎಣಿಸದೆ ಹೃದಯ
ಮಂದಿರದಿ ಶ್ರೀ ಶ್ಯಾಮಸುಂದರನ ತೋರೆಂದು [೩]


bAgi bEDuve piDiyo bEga kaiyyA
bAgavata janapriya BAgaNNa dAsArya [pa]

dvijakulAbdige pUrNadvijarAja-neMdenipa
vijayaviThala dAsarOlume pAtra
nijamanadi nityadali Bujaga Sayanana pAda
Bajipa BAgyadi naliva sujanaroLiDu eMdu [1]

nIneve gati eMda dInarige nAneMba
hInamati kaLedu pavamAna pitana
dyAnagaiyyuva divya jnAna mArgava tOri
sAnurAgadi poreva dAni dayavAridhiye [2]

maMdajana saMdoha maMdArataru vijita
kaMdarpa kAruNya siMdu baMdhO
kaMdaneMdaridenna kuMdu eNisade hRudaya
maMdiradi SrI SyAmasuMdarana tOreMdu [3]

Leave a Reply

Your email address will not be published. Required fields are marked *

You might also like

error: Content is protected !!