Dattatreya Suladi

Composer : Shri Vijaya dasaru

By Smt.Nandini Sripad

ಧ್ರುವತಾಳ
ದತ್ತಾ ಯೋಗೀಶ ಯೋಗಿ ಯೋಗ ಶಕ್ತಿಪ್ರದ |
ದತ್ತಾ ಪ್ರಣತರಿಗೆ ಪ್ರಣವ ಪ್ರತಿಪಾದ್ಯ |
ದತ್ತ ಸ್ವತಂತ್ರದಿಂದ ಜಗಕೆ ಸತ್ಕರ್ಮ ಪ್ರ- |
ದತ್ತ ಮಾಡಿಕೊಡುವ ದೀಪ್ತಾ ಚೂಡಾ |
ದತ್ತಾ ಚೀರಾಂಬರಗೇಯಾ ವಲ್ಕಲವಾಸ |
ದತ್ತಾ ದುರ್ವಾಸ ಚಂದ್ರ ಸಹಭವ ಭವ್ಯಹಂಸಾ |
ನಿತ್ಯ ಪ್ರಕೃತಿ ರಮಣಾ ಮೂಲಮೂರ್ತಿ |
ಅತ್ರಿನಂದನ ಕೃಷ್ಣಾಂಜನ ಬ್ರಹ್ಮಸೂತ್ರ ಪ- |
ವಿತ್ರ ಧಾರಣ ದೇವಾ ದೇವವಂದ್ಯಾ |
ಸತ್ಯಕ್ರಿಯಾ ಸತತ ಸಾವಿರ ಹಸ್ತವರದ |
ದೈತ್ಯ ಮೋಹಕ ರೂಪಾಘನ ಪ್ರತಾಪಾ |
ಅತ್ಯಂತ ಜಗದ್ಭರಿತಾ ಜನನಾದಿ ಶೂನ್ಯ ಸ- |
ರ್ವೋತ್ತಮ ಮಹಾ ಪ್ರಭುವೆ ಸ್ವಪ್ರಭಾವಾ |
ಕೀರ್ತಿ ಪಾವನ ವಪುಷ ವೈಕುಂಠವಾಸ ತಮೋ |
ವಿತ್ತ ಸುಚಿತ್ತಾ ಸಚ್ಚಿದಾನಂದಾತ್ಮಾ ಉತ್ತುಂಗ |
ವ್ಯಾಪ್ತ ಗೋಪ್ತಾ ಪ್ರಾಪ್ತಾ ಸಂತೃಪ್ತಾ |
ತಪ್ತ ಕಾಂಚನ ಗಾತ್ರಾ ನಿರ್ಜರಾಪ್ತಾ |
ಚಿತ್ರ ವಿಚಿತ್ರ ಕರ್ಮ ವಿಜಯ ವಿಠ್ಠಲರೇಯಾ |
ದತ್ತಾವತಾರ ಭಗದತ್ತಾಯುಧ ಧಾರಿ ||೧||

ಮಟ್ಟತಾಳ
ದತ್ತ ಜ್ಞಾನದತ್ತಾ ದತ್ತ ಭಕುತಿ ದತ್ತಾ |
ದತ್ತ ಶ್ರವಣ ದತ್ತಾ | ದತ್ತ ಮನನ ದತ್ತಾ |
ದತ್ತ ದಾನ ದತ್ತಾ ದತ್ತಾ ಸಾಧನ ದತ್ತಾ |
ದತ್ತ ಚಿತ್ತ ದತ್ತ ದತ್ತ ವಿರಕ್ತಿ ದತ್ತಾ |
ದತ್ತ ಮಾರ್ಗದತ್ತಾ ದತ್ತಾ ಇಷ್ಟದತ್ತಾ |
ದತ್ತ ಸರ್ವ ದತ್ತಾ | ದತ್ತ ಭೋಗ ದತ್ತಾ |
ದತ್ತಾನಂದ ದತ್ತಾ ದತ್ತಾ ತನ್ನನೇ ದತ್ತಾ |
ದತ್ತಾತ್ರೇಯ ದತ್ತ ಮೂರುತಿ ನಮ್ಮ ವಿಜಯ ವಿಠ್ಠಲರೇಯಾ |
ದತ್ತನೆಂದವನಿಗೆ ದತ್ತು ಮಗನಾಹಾ ||೨||

ತ್ರಿವಿಡಿತಾಳ
ಎಣಿಸಿ ಪೇಳುವನಾರು ನಿನ್ನ ಸ್ವಭಾವವಾ
ಅನಸೂಯ ವರಸೂನು ಕರ್ದಮ ದೌಹಿತ್ರಾ |
ಗುಣಿಸಿ ಕೊಂಡಾಡಿದ ಜನರಿಗೆ ಭೀತಿ ಕರ್ಮಾ
ಜನಿಸುವ ಬಗೆಯಿಲ್ಲ ಇಳಿಯೊಳಗೆ |ನೆನೆಸಿದವರ
ಮಸ್ತಕದಲ್ಲಿ ಸುಳಿವ | ಮನಸಿಜ ಜನಕ ಜಗನ್ಮೋಹನಾ |
ಕನಸಿನೊಳಾದರೂ ಕಳವಳಿಕೆ ಇಂದಾಡೆ |
ಮನ ಸೂರೆಗೊಡುವಾನು ಮಂದಹಾಸಾ
ಅನುಸರಿಸಿ ತಿರುಗುವಾ ಭಕ್ತರೊಡನೆ ದತ್ತಾ | ಘನ
ಶುದ್ದಾತ್ಮನು ಕಾಣೊ ಗೌರವರ್ಣಾ ಉಣಿಸುವ |
ತನ್ನಯ ನಾಮಾಮೃತವ ವಕ್ಕಣಿಸುವಂತೆ ನಿತ್ಯ
ಪ್ರೇರಿಸುವಾ | ಜನ ಸುಮ್ಮನಿರದಲೆ ಜಪಿಸಿ ಈತನ
ನಾಮಾ-| ಮಣಿಸಾರಿ ಸಾರಿಗೆಲಿ ಎಣಿಕೆ ಗೈಯ್ಯೊ |
ಗುಣ ಸಾರಾತರ ನಮ್ಮ ವಿಜಯವಿಠ್ಠಲರೇಯಾ |
ಮನಸಿನೊಳಗೆ ನಿಲುವಾ ನಂಬಿದವಗೆ ದತ್ತಾ ||೩||

ಅಟ್ಟತಾಳ
ಯೋಗಾಸನಾ ಅಕ್ಷಮಾಲಾ ಜ್ಞಾನ ಮುದ್ರ
ಯೋಗಶಾಸ್ತ್ರ ಕರ್ತ ವರ್ತಮಾನಕಾಲ
ಭೂಗೋಲ ಚರಿಸುವ ಬ್ರಹ್ಮಚರ್ಯಧಾರ್ಯಾ
ಶ್ರೀಗುರು ಅಜಗುರು ಸರ್ವಜಗದ್ಗುರು
ಭಾಗೀರಥಿ ತೀರ ಬದರಿನಿವಾಸ ಆ
ಯೋಗ ಕರ್ಮಹಾರಿ ದತ್ತ ದಾನವರಿಗೆ
ಭೋಗ ಶಾಯಿ ಮುಕ್ತಾಭೋಗ ಭಾಗಾಧೇಯಾ
ಭಾಗ ತ್ರಯಗುಣ ನಾಶ ಗುಣಾಂಬುಧಿ
ರಾಗವಿದೂರ ಸರಾಗ ಮಣಿ ನಖಾ
ಪೂಗರ್ಭನೆನಿಸುವ ಈ ತನ್ನ ತಾತನ್ನ
ಆಗಸದಲಿ ನೋಡಿ ತಾತನ್ನ ಐಶ್ವರ್ಯ
ಯಾಗಾ ತೀರ್ಥಯಾತ್ರಿ ನಾನಾ ಪುಣ್ಯ ಸಂ
ಯೋಗದಿಂದಧಿಕ ದತ್ತನ ಸ್ಮರಣೆ ಒಮ್ಮೆ
ಜಾಗು ಮಾಡದೆ ಮಾಡೆ ಮುದದಿ ಬಂದೊದಗೋದು
ಜಾಗರತನದಿಂದ ಮಹಪುಣ್ಯ ಪ್ರತಿದಿನ
ಸಾಗರ ಮಂದಿರ ವಿಜಯ ವಿಠ್ಠಲ ಭವ
ರೋಗದ ವೈದ್ಯ ವೈಲಕ್ಷಣ್ಯ ||೪||

ಆದಿತಾಳ
ಜಯ ಜಯವೆಂದು ದತ್ತಮಂತ್ರವ
ನಯಮತಿಯಿಂದ ಜಪಿಸಲು
ತ್ರಯ ಪರಿಚ್ಛೇದಕ ಛೇದನಾ
ಭಯ ಪರ್ವತ ವಿಭೇದನಾ
ಆಯುತ ದುರಿತ ರೋದನಾ
ಕ್ಷಯ ರಹಿತ ಸನ್ಮೋದನಾ
ಜಯ ಜಯವೆಂದು ದತ್ತ ಮಂತ್ರಾ
ಪ್ರಿಯವಾಗಿಪ್ಪದು ಗತಿ ಲಬ್ದಾ
ಲಯವಾಗುವುದು ಪ್ರಾರಬ್ಧ
ಜಯ ಜಯವೆನ್ನನು ಬಲುಲುಬ್ಧಾ
ತ್ರಯ ಜಗದೊಳವನೆ ತಬ್ಧಾ
ಸುಯತಿಗಳು ನುಡಿದ ಶಬ್ದಾ
ಪಯಳಾಯಂತಿದೆ ನೊಡಬ್ಧಾ
ದಯಪೂರ್ಣ ನಮಗೆ ವಿಜಯ ವಿಠ್ಠಲ ದತ್ತ
ಜಯ ಕೊಡುವದು ವಲಿದು ಬಿಡಬ್ಧ ಅಬ್ಧಾ ||೫||

ಜತೆ
ದತ್ತ ಪ್ರಧಾನ ವಿದ್ಯಾ ಸಪ್ರದಾತಾ ಪಾರ
ತಂತ್ರ ರಹಿತ ವಿಜಯ ವಿಠ್ಠಲ ಪ್ರಜ್ಞಾ ||೬||


dhruvatALa
dattA yOgISa yOgi yOga Saktiprada |
dattA praNatarige praNava pratipAdya |
datta svataMtradiMda jagake satkarma pra- |
datta mADikoDuva dIptA cUDA |
dattA cIrAMbaragEyA valkalavAsa |
dattA durvAsa caMdra sahaBava BavyahaMsA |
nitya prakRuti ramaNA mUlamUrti |
atrinaMdana kRuShNAMjana brahmasUtra pa- |
vitra dhAraNa dEvA dEvavaMdyA |
satyakriyA satata sAvira hastavarada |
daitya mOhaka rUpAGana pratApA |
atyaMta jagadBaritA jananAdi SUnya sa- |
rvOttama mahA praBuve svapraBAvA |
kIrti pAvana vapuSha vaikuMThavAsa tamO |
vitta sucittA saccidAnaMdAtmA uttuMga |
vyApta gOptA prAptA saMtRuptA |
tapta kAMcana gAtrA nirjarAptA |
citra vicitra karma vijaya viThThalarEyA |
dattAvatAra BagadattAyudha dhAri ||1||

maTTatALa
datta j~jAnadattA datta Bakuti dattA |
datta SravaNa dattA | datta manana dattA |
datta dAna dattA dattA sAdhana dattA |
datta citta datta datta virakti dattA |
datta mArgadattA dattA iShTadattA |
datta sarva dattA | datta BOga dattA |
dattAnaMda dattA dattA tannanE dattA |
dattAtrEya datta mUruti namma vijaya viThThalarEyA |
dattaneMdavanige dattu maganAhA ||2||

triviDitALa
eNisi pELuvanAru ninna svaBAvavA
anasUya varasUnu kardama dauhitrA |
guNisi koMDADida janarige BIti karmA
janisuva bageyilla iLiyoLage |nenesidavara
mastakadalli suLiva | manasija janaka jaganmOhanA |
kanasinoLAdarU kaLavaLike iMdADe |
mana sUregoDuvAnu maMdahAsA
anusarisi tiruguvA BaktaroDane dattA | Gana
SuddAtmanu kANo gauravarNA uNisuva |
tannaya nAmAmRutava vakkaNisuvaMte nitya
prErisuvA | jana summaniradale japisi Itana
nAmA-| maNisAri sArigeli eNike gaiyyo |
guNa sArAtara namma vijayaviThThalarEyA |
manasinoLage niluvA naMbidavage dattA ||3||

aTTatALa
yOgAsanA akShamAlA j~jAna mudra
yOgaSAstra karta vartamAnakAla
BUgOla carisuva brahmacaryadhAryA
SrIguru ajaguru sarvajagadguru
BAgIrathi tIra badarinivAsa A
yOga karmahAri datta dAnavarige
BOga SAyi muktABOga BAgAdhEyA
BAga trayaguNa nASa guNAMbudhi
rAgavidUra sarAga maNi naKA
pUgarBanenisuva I tanna tAtanna
Agasadali nODi tAtanna aiSvarya
yAgA tIrthayAtri nAnA puNya saM
yOgadiMdadhika dattana smaraNe omme
jAgu mADade mADe mudadi baMdodagOdu
jAgaratanadiMda mahapuNya pratidina
sAgara maMdira vijaya viThThala Bava
rOgada vaidya vailakShaNya || 4||

AditALa
jaya jayaveMdu dattamaMtrava
nayamatiyiMda japisalu
traya paricCEdaka CEdanA
Baya parvata viBEdanA
Ayuta durita rOdanA
kShaya rahita sanmOdanA
jaya jayaveMdu datta maMtrA
priyavAgippadu gati labdA
layavAguvudu prArabdha
jaya jayavennanu balulubdhA
traya jagadoLavane tabdhA
suyatigaLu nuDida SabdA
payaLAyaMtide noDabdhA
dayapUrNa namage vijaya viThThala datta
jaya koDuvadu validu biDabdha abdhA ||5||

jate
datta pradhAna vidyA sapradAtA pAra
taMtra rahita vijaya viThThala praj~jA ||6||

Leave a Reply

Your email address will not be published. Required fields are marked *

You might also like

error: Content is protected !!