Composer : Shri Karpara narahari dasaru
ಚರಣ ಕಮಲ ಭಜಿಸೋ ಮೈಲಾರ ಲಿಂಗನ
ಪುರಹರ ಸ್ವರೂಪನೆ ಎಂದು ಧ್ಯಾನಿಸೋ [ಪ]
ಸ್ಮರಿಸುವರ ಪಾತಕ ತಿಮಿರ ಭಾಸ್ಕರನೆಂದು ನೀ
ಸ್ಮರಿಸೋ ಶಿರಬಾಗಿ ನಮಿಸೋ [ಅ.ಪ]
ತುರಗವಾಹನವೇರಿ ಬರುತಿಹನ
ಧರೆಯೊಳಗೆ ಮೈಲಾಪುರ ಸುಮಂದಿರನೆಂದು |
ಕರೆಸುವನಾ ಹೊನಕೆರೆಯ ಜಲದಭಿಷೇಕದಿಂದ
ರ್ಚನೆಯ ಕೊಂಬುವನ ಶರಣರನ ಪೊರೆವನ [೧]
ಕಾಲಕಾಲದಿ ಪಾಲಕಿಯ ಉತ್ಸವದಿ ಮೆರೆಯುವನ ಅನು
ಗಾಲ ಭಕುತರ ಮ್ಯಾಳವನು ಪಾಲಿಸಲು ಬಂದಿಹನ |
ಕೇಳಿ ದ್ವರಗಳ ಕೊಡುವ ಘನ ತ್ರಿಶೂಲ ಧರಿಸಿಹನ
ಮಾಳಸಾಕಾಂತನ [೨]
ನಿಷ್ಠೆಯಿಂದಲಿ ಭಜಿಪ ಭಕುತರನ
ರಕ್ಷಿಸಲು ಕೊಪ್ಪರ ಕಟ್ಟಿಯಲಿ ಸೇವೆಯನ್ನು
ಕೊಳುತಿಹನ ಸಿರಿ ವಿಷ್ಣು ಭಕುತರ ಮನೆಗಳಲಿ
ಪೂಜೆಯನು ಕೊಂಬುವನ ಇಷ್ಟ ಪ್ರದಾತನ [೩]
ಸಂಚರಿಸುತಲಿ ದಿನಕರನು ಮಕರದಿ ಬರಲು
ಸಂಕ್ರಮಣ ಉತ್ಸವದಿ ನೋಡಲು
ನೆರೆದ ಬಹು ಜನ ರಿಂದ ಸೇವಿತನ ಗಿರಿಶಿಖರ
ಗುಂಡಿನ ಮೇಲೆ ದೀಪೋತ್ಸವದಿ ರಾಜಿತನ
ಮಹಿಮಾನ್ವಿತನ [೪]
ವಾರಿಜಾಸನ ವಿನುತ ಶುಭಚರಣ ಸರೋಜ ಕಾರ್ಪರ
ನಾರಸಿಂಹನ
ಒಲಿಮೆ ಪಡೆದಿಹನಾ ರವಿವಾರ ವಾರದಿ
ವಾದ್ಯ ವಿಭವದಿ ಶೇವೆ ಕೊಳುತಿಹನಾ ಮಾರ್ತಾಂಡದೇವನ [೫]
caraNa kamala BajisO mailAra liMgana
purahara svarUpane eMdu dhyAnisO [pa]
smarisuvara pAtaka timira BAskaraneMdu nI
smarisO SirabAgi namisO [a.pa]
turagavAhanavEri barutihana
dhareyoLage mailApura sumaMdiraneMdu |
karesuvanA honakereya jaladaBiShEkadiMda
rcaneya koMbuvana SaraNarana porevana [1]
kAlakAladi pAlakiya utsavadi mereyuvana anu
gAla Bakutara myALavanu pAlisalu baMdihana |
kELi dvaragaLa koDuva Gana triSUla dharisihana
mALasAkAMtana [2]
niShTheyiMdali Bajipa Bakutarana
rakShisalu koppara kaTTiyali sEveyannu
koLutihana siri viShNu Bakutara manegaLali
pUjeyanu koMbuvana iShTa pradAtana [3]
saMcarisutali dinakaranu makaradi baralu
saMkramaNa utsavadi nODalu
nereda bahu jana riMda sEvitana giriSiKara
guMDina mEle dIpOtsavadi rAjitana
mahimAnvitana [4]
vArijAsana vinuta SuBacaraNa sarOja kArpara
nArasiMhana
olime paDedihanA ravivAra vAradi
vAdya viBavadi SEve koLutihanA mArtAMDadEvana [5]
Leave a Reply