Vishayase bidalollado

Composer : Shri Vadirajaru

By Smt.Shubhalakshmi Rao

ವಿಷಯಾಸೆ ಬಿಡಲೊಲ್ಲದೋ ದೇವ [ಪ.]
ವಸುದೇವಸುತ ನಿನ್ನ ವಶವಾಗೋತನಕ [ಅ.ಪ.]

ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆ
ಕುದಿ ಕುದಿ ಪರರನ್ನು ಬೈದು ಸುಯಿದು
ಮುದದಿಂದ ಮಜ್ಜನವ ಮಾಡದಲೆ
ಕಂಡಕಡೆ ಒದಗಿ ಪರಸದನಕಾಗಿ ಪೋಗಿ
ಮುದದಿಂದ ಗುರು ಹಿರಿಯರಿಗೆ ನಾ ವಂದಿಸದೆ
ಕದನವನು ತೆಗೆದು ಬಂದು ನಿಂದು
ಇದೆ ಸಾಧನವೆಂದು ಉದರ ನೆವದಲಿ ತಿರುಗಿ
ಸುದತಿಯರ ಸುಖ ಬಡಿಸಿ ಮದನವೆಗ್ಗಳನಾದೆ [೧]

ದೇಶದೇಶಕ್ಕೆ ಧನದಾಸೆಗಾಗಿ ತಿರುಗಿ
ಬೇಸರದೆ ಮನೆ ಮನೆಗೆ ಪೋಗಿ ಕೂಗಿ
ಭೂಸುರೋತ್ತಮನು ನಾನೆಂದು ಪರರಮುಂದೆ
ಭೇಶಜವ ಹೇಳಿಕೊಂಡು ಭಂಡು
ಬೇಸರವ ಗೊಳಿಸಿ ನಿರ್ದೋಶಿ ನೀನೆಂದವನ
ಹೇಸದಲೆ ವಾಸಿ ಪೊಗಳಿ ಬೊಗಳಿ
ಈಸುಪರಿಯಲಿ ಧನವ ತಂದು ಕೊಳನೆ ಹಾಕಿ ಈ
ಸತಿಸುತರಿಗೆ ಗತಿಯೆಂದು ಗುಣಿಸಿದೆನೊ [೨]

ಪರರ ಸೌಭಾಗ್ಯ ಮಕ್ಕಳುಗಳನು ನಾ ಕಂಡು
ಮರುಗಿ ಮನದೊಳಗೆ ಸೊರಗಿ ಕರಗಿ
ತೆರ ತೆರದಿ ಪರರಂಗನೆಯರ ಚೆಲ್ವಿಕೆ ಕಂಡು
ಭರದಿಂದ ಕಣ್ಣಿಂದ ನೋಡಿ ಬಾಡಿ
ಎರಗಿ ಮನ ಅವರಲ್ಲಿ ಏಕಾಂತದಲಿ ಸೇರಿ ಕರದಿ
ಸನ್ನೆಯನು ಮಾಡಿ ಕೂಡಿ
ಹೊರಗೆ ಗುಣವಂತನೆಂದೆನಿಸಿ ಧರೆಯೊಳಗೆ
ಚರಿಸಿ ನಿನ್ನಂಘ್ರಿಯನು ನಾ ಮರೆದೆ ದೇವ [೩]

ಓದಿದೆನು ವಿದ್ಯೆಗಳ ಓದನದ ಬಯಕೆಯಲಿ ವೇದ
ಶಾಸ್ತ್ರಗಳನ್ನು ಪಠಿಸಿ ನಟಿಸಿ
ಕಾದುವೆನು ತರ್ಕ ವ್ಯಾಕರಣಾದಿ ಬಲದಿಂದ ಬೀದಿ
ಬೀದಿಯೊಳು ಚರಿಸಿ ಅರಸಿ
ಮಾಧವನ ಸ್ಮರಿಸದಲೆ ಪರರ
ಅನ್ನವನುಂಡು ಶೋಧಿಸದೆ ಪುಣ್ಯಪಾಪ ಲೇಪ
ಕ್ರೋಧದಿಂದಲಿ ಇನಿತು ಕುಧರ್ಮದಲಿ
ಯಮನವರ ಬಾಧೆಗೆ ಗುರಿಯಾಗಿ
ಸತ್ಧರ್ಮವನು ಮರೆದೆ [೪]

ಕಾಯದಾಸೆಗಳಿಂದ ನ್ಯಾಯವನು
ಬಯಸದನ್ಯಾಯವನು ಚಿಂತಿಸುತ್ತ ನಿತ್ಯ
ಹೇಯವಿಲ್ಲದೆ ಸ್ನಾನ ಸಂಧ್ಯಾನಗಳ ತೊರೆದು
ತೋಯಿಸದೆ ದೇಹವನ್ನು ಇನ್ನು
ಮಾಯ ಮೋಸಗಳಿಂದ ಬಾಯಿಗೆ ಬೇಕಾದ್ದು
ಆಯಾಸಪಟ್ಟು ತಂದು ತಿಂದು
ಶ್ರೀಯರಸ ಹಯವದನ ರಾಯನೆ ನಿನ್ನ
ಮಾಯವನು ತಿಳಿಯದನ್ಯಾಯದಲಿ ಕೆಟ್ಟೆ [೫]


viShayAse biDalolladO dEva [pa.]
vasudEvasuta ninna vaSavAgOtanaka [a.pa.]

udayadali eddu haripadagaLanu smarisadale
kudi kudi pararannu baidu suyidu
mudadiMda majjanava mADadale
kaMDakaDe odagi parasadanakAgi pOgi
mudadiMda guru hiriyarige nA vaMdisade
kadanavanu tegedu baMdu niMdu
ide sAdhanaveMdu udara nevadali tirugi
sudatiyara suKa baDisi madanaveggaLanAde [1]

dESadESakke dhanadAsegAgi tirugi
bEsarade mane manege pOgi kUgi
BUsurOttamanu nAneMdu pararamuMde
bhEshajava hELikoMDu BaMDu
bEsarava goLisi nirdOshi neeneMdavana
hEsadale vAsi pogaLi bogaLi
Isupariyali dhanava taMdu koLane hAki I
satisutarige gatiyeMdu guNisideno [2]

parara sauBAgya makkaLugaLanu nA kaMDu
marugi manadoLage soragi karagi
tera teradi pararaMganeyara celvike kaMDu
bharadiMda kaNNiMda nODi bADi
eragi mana avaralli EkAMtadali sEri karadi
sanneyanu mADi kUDi
horage guNavaMtaneMdenisi dhareyoLage
carisi ninnaMghriyanu nA marede dEva [3]

Odidenu vidyegaLa Odanada bayakeyali vEda
SAstragaLannu paThisi naTisi
kAduvenu tarka vyAkaraNAdi baladiMda bIdi
bIdiyoLu carisi arasi
mAdhavana smarisadale parara
annavanuMDu SOdhisade puNyapApa lEpa
krOdhadiMdali initu kudharmadali
yamanavara bAdhege guriyAgi
satdharmavanu marede [4]

kAyadAsegaLiMda nyAyavanu
bayasadanyAyavanu ciMtisutta nitya
hEyavillade snAna saMdhyAnagaLa toredu
tOyisade dEhavannu innu
mAya mOsagaLiMda bAyige bEkAddu
AyAsapaTTu taMdu tiMdu
SrIyarasa hayavadana rAyane ninna
mAyavanu tiLiyadanyAyadali keTTe [5]

Leave a Reply

Your email address will not be published. Required fields are marked *

You might also like

error: Content is protected !!