Composer : Shri Purandara dasaru
ರಂಗನಾಯಕ ರಾಜೀವ ಲೋಚನ
ರಮಣನೆ ಬೆಳಗಾಯಿತು ಏಳೆನ್ನುತ
ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು
ಶೃಂಗಾರದ ನಿದ್ದೆ ಸಾಕೆನ್ನುತ | ಪ |
ಪಕ್ಷಿರಾಜನು ಬಂದು ಬಾಗಿಲಲ್ಲಿ ನಿಂದು
ಅಕ್ಷಿ ತೆರೆದು ಬೇಗ ಈಕ್ಷಿಸೆಂದು
ಪಕ್ಷಿ ಜಾತಿಗಳೆಲ್ಲ ಚಿಲಿಪಿಲಿ ಗುಟ್ಟುತ್ತ
ಸೂಕ್ಷ್ಮದಲಿ ನಿನ್ನ ಸ್ಮರಿಸುವವೋ ಕೃಷ್ಣ || ೧ ||
ಸನಕ ಸನಂದನ ಸನತ್ಸುಜಾತರು ಬಂದು
ವಿನಯದಿಂ ಕರ ಮುಗಿದು ಓಲೈಪರು
ಘನ ಶುನಕ ಶೌನಕ ವ್ಯಾಸ ವಾಲ್ಮೀಕರು
ನೆನೆದು ನೆನೆದು ಕೊಂಡಾಡುವರು ಹರಿಯೇ || ೨ ||
ಸುರರು ಕಿನ್ನರರು ಕಿಂಪುರುಷರು
ಉರಗರು ಪರಿಪರಿಯಲಿ ನಿನ್ನ ಸ್ಮರಿಸುವರು
ಅರುಣನು ಬಂದು ಉದಯಾಚಲದಲಿ ನಿಂದು
ಕಿರಣ ತೋರುವನು ಭಾಸ್ಕರನು ಶ್ರೀಹರಿಯೆ || ೩ ||
ಪದುಮನಾಭನೆ ನಿನ್ನ ನಾಮಾಮೃತವನ್ನು
ಪದುಮಾಕ್ಷಿಯರು ತಮ್ಮ ಗೃಹದೊಳಗೆ
ಉದಯದೊಳೆದ್ದು ಸವಿದಾಡುತ್ತ ಪಾಡುತ್ತ
ದಧಿಯ ಕಡೆವರೇಳೋ ಮಧುಸೂದನ ಕೃಷ್ಣ || ೪ ||
ಮುರಮಥನನೆ ನಿನ್ನ ಚರಣದ ಸೇವೆಯ
ಕರುಣಿಸ ಬೇಕೆಂದು ತರುಣಿಯರು
ಪರಿಪರಿಯಿಂದಲೆ ಸ್ಮರಿಸಿ ಹಾರೈಪರು
ಪುರಂದರವಿಠಲ ನೀನೇಳೋ ಶ್ರೀಹರಿಯೆ || ೫ ||
raMganAyaka rAjIva lOcana
ramaNane beLagAyitu ELennuta
aMgane lakumi tA patiyanebbisidaLu
SRuMgArada nidde sAkennuta | pa |
pakShirAjanu baMdu bAgilalli niMdu
akShi teredu bEga IkShiseMdu
pakShi jAtigaLella cilipili guTTutta
sUkShmadali ninna smarisuvavO kRuShNa || 1 ||
sanaka sanaMdana sanatsujAtaru baMdu
vinayadiM kara mugidu Olaiparu
Gana Sunaka Saunaka vyAsa vAlmIkaru
nenedu nenedu koMDADuvaru hariyE || 2 ||
suraru kinnararu kiMpuruSharu
uragaru paripariyali ninna smarisuvaru
aruNanu baMdu udayAcaladali niMdu
kiraNa tOruvanu BAskaranu SrIhariye || 3 ||
padumanABane ninna nAmAmRutavannu
padumAkShiyaru tamma gRuhadoLage
udayadoLeddu savidADutta pADutta
dadhiya kaDevarELO madhusUdana kRuShNa || 4 ||
muramathanane ninna caraNada sEveya
karuNisa bEkeMdu taruNiyaru
paripariyiMdale smarisi hAraiparu
puraMdaraviThala nInELO SrIhariye || 5 ||
Leave a Reply