Composer : Shri Narahari Teertharu
ಹರಿಯೇ ಇದು ಸರಿಯೇ
ಚರಣ ಸೇವಕನಲ್ಲಿ ಕರುಣೆ ಬಾರದ್ಯಾಕೆ ||ಪ||
ಪತಿತನೆಂದು ಶ್ರೀಪತಿ ರಕ್ಷಿಸದಿರೆ
ವಿತತವಾಹುದೆ ನಿನ್ನ ಪತಿತ ಪಾವನ ಕೀರ್ತಿ |
ಶಕ್ತ ನೀನಾಗಿದ್ದು ಭಕ್ತನುಪೇಕ್ಷಿಸೆ
ಭಕ್ತ ವತ್ಸಲ ನಾಮ ವ್ಯರ್ಥವಾಗದೆ ||೧||
ದಿಗಿಲಿಲ್ಲದೆ ಒದ್ದ ಭೃಗುವ ಪಾಲಿಸಿದೆ
ನಗಧರ ಎನ್ನ ಬಿಡುವ ಬಗೆ ಏನಿದು |
ಹೇಯ ಅಜಾಮಿಳನ ಕಾಯಲಿಲ್ಲೆ ಸ್ವ
ಕೀಯನೆ ನಾ ಪರಕೀಯನೆ ನಿನಗೆ ||೨||
ಉಂಟು ಹಿರಣ್ಯಕನ ಕಂಟಕ ಬಿಡಿಸಿದ್ದು
ನೆಂಟನೆ ನಿನಗೆ ಬಂಟ ನಾನಲ್ಲವೆ |
ಕೆಟ್ಟ ಅಹಲ್ಯೆಯ ದಿಟ್ಟ ಪಾಲಿಸಿದೆ
ಕೊಟ್ಟದ್ದು ಅವಳೇನು ಬಿಟ್ಟದ್ದು ನಾನೇನು ||೩||
ದೊರೆ ನಿನ್ನ ಮನಸಿಗೆ ಸರಿ ಬಂದಂತೆ ಮಾಡು
ಮೊರೆ ಹೊಕ್ಕೆನು ನಾ ನರಹರಿ ಪೂರ್ಣನೆ ||೪||
hariyE idu sariyE
caraNa sEvakanalli karuNe bAradyAke ||pa||
patitaneMdu SrIpati rakShisadire
vitatavAhude ninna patita pAvana kIrti |
Sakta nInAgiddu BaktanupEkShise
Bakta vatsala nAma vyarthavAgade ||1||
digilillade odda BRuguva pAliside
nagadhara enna biDuva bage Enidu |
hEya ajAmiLana kAyalille sva
kIyane nA parakIyane ninage ||2||
uMTu hiraNyakana kaMTaka biDisiddu
neMTane ninage baMTa nAnallave |
keTTa ahalyeya diTTa pAliside
koTTaddu avaLEnu biTTaddu nAnEnu ||3||
dore ninna manasige sari baMdaMte mADu
more hokkenu nA narahari pUrNane ||4||
Leave a Reply